18 – 45 ವಯಸ್ಸಿನ ಎಲ್ಲ ಜನರು ಕೋವಿಡ್ ಲಸಿಕೆ ಹಾಕಿಸಿಕೊಳ್ಳುವಂತೆ ಉಡುಪಿ ಜಿಲ್ಲಾ ಬಿ.ಜೆ.ಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷರಾದ ಶ್ರೀಮತಿ ವಿಜೇತಾ ವಿದ್ಯಾ ಪೈ ಅವರು ತಿಳಿಸಿದ್ದಾರೆ.

ವರದಿ-ಕುಮಾರ್ ನಾಯ್ಕ.ಭಟ್ಕಳ

ರಾಜ್ಯ ಸುದ್ದಿ 

 

CHETAN KENDULI

ಕಾರ್ಕಳ-ಆತ್ಮೀಯ ಬಂಧುಗಳೇ, ನನ್ನ ಪ್ರೀತಿಯ ಉಡುಪಿ ಹಾಗೂ ಕಾರ್ಕಳ , ಅಜೆಕಾರು ಭಾಗದ ಜನರೇ ಕರೋನ ಮಹಾಮಾರಿ ಹಲವರ ಜೀವ ಹಿಂಡುತ್ತಿದೆ ಹಾಗೂ ಕೆಲವರ ಪ್ರಾಣಕ್ಕೂ ಅಪಾಯಕಾರಿ ಆಗಿದೆ. ಇದರೊಂದಿಗೆ ಕೆಲವರು ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಕೋವಿಡ್ ಲಸಿಕೆ ಬಗ್ಗೆ ಅಪಪ್ರಚಾರ ಮಾಡಿ ಅಮಾಯಕರ ಜೀವದೊಂದಿಗೆ ಚೆಲ್ಲಾಟವಾಡಿ ಕೀಳು ಮಟ್ಟದ ರಾಜಕಾರಣ ಮಾಡುತ್ತಿದ್ದಾರೆ. ಪ್ರೀತಿಯ ಜನರೇ ಕೋವಿಡ್ ಲಸಿಕೆ ಹಾಕಿಸಿಕೊಳ್ಳುವುದರಿಂದ ಯಾವುದೇ ಅಡ್ಡ ಪರಿಣಾಮ ಆಗುವುದಿಲ್ಲ. ಬಿ.ಪಿ , ಶುಗರ್ , ಯಾವುದೇ ಸಣ್ಣ ಪುಟ್ಟ ಕಾಯಿಲೆಗಳು ಇದ್ದರು ಲಸಿಕೆ ಹಾಕಿಸಿಕೊಳ್ಳಬಹುದು.

ದಯವಿಟ್ಟು ಯಾರು ಕೂಡ ಪ್ರಚಾರಕ್ಕೆ ಕಿವಿಕೊಡದೆ ಲಸಿಕೆ ಹಾಕಿಸಿಕೊಳ್ಳಿ, ಯಾಕೆಂದರೆ ಜೀವ ಅಮೂಲ್ಯವಾದದು,ಇಂದು ಅಪಪ್ರಚಾರ ಮಾಡಿದವರೆ ನಾಳೆ ಲಸಿಕೆ ಹಾಕಿಸಿಕೊಂಡು ಬುದ್ಧಿವಂತರೇನಿಸಿಕೊಳ್ಳುತ್ತಿದ್ದಾರೆ. ದಯವಿಟ್ಟು ಕೋವಿಡ ಲಸಿಕೆ ಬಗ್ಗೆ ಯಾರು ಕೂಡ ಅಪಪ್ರಚಾರ ಮಾಡಿ ಅಮಾಯಕ ಜನರ ಜೀವದ ಜೊತೆ ಚೆಲ್ಲಾಟ ಆಡಬಾರದೆಂದು ಉಡುಪಿ ಜಿಲ್ಲಾ ಬಿ.ಜೆ.ಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷರಾದ ಶ್ರೀಮತಿ ವಿಜೇತಾ ವಿದ್ಯಾ ಪೈ ಮನವಿ ಮಾಡಿ ಕೊಂಡಿದ್ದಾರೆ.

Be the first to comment

Leave a Reply

Your email address will not be published.


*