ರಾಜ್ಯ ಸುದ್ದಿಗಳು
ಮುದ್ದೇಬಿಹಾಳ:
ಕೊರೊನಾ ಸಂಕಷ್ಟದ ಸಮಯದಲ್ಲಿ ಆರ್ಥಿಕವಾಗಿ ಕುಸಿತಗೊಂಡು ಮಕ್ಕಳ ವಿದ್ಯಾಭ್ಯಾಸಕ್ಕೂ ಹಣವಿಲ್ಲದ ವಿಷಯವನ್ನು ತಿಳಿದು ಬಡ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡುವುದಾಗಿ ಘೋಷಣೆ ಮಾಡಿದ್ದ ಮುದ್ದೇಬಿಹಾಳ ಪಟ್ಟಣದ ಅಹಿಲ್ಯಾದೇವಿ ಹೋಳ್ಕರ ಶಿಕ್ಷಣ ಸಂಸ್ಥೆಗೆ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕಗಳನ್ನು ಗಳಿಸುವ ಮೂಲಕ ಸಂಸ್ಥೆಗೆ ಹಿರಿಮೆ ತಂದಿದ್ದಾರೆ.
ಹೌದು, ಮುದ್ದೇಬಿಹಾಳದಲ್ಲಿ ಮೊದಲ ಹಂತವಾಗಿ ಅಹಿಲ್ಯಾದೇವಿ ಹೋಳ್ಕರ ಶಿಕ್ಷಣ ಸಂಸ್ಥೆಯಿಂದ ಪಿಯು ಕಾಲೇಜು ಪ್ರಾರಂಭಿಸಿ ಅತ್ಯತ್ತಮ ಸಾಧನೆ ಮಾಡಿದ ನಂತರ ಇದನ್ನು ಗ್ರಾಮೀಣ ಮಟ್ಟದಲ್ಲೂ ವಿಸ್ತರಣೆ ಮಾಡುವ ಉದ್ದೇಶದಿಂದ ತಾಲೂಕಿನ ಕೋಳೂರ, ಅಡವಿ ಸೋಮನಾಳ ಗ್ರಾಮಗಳಲ್ಲಿ ನೂತನ ಶಾಲೆಗಳನ್ನು ಪ್ರಾರಂಭಿಸಲಾಗಿದೆ. ಪ್ರಾರಂಭದ ಮೊದಲ ಹಂತದಲ್ಲಿಯೇ ಸಂಸ್ಥೆಯ ಕಾರ್ಯದರ್ಶಿ ಮಲ್ಲಿಕಾರ್ಜುನ ಮದರಿಯವರು ಕೊರೊನಾ ಸಂಕಷ್ಟದಲ್ಲಿ ಮೊದಲ ವರ್ಷ ಉಷಿತವಾಗಿ ಶಿಕ್ಷಣವನ್ನು ನೀಡುವುದಾಗಿ ಘೋಷಣೆ ಮಾಡಿ ಶಿಕ್ಷಣ ದಾನಿಗಳಾಗಿದ್ದಾರೆ.
800 ವಿದ್ಯಾರ್ಥಿಗಳ ದಾಖಲಾಯಿತಿ: ಇನ್ನೂ ಹೆಚ್ಚಿನ ಅನುಕೂಲ ಮಾಡಿದ ಸಂಸ್ಥೆ
ಕೊರೊನಾ ಸಂಕಷ್ಟದಲ್ಲಿ ಸಿಲುಕಿದ ಕುಟುಂಬಗಳ ಮಕ್ಕಳಿಗೆ ಒಂದು ವರ್ಷ ಉಚಿತ ಶಿಕ್ಷಣ ನೀಡುವುದಾಗಿ ಹೇಳಿರುವ ಅಭ್ಯುದಯ ಶಾಲೆಗಳಿಗೆ ಈಗಾಗಲೇ 800ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರವೇಶವನ್ನು ಪಡೆದಿದ್ದಾರೆ. ಇದನ್ನು ಗಮನಿಸಿದ ಸಂಸ್ಥೆಯ ಕಾರ್ಯದರ್ಶಿ ಎಂ.ಎನ್.ಮದರಿ ಬಿಪಿಎಲ್ ಕಾರ್ಡ ಹೊಂದಿದ ಕುಟುಂಬದ ಮಕ್ಕಳಿಗೆ ಬ್ರಲಿಯಂಟ್ ಅವಾರ್ಡ ಸ್ಪರ್ಧಾತ್ಮಕ ಪರೀಕ್ಷಯನ್ನಿಟ್ಟು ಪರೀಕ್ಷೆಯಲ್ಲಿ ಪಾಸಾದ ಮಕ್ಕಳಿಗೆ 2 ವರ್ಷದ ವರೆಗೂ ಉಚಿತ ಶಿಕ್ಷಣದೊಂದಿಗೆ ವಸತಿಯನ್ನೂ ಉಚಿತವಾಗಿ ನೀಡುವ ನಿರ್ಧಾರ ಮಾಡಿದ್ದು ಈಗಾಗಲೇ ಈ ಯೋಜನೆಯಲ್ಲಿ ಪಾಸಾಗಿ 21 ವಿದ್ಯಾರ್ಥಿಗಳು ಶಾಲಾ ಪ್ರವೇಶವನ್ನು ಪಡೆದಿದ್ದಾರೆ.
ರಾಜ್ಯದ ಇತರೆ ಶಿಕ್ಷಣ ಸಂಸ್ಥೆಗಳಿಗೆ ಮಾದರಿ:
ಕೊರೊನಾ ಮತ್ತು ಬಡ ಮಕ್ಕಳಿಗೆ ಉಚಿತ ಶಿಕ್ಷಣದ ಘೋಷಣೆ ಮಾಡಿದ ಅಹಿಲ್ಯಾದೇವಿ ಹೋಳ್ಕರ ಶಿಕ್ಷಣ ಸಂಸ್ಥೆಯು ಇನ್ನೂ ಒಂದು ಹೆಜ್ಜೆ ಮುಂದೆ ಬಂದಿದ್ದು ಯಾವುದೇ ಪಾಲಕರು ಪೋಷಕರಿಲ್ಲದ ಮಕ್ಕಳಿಗೆ ಸಂಸ್ಥೆಯಡಿಯಲ್ಲಿ ಎಲ್‌ಕೆಜಿಯಿಂದ ಪದವಿ ಶಿಕ್ಷಣದವರೆಗೂ ವಸತಿ ಸಹಿತ ಉಚಿತ ಶಿಕ್ಷಣವನ್ನು ನೀಡಲಾಗುವುದು ಎಂದು ಘೋಷಣೆ ಮಾಡಿ ರಾಜ್ಯದ ಇತರೆ ಶಿಕ್ಷಣ ಸಂಸ್ಥೆಗಳಿಗೆ ಮಾದರಿಯಾಗಿದೆ.
ಅತ್ಯತ್ತಮ ಶಿಕ್ಷಕರಿಂದ ಬೋಧನೆ:
ಉಚಿತ ಶಿಕ್ಷಣ ಘೋಷಣೆ ಮಾಡಿರುವ ಅಹಿಲ್ಯಾದೇವಿ ಹೋಳ್ಕರ ಶಿಕ್ಷಣ ಸಂಸ್ಥೆಯು ಮಕ್ಕಳಿಗೆ ಪಠ್ಯಭೋದನೆ ಮಾಡುವುದಲ್ಲಿ ಯಾವುದೇ ರೀತಿಯ ಕಡಿಮೆ ಮಾಡದೇ ಕೇರಳ, ಕಾರವಾರ, ಆಂದ್ರ ರಾಜ್ಯದ ಹಾಗೂ ಸ್ಥಳೀಯ ಅತ್ಯತ್ತಮ ಶಿಕ್ಷಕರನ್ನು ನೇಮಕ ಮಾಡಿ ಪಠ್ಯ ಭೋದನೆ ಮಾಡಿಸಲಾಗುತ್ತಿದೆ. ಅಲ್ಲದೇ ಪ್ರಾಥಮಿಕ ಹಂತದಿಂದಲೇ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆಯೂ ಮಾಹಿತಿ ನೀಡಲಾಗುತ್ತಿದೆ ಎಂದು ಶಾಲಾ ಮುಖ್ಯಸ್ಥರು ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಸಾಧನೆ:
ಅಭ್ಯುದಯ ಪಿಯು ಕಾಲೇಜಿನ ಒಟ್ಟೂ 164 ವಿದ್ಯಾರ್ಥಿಗಳಲ್ಲಿ 63 ಅತ್ಯುತ್ತಮ, 99 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ. ಇಬ್ಬರು ದ್ವಿತೀಯ ದರ್ಜೆಯಲ್ಲಿ ಪಾಸಾಗಿದ್ದಾರೆ. ವಿದ್ಯಾರ್ಥಿಗಳಾದ ಬಸಮ್ಮ ಇಂಗಳಗೇರಿ, ಬೇಬಿಆಯಿಶಾ ಬಾಗವಾನ, ಹರ್ಷಿತಾ ಬಿರಾದಾರ ಹಾಗೂ ರಕ್ಷಿತಾ ಬಿರಾದಾರ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ಇನ್ನೂ ಸ್ಪರ್ಧಾತ್ಮಕ ಪರೀಕ್ಷೆಗಳಾದ ನೀಟ್‌ನಲ್ಲಿ ಇಬ್ಬರು, ಎಇಇಯಲ್ಲಿ 3 ಹಾಗೂ ಸಿಇಟಿಯಲ್ಲಿ 4 ವಿದ್ಯಾರ್ಥಿಗಳು ಅತ್ಯತ್ತಮ ಸಾಧನೆ ಮಾಡಿದ್ದಾರೆ.
“ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದ ಸಾಕಷ್ಟು ಬಡ ಕುಟುಂಬಗಳಿವೆ. ಕೊರೊನಾ ಸಂಕಷ್ಟದಿಂದ ಹೊರ ಬಂದಿರುವ ಇಂತಹ ಕುಟುಂಬದ ಮಕ್ಕಳು ಶಿಕ್ಷಣದಿಂದ ವಂಚಿತಗೊಳ್ಳಬಾರದು ಎಂಬ ಉದ್ದೇಶದಿಂದ ನಮ್ಮ ಸಂಸ್ಥೆಯಿಂದ ಉಚಿತ ಶಿಕ್ಷಣದ ನಿರ್ಧಾರವನ್ನು ಮಾಡಿದ್ದೇವೆ. ಅಲ್ಲದೇ ಇನ್ನೂ ಅನೇಕ ಪ್ರತಿಭೆಗಳಿಗೂ ವಿವಿಧ ಯೋಜನೆಯಲ್ಲಿ ಉಚಿತ ಶಿಕ್ಷಣ ನೀಡಲು ನಿರ್ಧಾರ ಮಾಡಿದ್ದೇವೆ. ನಮ್ಮ ಸಂಸ್ಥೆಯ ರೂಪರೇಶಿಗಳಿಗೆ ಪಿಯು ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿ ಸಾರ್ಥಕ ಮಾಡಿದ್ದಾರೆ.”
-ಮಲ್ಲಿಕಾರ್ಜುನ ಮದರಿ,
ಕಾರ್ಯದರ್ಶಿ,
ಅಹಿಲ್ಯಾದೇವಿ ಹೋಳ್ಕರ ಶಿಕ್ಷಣ ಸಂಸ್ಥೆ, ಮುದ್ದೇಬಿಹಾಳ.
Be the first to comment