ರಾಜ್ಯ ಸುದ್ದಿಗಳು
ಮಾಗಡಿ
ವಾಹನ ಸವಾರರ ಬಳಿ ಹಣವನ್ನು ಟೋಲ್ ಹೆಸರಿನಲ್ಲಿ ಹಣವನ್ನು ರಕ್ತದಂತೆ ಹೀರುತ್ತೀರುವ ಮಾಗಡಿ ತಾಲ್ಲೂಕಿನ ಸೋಲೂರು ಹೋಬಳಿಯ ಗುಡೇಮಾರನಹಳ್ಳಿ ಹತ್ತಿರ ಇರುವ ಸುಂಕ ವಸೂಲಾತಿ ಕೇಂದ್ರ (ಟೋಲ್ ಪ್ಲಾಜಾ)ವನ್ನು ತೆರವುಗೊಳಿಸುವಂತೆ ತಾಲ್ಲೂಕು ಕಚೇರಿಯಲ್ಲಿ ತಹಸೀಲ್ದಾರ್ ಗ್ರೇಟ್ 2 ರವನ್ನು ಭೇಟಿ ಮನವಿ ಸಲ್ಲಿಸಲಾಯಿತು,ಇದೇ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಣಧೀರರ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಶಂಕರ್ ಗೌಡ್ರು.ಕೆ.ಆರ್ ರವರು ರಾಜ್ಯದಲ್ಲಿ ಆರಾಜಕತೆ ತಂಡವಾಡುತ್ತಿದೆ, ರಸ್ತೆ ತೆರಿಗೆ ಹೆಸರಿನಲ್ಲಿ ವಾಹನ ಹೆಸರಿನಲ್ಲಿ ಶೇಕಡಾ 10 ರಷ್ಟುರಿಂದ ಶೇಕಡಾ 18 ರಷ್ಟು ಹಣವನ್ನು ಪಡೆದರು ಸಹ ವಾಹನ ಸವಾರರ ಬಳಿ ರಸ್ತೆಯಲ್ಲಿ ಟೋಲ್ ಹೆಸರಿನಲ್ಲಿ ಹಣ ವಸೂಲಿ ಮಾಡುತ್ತಿರುವುದು ಸರ್ಕಾರಗಳ ಹಗಲು ದರೋಡೆಗೆ ಹಿಡಿದ ಕನ್ನಡಿಯಂತಿದೆ, ಕರ್ನಾಟಕ ಸರ್ಕಾರ ಬೇಷರತ್ತಾಗಿ ರಾಜ್ಯ ಹೆದ್ದಾರಿಗಳಲ್ಲಿ ಇರುವಂತಹ ಸುಂಕ ವಸೂಲಾತಿ ಕೇಂದ್ರಗಳನ್ನು (ಟೋಲ್ ಪ್ಲಾಜಾ ) ತೆರವು ಮಾಡಬೇಕು ಇಲ್ಲವಾದಲ್ಲಿ ನಮ್ಮ ಸಂಘಟನೆಯಾದ ಕರ್ನಾಟಕ ರಣಧೀರರ ವೇದಿಕೆ ಹಾಗೂ ಚೇತನ್ ಗೌಡ ನೇತೃತ್ವದ ಕನ್ನಡ ರಣಧೀರರ ಪಡೆ ಸಂಘಟನೆ ಸೇರಿದಂತೆ ಇನ್ನಿತರ ಪ್ರಗತಿಪರ ಸಂಘಟನೆಗಳೊಂದಿಗೆ ನಾವುಗಳೇ (ಟೋಲ್ ಪ್ಲಾಜಾ )ಸುಂಕ ವಸೂಲಾತಿ ಕೇಂದ್ರಗಳನ್ನು ತೆರವು ಮಾಡುತ್ತೇವೆ ಎಂದು ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಶಂಕರ್ ಗೌಡ್ರು.ಕೆ..ಆರ್ ಪತ್ರಿಕೆಗೆ ಪ್ರತಿಕ್ರೀಯಿಸಿದರು.
Be the first to comment