ಅಲ್ಪಸಂಖ್ಯಾತ ಮುಸ್ಲಿಂ ಮಹಿಳೆಯರು ಸರಕಾರದ ಸೌಲಭ್ಯ ಪಡೆಯಿರಿ – ಬಿಕೆಎಸ್ ಪ್ರತಿಷ್ಠಾನದ ವತಿಯಿಂದ ಅರಿವು

ವರದಿ ಹೈದರ್ ಸಾಬ್ ಕುಂದಾಣ

ರಾಜ್ಯ ಸುದ್ದಿಗಳು 

ದೇವನಹಳ್ಳಿ

ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ಮಹಿಳೆಯರು ಸರಕಾರದಿಂದ ಸಿಗುವ ಹಲವಾರು ಸೌಲಭ್ಯಗಳಿಂದ ವಂಚಿತರಾಗದೆ, ಸೌಲಭ್ಯಗಳನ್ನು ಪಡೆದುಕೊಳ್ಳುವಂತಾಗಬೇಕು ಎಂದು ಬಿಕೆಎಸ್ ಪ್ರತಿಷ್ಠಾನದ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಅನುರಾಧ ಅಶೋಕ್ ತಿಳಿಸಿದರು.ದೇವನಹಳ್ಳಿ ಪಟ್ಟಣದ ಹಳೇ ತಾಲೂಕು ಆಫೀಸ್ ರಸ್ತೆಯಲ್ಲಿರುವ ಜಾಮೀಯ ಅಹ್ಲೇ ಹದೀಸ್ (ಸುನ್ನೀ) ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆಯ ನಂತರ ಬಿಕೆಎಸ್ ಪ್ರತಿಷ್ಠಾನ ಮತ್ತು ಶ್ರೀ ಕಲ್ಪವೃಕ್ಷ ಗ್ರಾಮೀಣಾಭಿವೃದ್ಧಿ ಯೋಜನೆ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ಮಹಿಳಾ ಸಬಲೀಕರಣ ಸಭೆಯ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರತಿ ಗ್ರಾಮ ಮಟ್ಟದಲ್ಲಿ ಮಹಿಳೆಯರನ್ನು ಗುಂಪುಗೂಡಿಸಿ ಮಹಿಳೆಯರನ್ನು ಸಂಘಟನೆಯ ಮೂಲಕ ಅರಿವು ಮೂಡಿಸುವ ಕಾರ್ಯ ಮಾಡಲಾಗುತ್ತಿದೆ. ಸಂಘದಲ್ಲಿ ದೊರೆಯುವಂತಹ ಹಲವಾರು ಸೇವೆಗಳನ್ನು ಪಡೆದುಕೊಳ್ಳಲು ಅವರಿಗೆ ಮಾಹಿತಿ ನೀಡುವ ಕೆಲಸ ಮಾಡಲಾಗುತ್ತಿದೆ. ಸರಕಾರದಿಂದ ಜಾರಿಯಲ್ಲಿರುವ ಇ-ಶ್ರಮ್ ಕಾರ್ಡು, ಆರೋಗ್ಯ ಕಾರ್ಡು, ಇತರೆ ಯೋಜನೆಗಳು ಹಾಗೂ ಸಂಘದಿಂದ ಸಾಲಸೌಲಭ್ಯ ಸೇರಿದಂತೆ ತರಬೇತಿಗಳನ್ನು ನೀಡುವ ಕಾರ್ಯವನ್ನು ಮಾಡಲಾಗುತ್ತಿದೆ. ಇದರ ಸದುಪಯೋಗವನ್ನು ಪಡೆದುಕೊಳ್ಳಲು ಸಂಘವು ನಿಮ್ಮ ಜೊತೆಯಲ್ಲಿದ್ದು, ಸೇವೆ ಸಲ್ಲಿಸುತ್ತಿದೆ. ಇದರ ಪ್ರಯೋಜನವನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

CHETAN KENDULI

ಜಾಮೀಯ ಮಸೀದಿ ಕಾರ್ಯದರ್ಶಿ ಎ.ಎಸ್.ಇಬ್ರಾಹಿಂ ಮಾತನಾಡಿ, ಮಹಿಳೆಯರು ಸಂಘಟಿತರಾದರೆ ಏನೇ ಸಮಸ್ಯೆಗಳು ಇದ್ದರೂ ಪರಿಹಾರ ಕಂಡುಕೊಳ್ಳಬಹುದು. ಸಮಾಜದಲ್ಲಿ ಅಲ್ಪಸಂಖ್ಯಾತರಿಗೆ ಸಾಕಷ್ಟು ಸೌಲಭ್ಯಗಳು ಸರಕಾರ ನೀಡುತ್ತಿದೆ. ಇದರ ಅರಿವು ಇಲ್ಲದೆ, ಮತ್ತೇ ಸರಕಾರಕ್ಕೆ ಹೋಗುತ್ತಿದೆ. ಇದರ ಪ್ರಯೋಜನವನ್ನು ಪಡೆದುಕೊಂಡು ಆರ್ಥಿಕವಾಗಿ ಸದೃಢಗೊಳ್ಳಬೇಕು. ಇಂತಹ ಸಂಘ ಸಂಸ್ಥೆಗಳು ಮಹಿಳೆಯರಿಗೆ ಅರಿವು ಮೂಡಿಸುವ ಮತ್ತು ಸೌಲಭ್ಯ ಕಲ್ಪಿಸುವ ಕೆಲಸ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯವಾದದ್ದು ಎಂದು ಹೇಳಿದರು.ಈ ವೇಳೆಯಲ್ಲಿ ಜಾಮೀಯ ಮಸೀದಿ ಅಧ್ಯಕ್ಷ ಅಬ್ದುಲ್‌ಖುದ್ದೂಸ್ ಪಾಷ, ಬಿಕೆಎಸ್ ಪ್ರತಿಷ್ಠಾನ ಮತ್ತು ಶ್ರೀ ಕಲ್ಪವೃಕ್ಷ ಗ್ರಾಮೀಣಾಭಿವೃದ್ಧಿ ಯೋಜನೆ ಟ್ರಸ್ಟ್‌ನ ಸಂಘಟನಾ ಕಾರ್ಯದರ್ಶಿ ಅನಿತಾ, ಪದಾಧಿಕಾರಿಗಳಾದ ಲಕ್ಷ್ಮೀ, ಶೋಭಾ, ಅಲ್ಪಸಂಖ್ಯಾತ ಮುಸ್ಲಿಂ ಮಹಿಳೆಯರು, ಶಾಲಾ ಮಕ್ಕಳು ಇತರರು ಇದ್ದರು.

 

Be the first to comment

Leave a Reply

Your email address will not be published.


*