ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಗಳನ್ನು ವೋಟ್ ಬ್ಯಾಂಕ್ ಗಳಾಗಿ ಬಳಸಿಕೊಳ್ಳಲಾಗುತ್ತಿದೆ – ಪುರುಷೋತಮ್

ವರದಿ ಹರೀಶ್ ದೊಡ್ಡಬಳ್ಳಾಪುರ

ರಾಜ್ಯ ಸುದ್ದಿಗಳು 

ದೊಡ್ಡಬಳ್ಳಾಪುರ 

ಬಹುಜನ ಸಮಾಜ ಪಾರ್ಟಿ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ವತಿಯಿಂದ ಕರ್ನಾಟಕ ರಾಜ್ಯದ ಜನತೆಯ ಪರವಾಗಿ ಜನಾಂದೋಲನ ಜಾಥಾ ಹಾಗೂ ಧರಣಿ ಸತ್ಯಗ್ರಹ ಹಮ್ಮಿಕೊಳ್ಳಲಾಗಿತ್ತು. ಬಹುಜನ ಸಮಾಜ ಪಾರ್ಟಿ ಯ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಪುರುಷೋತಮ್ ರವರ ನೇತೃತ್ವದಲ್ಲಿ ರಾಯಚೂರು ಜಿಲ್ಲಾ ನಾಯಧೀಶ ಮಲ್ಲಿಕಾರ್ಜುನ ಗೌಡ ವಿರುದ್ಧ, ಹುಮನಾಬಾದ್ ತಹಶೀಲ್ದಾರ್ ಪ್ರದೀಪ್ ಕುಮಾರ್ ವಿರುದ್ಧ ಹಾಗೂ ದಲಿತ ಹಿಂದುಳಿದ ವರ್ಗಗಳ ಹಲವು ಸಮಸ್ಯೆಗಳನ್ನು ಕುರಿತು ದಿನಾಂಕ 17/02/22 ರಂದು ದೊಡ್ಡಬಳ್ಳಾಪುರ ನಗರದ ಡಾ // ಬಿ ಆರ್ ಅಂಬೇಡ್ಕರ್ ರವರ ಪ್ರತಿಮೆ ಯ ಮುಂಭಾಗದಿಂದ ತಾಲ್ಲೂಕು ಕಛೇರಿಯ ವರೆಗೆ ಜನಾಂದೋಲನ ಜಾಥಾ ಹೊರಟು ತಾಲ್ಲೂಕು ದಂಡಧಿಕಾರಿಗಳ ಮುಖೆನ ಗೌರವಾನ್ವಿತ ರಾಷ್ಟಪತಿಗಳಿಗೆ, ಗೌರವನ್ವಿತ ಪ್ರಧಾನ ಮಂತ್ರಿಗಳಿಗೆ, ಗೌರವಾನ್ವಿತ ರಾಜ್ಯಪಾಲರಿಗೆ. ಗೌರವನ್ವಿತ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.

CHETAN KENDULI

ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪುರುಷೋತಮ್ ಮಾತನಾಡಿ ಮಲ್ಲಿಕಾರ್ಜುನ್ ಗೌಡ ತಾವು ಮಾಡಿರುವುದು ತಪ್ಪೆಂದು ಒಪ್ಪಿಕೊಂಡಿದ್ದರು ಯಾವುದೇ ಕ್ರಮ ಕೈಗೊಳ್ಳದಿರುವುದು ಖಂಡನೀಯ. ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಅಪಮಾನ ಮಾಡಿರುವ ವಿಚಾರವಾಗಿ ಬಹುಜನ ಸಮಾಜ ಪಾರ್ಟಿ ಹೋರಾಟ ನೆಡೆಸುತ್ತಿದ್ದು ಈ ಕೂಡಲೇ ರಾಯಚೂರು ನ್ಯಾಯಧೀಶ ಮಲ್ಲಿಕಾರ್ಜುನ್ ಗೌಡ ಹಾಗೂ ಹುಮನಾಬಾದ್ ತಹಶೀಲ್ದಾರ್ ಪ್ರದೀಪ್ ಕುಮಾರ್ ರವರನ್ನು ವಜಾಗೊಳಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅಗ್ರಹಿಸಿದರು.ಪ್ರತಿಭಟನೆಯಲ್ಲಿ ಬಹುಜನ ಸಮಾಜ ಪಾರ್ಟಿಯ ತಾಲ್ಲೂಕು ಮತ್ತು ನಗರ ಮಟ್ಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*