ರಾಜ್ಯ ಸುದ್ದಿಗಳು
ಬೆಂಗಳೂರು ಗ್ರಾ
ಹಲವಾರು ವರ್ಷಗಳಿಂದ ಅಭಿವೃದ್ಧಿ ಕಾಣದ ದೇವಾಲಯಕ್ಕೆ ಇಂದು ಕೊಟ್ಟಿಗೆ ಮಾಚೇನಹಳ್ಳಿ ಗ್ರಾಮದ ಗ್ರಾಮಸ್ಥರು ಹಾಗೂ ದಾನಿಗಳು ಕೈಜೋಡಿಸಿ ಗ್ರಾಮದ ದೇವಸ್ಥಾನವನ್ನು ಜೀರ್ಣೋದ್ದಾರ ಮಾಡುವ ಮೂಲಕ ಗ್ರಾಮಕ್ಕೆ ಸಂತಸದ ತಂದುಕೊಟ್ಟಿದ್ದಾರೆ .ಗ್ರಾಮದಲ್ಲಿ ಉದ್ಭವ ದೇವತೆಗಳೆಂದೇ ಪೂಜಿಸುವ ಸಪ್ಲಮ್ಮ ದೊಡ್ಡಮ್ಮ ಗಂಗಮ್ಮ ದೇವರುಗಳ ದೇವಾಲಯಕ್ಕೆ ಜೀರ್ಣದ್ಧಾರ ದ ಮೂಲಕ ಗ್ರಾಮದಲ್ಲಿ ಸಂತಸ ಮನೆಮಾಡಿದೆ.
ಈ ದೇವಾಲಯ ತುಂಬಾ ಹಳೆಯದಾಗಿದ್ದು ಗ್ರಾಮದ ದಾನಿಗಳು ಹಾಗೂ ಗ್ರಾಮಸ್ಥರ ನೆರವಿನಿಂದ ಪುನರ್ ನಿರ್ಮಾಣ ಮಾಡಲಾಗಿದೆ ಈ ದೇವಾಲಯಕ್ಕೆ ಗ್ರಾಮದಲ್ಲಿ ಹಲವು ಭಕ್ತಾದಿಗಳಿಂದ ಸತತವಾಗಿ ಪೂಜಾ ಕಾರ್ಯಕ್ರಮಗಳು ನಡೆಸಲಾಗುತ್ತಿದೆ ಎಂದು ಈ ಸಂದರ್ಭದಲ್ಲಿ ಮಾತನಾಡಿದ ದೇವಾಲಯದ ಅರ್ಚಕರಾದ ಸಿದ್ದಪ್ಪ ತಿಳಿಸಿದರು
ಗ್ರಾಮಸ್ಥರಾದ ನಾಗರಾಜು ಮಾತನಾಡಿ ಗ್ರಾಮದ ಪ್ರತಿಯೊಬ್ಬ ಗ್ರಾಮಸ್ಥರು ತಮ್ಮ ಸಹಾಯವನ್ನು ದೇವಾಲಯಕ್ಕಾಗಿ ಮಾಡಿದ್ದಾರೆ ದೇವಾಲಯ ಸರ್ವರಿಗೂ ಸಮರ್ಪಣೆ ದೇವಾಲಯದ ಜೀರ್ಣೋದ್ಧಾರ ಕಾರ್ಯ ಸರ್ವರಿಗೂ ಸಂತಸವನ್ನು ತಂದುಕೊಟ್ಟಿದೆ ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಸ್ಥಳೀಯ ಮುಖಂಡರಾದ ಕೃಷ್ಣಪ್ಪ,ಬಿಜೆಪಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷರಾದ ಸನ್ಮಾನ್ಯ ಶ್ರೀ ಅಶ್ವಥ್ ನಾರಾಯಣ ಕುಮಾರ್ ರವರು, ಬಿಜೆಪಿ ತಾಲ್ಲೂಕು SC ಮೋರ್ಚಾದ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ದೇವರಾಜ್ ರವರು , ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯರಾದ ಸನ್ಮಾನ ಶ್ರೀ ಲಕ್ಷ್ಮೀನಾರಾಯಣ ರವರು ಹಾಗೂ ಗ್ರಾಮದ ಹಲವಾರು ಮುಖಂಡರು, ಗ್ರಾಮಸ್ಥರು ಈ ಮಂಡಲ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
Be the first to comment