ರಾಜ್ಯ ಸುದ್ದಿಗಳು
ನೆಲಮಂಗಲ
ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕಿನಲ್ಲಿ ಇಂದು ಸೊಂಪೂರ ಕೈಗಾರಿಕಾ ಪ್ರದೇಶದ ಎಲ್ಲಾ ಕಂಪನಿಗಳು ಸ್ಥಳೀಯ ಯುವಕರಿಗೆ ಉದ್ಯೋಗ ವಂಚನೆ ಮಾಡುತ್ತಿರುವ ಹಿನ್ನಲೆಯಲ್ಲಿ ಕರುನಾಡ ವಿಜಯ ಸೇನೆ ವತಿಯಿಂದ ಸೋಂಪುರ ಕೈಗಾರಿಕಾ ಪ್ರದೇಶದ ಉದ್ಯೋಗಾವಕಾಶದಲ್ಲಿ ಸ್ಥಳೀಯರಿಗೆ ಮೊದಲ ಆದ್ಯತೆ ನೀಡಬೇಕೆಂದು ನೆಲಮಂಗಲ ತಾಲ್ಲೂಕು ದಂಡಾಧಿಕಾರಿಗಳಿಗೆಮತ್ತು ನೆಲಮಂಗಲ ಕಾರ್ಮಿಕ ವೃತ ನಿರೀಕ್ಷಕರಿಗೆ ಕರುನಾಡ ವಿಜಯಸೇನೆಯ ಎಲ್ಲಾ ಪದಾಧಿಕಾರಿಗಳ ಪರವಾಗಿ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕರುನಾಡು ವಿಜಯಸೇನೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಸುಚೇಂದ್ರ ಮಾತನಾಡಿ ಸೋಂಪುರ ಹೋಬಳಿಯ ಕೈಗಾರಿಕಾ ಪ್ರದೇಶವು ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು ಇಂತಹ ಸಂದರ್ಭದಲ್ಲಿ ಕೈಗಾರಿಕಾ ಪ್ರದೇಶದಲ್ಲಿನ ಕಂಪನಿಗಳು ಸ್ಥಳೀಯರಿಗೆ ಉದ್ಯೋಗ ನೀಡುವಲ್ಲಿ ಬೇಜವಾಬ್ದಾರಿತನ ತೋರುತ್ತಿದ್ದು ಈ ವಿಷಯವಾಗಿ ಅನೇಕ ಸ್ಥಳೀಯ ಯುವಕರು ಉದ್ಯೋಗದಿಂದ ವಂಚಿತರಾಗಿದ್ದಾರೆ. ಹಾಗಾಗಿ ಇಂತಹ ಕಂಪನಿಗಳ ವಿರುದ್ಧ ಕ್ರಮಕೈಗೊಂಡು ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶವನ್ನು ನೀಡಬೇಕೆಂದು ಆಗ್ರಹಿಸಿದರು. ಮತ್ತು ಸರೋಜಿನಿ ಮಹಿಷಿ ವರದಿಯ ಪ್ರಕಾರ ಸ್ಥಳೀಯವಾಗಿ ಕನ್ನಡಿಗರಿಗೆ ಉದ್ಯೋಗವಕಾಶವನ್ನು ಕಲ್ಪಿಸಬೇಕೆಂದು ಒತ್ತಾಯಿಸಿದರು
ಈಸಂದರ್ಭದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯಾಧ್ಯಕ್ಷರಾದ ಹರೀಶ್ ಕುಮಾರ್ ಕೆ ,ಜಿಲ್ಲಾ ಯುವ ಘಟಕ ಉಪಾಧ್ಯಕ್ಷರಾದ ಜಯಂತ್ ,ಹಾಗೂ ನೆಲಮಂಗಲ ತಾಲೂಕು ಅಧ್ಯಕ್ಷರಾದ ವಸಂತಕುಮಾರ ಕೆ, ಹಾಗೂ ಸೋಂಪುರ ಹೋಬಳಿ ಅಧ್ಯಕ್ಷರಾದ ಭರತ್, ಉಪಾಧ್ಯಕ್ಷರಾದ ಕಿರಣ್ ಕುಮಾರ್, ಪ್ರಧಾನ ಕಾರ್ಯದರ್ಶಿಗಳಾದ ಯೋಗೇಶ್ ,ಕಾರ್ಮಿಕ ಘಟಕ ಅಧ್ಯಕ್ಷರಾದ ಚೇತನ್ ,ಯುವ ಘಟಕದ ಅಧ್ಯಕ್ಷರಾದ ಭರತ್, ತಾಲೂಕು ಕಾರ್ಮಿಕ ಸಂಘದ ಅಧ್ಯಕ್ಷರಾದ ಶಿವಸ್ವಾಮಿ, ಹೋಬಳಿ ಕಾರ್ಮಿಕ ಘಟಕದ ಮನು ಪುನೀತ್ ಕುಮಾರ್, ಮನೋಹರ್ ,ನಾಗೇಂದ್ರ, ನವೀನ್ ,ಗೋವಿಂದರಾಜು, ರಾಜೇಶ್ , ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.
Be the first to comment