ರಾಜ್ಯ ಸುದ್ದಿಗಳು
ದೊಡ್ಡಬಳ್ಳಾಪುರ ನಗರಸಭೆ ಚುನಾವಣೆಯಲ್ಲಿ ಕರೆನಹಳ್ಳಿ ಯಿಂದ ನಗರಸಭೆಗೆ ನೂತನವಾಗಿ ಆಯ್ಕೆಯಾಗಿರುವ ಶ್ರೀಮತಿ ಆರ್ ಪ್ರಭಾ ನಾಗರಾಜುರವರು ಮಾಧ್ಯಮಗಳೊಂದಿಗೆ ಮಾತನಾಡಿ ನನ್ನ ಗೆಲುವಿನ ಮೊದಲ ಕಾರ್ಯವು ವಾರ್ಡಿನ ಸ್ವಚ್ಛತೆ ಯಾಗಿದೆ ಹಾಗೂ ವಾರ್ಡಿನ ಜನತೆಯ ಸುರಕ್ಷತೆಗೆ ನಾನು ಪ್ರಾಮುಖ್ಯತೆ ನೀಡುತ್ತೇನೆ.
ವಾರ್ಡಿನ ಮತದಾರ ಬಂಧುಗಳು ನನ್ನ ಮೇಲೆ ತುಂಬಾ ನಿರೀಕ್ಷೆ ಇಟ್ಟು ಅವರ ಅಮೂಲ್ಯವಾದ ಮತಗಳನ್ನು ನೀಡಿದ್ದಾರೆ ಅವರ ನಂಬಿಕೆ ಎಂದಿಗೂ ಹುಸಿಯಾಗಲು ಬಿಡುವುದಿಲ್ಲ ಹಾಗೂ ಮತದಾರರ ಎಲ್ಲಾ ಕೋರಿಕೆಗಳನ್ನು ಸಹ ಕಾರ್ಯರೂಪಕ್ಕೆ ತರುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆ ವಾರ್ಡ ಜನತೆಯ ಧ್ವನಿಯಾಗಿ ನಗರಸಭೆಯಲ್ಲಿ ಕಾರ್ಯನಿರ್ವಹಿಸುತ್ತೇನೆ ಎಂದು ಮಾಧ್ಯಮಗಳೊಂದಿಗೆಮಾತನಾಡಿದ ಆರ್ ಪ್ರಭಾ ನಾಗರಾಜುರವರು ತಿಳಿಸಿದರು.
ನಗರಸಭಾ ಚುನಾವಣೆಯಲ್ಲಿ ತಮಗೆ ಸಹಕರಿಸಿದ ಎಲ್ಲಾ ಹಿತೈಷಿಗಳಿಗೂ ರಾಜಕೀಯ ಮುಖಂಡರಿಗೂ ಹಾಗೂ ವಾರ್ಡಿನ ಮತದಾರರಿಗೂ ಧನ್ಯವಾದಗಳನ್ನು ಅರ್ಪಿಸಿದರು. ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರು ಹಾಗೂ ಜೆಡಿಎಸ್ ಪಕ್ಷದ ನಾಯಕರು ಉಪಸ್ಥಿತರಿದ್ದು. ನೂತನವಾಗಿ ನಗರಸಭೆಗೆ ಆಯ್ಕೆಯಾದ ಆರ್ ಪ್ರಭಾ ನಾಗರಾಜು ರವರನ್ನು ಅಭಿನಂದಿಸಿದರು.
Be the first to comment