ಪುತ್ರಿ ಮತ್ತು ಗರ್ಭಿಣಿ ಪತ್ನಿಯನ್ನು ಬಿಟ್ಟು ಪುನೀತ್ ಅಗಲಿಕೆಗೆ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಯುವಕ

ವರದಿ ಆಕಾಶ್ ಚಲವಾದಿ ಬೆಂಗಳೂರು ಹೆಡ್

ರಾಜ್ಯ ಸುದ್ದಿಗಳು 

ಚಿಕ್ಕಮಗಳೂರು

(31-10-2021): ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನದಿಂದ ಆಘಾತಕ್ಕೊಳಗಾಗಿದ್ದ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಂಪುರದ ಶ್ರೀನಿವಾಸನಗರದಲ್ಲಿ ನಡೆದಿದೆ.ಕೂಲಿ ಕೆಲಸ ಮಾಡುತ್ತಿದ್ದ ಪಿ.ಆರ್‌.ಶರತ್‌ಕುಮಾರ್‌ (30) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶರತ್‌ ಅವರು ಮನೆಯ ಬೆಡ್‌ ರೂಂನಲ್ಲಿ ಫ್ಯಾನಿಗೆ ಸೀರೆ ಬಿಗಿದು ನೇಣು ಹಾಕಿಕೊಂಡಿದ್ದಾರೆ.

CHETAN KENDULI

ಪುನೀತ್‌ ನಿಧನದ ಸುದ್ದಿ ಕೇಳಿ ಶರತ್‌ ಆಘಾತಕ್ಕೊಳಗಾಗಿದ್ದರು.. ಟಿ.ವಿ ಯಲ್ಲಿ ಪುನೀತ್ ಪಾರ್ಥಿವ ಶರೀರ ನೋಡಿ ರೋದಿಸಿದ್ದರು. ಅಳುವುದನ್ನು ನಿಲ್ಲಿಸುವಂತೆ ಕುಟುಂಬದವರು ಹೇಳಿದರೂ ಕೇಳಿಲ್ಲ. ನಿನ್ನೆ ಮಧ್ಯಾಹ್ನ 3 ಗಂಟೆ ಹೊತ್ತಿನಲ್ಲಿ ಬೆಡ್‌ ರೂಂನಲ್ಲಿ ಶರತ್‌ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಶರತ್‌ ಅವರಿಗೆ ಒಬ್ಬ ಪುತ್ರಿ ಇದ್ದಾರೆ. ಪತ್ನಿ ಎಂಟು ತಿಂಗಳ ಗರ್ಭಿಣಿಯಾಗಿದ್ದಾರೆ. ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Be the first to comment

Leave a Reply

Your email address will not be published.


*