ಜಿಲ್ಲಾ ಸುದ್ದಿಗಳು
ಕಾರವಾರ
ಉತ್ತರ ಕನ್ನಡ ಜಿಲ್ಲೆಯ 10 ತಾಲೂಕಾ ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸುವ ಡಯಾಲಿಸಿಸ್ ಸಿಬ್ಬಂದಿಗಳಿಗೆ ವೇತನ ಪಾವತಿ ಬಗ್ಗೆ ಡಿ.ಎಚ್.ಓ ಡಾ ಶರದ್ ನಾಯಕ ಮಾಹಿತಿ ನೀಡಿದ್ದಾರೆ. ಆಗಸ್ಟ್ ತಿಂಗಳವರೆಗೆ ವೇತನ ನೀಡಲಾಗಿದೆ. ಹಿಂದೆ ನೀಡಿದ ರೀತಿಯಲ್ಲೇ ನೀಡುವಂತೆ ಹೇಳಲಾಗಿತ್ತು. ಯಾವುದೇ ಸಿಬ್ಬಂದಿಗಳಿಗೆ 15 ಸಾವಿರಕ್ಕೂ ಕೆಳಗೆ ವೇತನ ಇದ್ದವರಿಗೆ ಪಿಎಫ್, ಇ.ಎಸ್ಐ ನೀಡಬೇಕು. ಕಾರ್ಮಿಕ ಇಲಾಖೆಯೊಂದಿಗೆ ಚರ್ಚಿಸಿ
ಕಾನೂನಿನಂತೆ ದರ ನಿಗದಿ ಮಾಡಲಾಗಿದೆ. ಟೆಂಡರ್ ಆಗಿಲ್ಲ.ತುರ್ತು ಕ್ರಮಕೈಗೊಳ್ಳಲಾಗಿದೆ. ಮೇ, ಜೂನ್, ಜುಲೈ ವರೆಗೆ ವೇತನ ಆಗಬೇಕಿತ್ತು.ಜೂನ್ ವರೆಗೆ ಆಗಿದೆ. ಆಗಸ್ಟ್ ನಿಂದ ಇಲಾಖೆ ಮೂಲಕ ನೀಡಲು ತಿಳಿಸಿದ್ದಾರೆ. ಉಸ್ತುವಾರಿ ಮಂತ್ರಿ ಹಾಗೂ ಸಿಇಒ ಸಭೆ ನಡೆಸಿದ ಆರೋಗ್ಯ ರಕ್ಷಾ ಸಮಿತಿ ಮೂಲಕ ವೇತನ ನೀಡಲು ತಿಳಿಸಲಾಗಿತ್ತು. ಆಗಸ್ಟ್ ತಿಂಗಳ ಹಣ ಬಿಡುಗಡೆ ಆಗಿದ್ದು ಈಗಾಗಲೇ ನೀಡಲಾಗಿದೆ.
Be the first to comment