ಶರಾವತಿ ನದಿಯಲ್ಲಿ ಅಕ್ರಮ ಮರಳುಗಾರಿಕೆಗೆ ; ಒಂಬತ್ತು ಬೋಟ್‌ ವಶಕ್ಕೆ ..!!

ವರದಿ- ಸುಚಿತ್ರಾ ನಾಯ್ಕ ಹೊನ್ನಾವರ

ಜಿಲ್ಲಾ ಸುದ್ದಿಗಳು 

ಹೊನ್ನಾವರ

ಕಂದಾಯ ಇಲಾಖೆ, ಪೊಲೀಸ್, ಅರಣ್ಯ ಮತ್ತು ಭೂ, ಗಣಿ ಇಲಾಖೆಯ ಜಂಟಿ ಕಾರ್ಯಾಚರಣೆಯೊಂದಿಗೆ ಹೊನ್ನಾವರ ತಾಲೂಕಿನ ಶರಾವತಿ ನದಿಯಲ್ಲಿ ಅಕ್ರಮ ಮರಳು ಗಾರಿಕೆಗೆ ಬಳಸುತ್ತಿದ್ದ ಒಂಬತ್ತು ಬೋಟ್ ಗಳನ್ನು ವಶಕ್ಕೆ ಪಡೆದಿದ್ದಾರೆ.ಮಾವಿನಕುರ್ವಾ, ಹೊಸಾಡ, ಕಳಿಸಿನಮೋಟೆ, ಕಾಸರಕೋಡ, ಹೊಸಪಟ್ಟಣ ಹೀಗೆ ಶರಾವತಿ ನದಿ ಅಂಚಿನಲ್ಲಿರುವ ಜಿಪಿಎಸ್ ಇಲ್ಲದೇ ಅಕ್ರಮ ಮರಳು ಸಾಗಿಸಲು ಬಳಕೆಯಾಗುತ್ತಿದ್ದ ಬೋಟ್‌ಗಳ ಮೇಲೆ ದಾಳಿ ಮಾಡಿ ಒಟ್ಟು ಒಂಬತ್ತು ಬೋಟ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇಷ್ಟು ದಿನ ಅಧಿಕಾರಿಗಳ ಕಣ್ಣು ತಪ್ಪಿಸಿ ನಡೆಯತ್ತಿದ್ದ ಅಕ್ರಮ ಮರಳುಗಾರಿಕೆಗೆ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ.

CHETAN KENDULI

ಈ ದಾಳಿಯಲ್ಲಿ ಸಿಪಿಐ ಶ್ರೀಧರ ಎಸ್. ಆರ್, ಪಿ. ಎಸ್. ಐ ಶಶಿಕುಮಾರ, ಕಂದಾಯ, ಅರಣ್ಯ, ಭೂ ಮತ್ತು ಗಣಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.ತಾಲೂಕಿನಲ್ಲಿ ಪರವಾನಿಗೆ ಪಡೆದ ೪೫ ಮರಳು ದಿಬ್ಬಗಳಿವೆ. ಅವರಿಗೆ ಇನ್ನೂ ಕೂಡ ಮರಳುಗಾರಿಕೆಯ ಅನುಮತಿ ಸರಕಾರ ಕೊಟ್ಟಿಲ್ಲ. ಇದನ್ನು ಅವಲಂಬಿಸಿದ ಲಾರಿ, ಬೋಟ್ ಗಳಿಗೂ ಕೂಡ ಕೆಲಸವಿಲ್ಲ. ಇದರಿಂದ ಸರಕಾರಕ್ಕೂ ರಾಜ ದನ ನಷ್ಟವಾಗುತ್ತಿದೆ.

ಇನ್ನೂ ಕೂಡ ಪರವಾನಿಗೆ ಪಡೆದ ಮರಳುಗಾರಿಕೆಗೆ ಅನುಮತಿ ನೀಡದೆ ಇರುವುದು ನೋಡಿದರೆ, ಹೊಸದಾಗಿ ಮರಳುಗಾರಿಕೆಗೆ ಅನುಮತಿ ಪಡೆಯಲು ಲಾಭಿ ಮಾಡುತ್ತಿದ್ದಾರೆಯೇ ಅನ್ನುವ ಅನುಮಾನ ಹುಟ್ಟುಕೊಂಡಿದೆ. ಈ ಹಿಂದೆ ಆಡಳಿತದಲ್ಲಿ ಇದ್ದ ಸರಕಾರದ ಬೆಂಬಲಿತರೆ ಹೆಚ್ಚು ಪರ್ಮಿಟ್ ಹೊಂದಿದ್ದಾರೆ. ಈ ಆಡಳಿತದಲ್ಲಿ ಇದ್ದವರು ಕೂಡ ಅವಕಾಶ ಸಿಕ್ಕಿದ್ದಾಗ ತಮ್ಮ ಕೆಲಸ ಆಡಿಕೊಳ್ಳಬೇಕು ಎಂದು, ಹೊಸ ಮರಳು ಪರ್ಮಿಟ್‌ಗೆ ಲಾಭಿ ನಡೆಸಿದ ಅನುಮಾನ ಕಾಡುತ್ತಿದೆಅಧಿಕೃತ ಪರವಾನಿಗೆ ಇದ್ದ ಮರಳುಗಾರಿಕೆಗೆ ಅನುಮತಿ ನೀಡಬೇಕು. ಅಕ್ರಮ ಮರಳು ಗಾರಿಕೆಗೆ ಅವಕಾಶ ನೀಡಬಾರದು. ಇದರಿಂದ ಸರಕಾರಕ್ಕೆ ರಾಜದನವು ನಷ್ಟವಾಗುತ್ತದೆ ಎಂಬುದು ಅಧಿಕೃತ ಗುತ್ತಿಗೆದಾರರ ಅಭಿಪ್ರಾಯವಾಗಿದೆ.

Be the first to comment

Leave a Reply

Your email address will not be published.


*