ಕಸಾಪ ರಾಜ್ಯ ಅಧ್ಯಕ್ಷ ಸ್ಥಾನದ ಚುನಾವಣೆ: ಭ್ರಷ್ಟಾಚಾರ ಮುಕ್ತ ಕನ್ನಡ ಸಾಹಿತ್ಯ ಪರಿಷತ್ತು ಮಾಡಲು ನನ್ನನ್ನು ಬೆಂಬಲಿಸಿ- ರಾಜಶೇಖರ ಮುಲಾಲಿ  

ವರದಿ-ಕುಮಾರ್ ನಾಯ್ಕ ,ಉಪ ಸಂಪಾದಕರು

ರಾಜ್ಯ ಸುದ್ದಿಗಳು 

ಕಾರವಾರ

ಕನ್ನಡ ಸಾಹಿತ್ಯ ಪರಿಷತ್ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಮತದಾರರು ಆಶೀರ್ವದಿಸಿದರೆ ಕನ್ನಡ ಕಟ್ಟುವ ಕಾರ್ಯಕ್ಕೆ ಸಂಪೂರ್ಣ ಸಮರ್ಪಿಸಿಕೊಳ್ಳುವೆ ಎಂದು ಕನ್ನಡ ಸಾಹಿತ್ಯ ಪರಿಷತ್ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ರಾಜಶೇಖರ ಮುಲಾಲಿ ಇಲ್ಲಿ ಹೇಳಿದರು.ಪರಿಷತ್ತಿನಲ್ಲಿಯ ಭ್ರಷ್ಟಾಚಾರದ ಬೇರುಗಳನ್ನು ಸಂಪೂರ್ಣ ತೊಡೆದು ಹಾಕಲಾಗುವುದು. ಯುವ ಶಕ್ತಿಯನ್ನು ಸಂಘಟಿಸಿ, ಸಶಕ್ತ ಕನ್ನಡ ಪಡೆ ಕಟ್ಟಿ, ಪರಿಷತ್ತನ್ನು ಕನ್ನಡಿಗರ ಅಸ್ಮಿತೆ ಆಗಿ ರೂಪಿಸಲಾಗುವುದು ಎಂದು ಮಾಧ್ಯಮದವರ ಜೊತೆ ಮಾತನಾಡಿ ತಿಳಿಸಿದರು.ಪರಿಷತ್ ಡಿಜಿಟಲೀಕರಣಗೊಳಿಸಲಾಗುವುದು. ಕನ್ನಡ ಸಾಹಿತ್ಯವನ್ನು ನಾಡಿನ ಮೂಲೆ ಮೂಲಗೆ ತಲುಪಿಸಲಾಗುವುದು. ಗಡಿನಾಡ ಕನ್ನಡಿಗರ ರಕ್ಷಣೆಗೆ ಕಾನೂನು ನೆರವು ಕಲ್ಪಿಸಲಾಗುವುದು. ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಅವಕಾಶ ಒದಗಿಸಿಕೊಡಲು ದೊಡ್ಡ ಮಟ್ಟದ ಹೋರಾಟ ಮಾಡಲಾಗುವುದು ಎಂದು ಹೇಳಿದರು.

CHETAN KENDULI

1915 ರಲ್ಲಿ ರಚನೆಗೊಂಡ ಕನ್ನಡ ಸಾಹಿತ್ಯ ಪರಿಷತ್ತಿಗೆ ತನ್ನದೇ ಆದ ಇತಿಹಾಸ ಇದೆ. ಅನೇಕ ಮಹನಿಯರು ಇದರ ಚುಕ್ಕಾಣಿ ಹಿಡಿದು ಕನ್ನಡ ಸಮೃದ್ಧಗೊಳಿಸುವ ಕೆಲಸ ಮಾಡಿದ್ದಾರೆ. ಅಧ್ಯಕ್ಷ ಹುದ್ದೆಗೂ ಘನತೆ ತಂದುಕೊಟ್ಟಿದ್ದಾರೆ. ಆದರೆ, ಕಾಲಾಂತರದಲ್ಲಿ ಪರಿಷತ್ತು ರಾಜಕೀಯ ಸಂಕೋಲೆಗೆ ಸಿಲುಕಿ, ಭ್ರಷ್ಟಾಚಾರ, ಸ್ವಜನ ಪಕ್ಷಪಾತದಲ್ಲಿ ಮುಳುಗೇಳುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.ಪ್ರಸ್ತುತ ಕನ್ನಡ ನಾಡು ಅನೇಕ ಜ್ವಲಂತ ಸಮಸ್ಯೆಗಳನ್ನು ಎದುರಿಸುತ್ತಿದೆ. ಗಡಿ ಗಲಾಟೆ, ಅಂತರರಾಜ್ಯ ನೆಲ, ಜಲ ವಿವಾದ, ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಸಮಸ್ಯೆ, ಗಡಿ ಭಾಗದ ಕನ್ನಡ ಶಾಲೆಗಳ ದುಃಸ್ಥಿತಿ ಕನ್ನಡಿಗರನ್ನು ಕಾಡುತ್ತಿದೆ. ಆದರೂ, ಇವುಗಳ ಪರಿಹಾರಕ್ಕೆ ಶ್ರಮಿಸುವ, ಸರ್ಕಾರವನ್ನು ಬಡಿದೆಬ್ಬಿಸುವ ಕೆಲಸ ಪರಿಷತ್ತಿನಿಂದ ಆಗದಿರುವುದು ಬೇಸರದ ಸಂಗತಿಯಾಗಿದೆ ಎಂದು ಹೇಳಿದರು.

ಪರಿಷತ್ತಿನಲ್ಲಿ ಪಾರದರ್ಶಕ ಆಡಳಿತ ವೈಖರಿ ಮಾಯವಾಗಿದೆ. ಭ್ರಷ್ಟಾಚಾರದ ಚಿಗುರು ಪರಿಷತ್ತಿನ ಅಂಗಳದಲ್ಲಿ ಹೆಮ್ಮರವಾಗಿ ಬೆಳೆದಿದೆ. ಇಚ್ಛಾಶಕ್ತಿಯುಳ್ಳ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಯುವ ಪ್ರತಿಭೆಗಳು ಸಾಹಿತ್ಯ ಪರಿಷತ್ತಿನ ಯಾವುದೇ ವಲಯದಲ್ಲಿ ಗುರುತಿಸಿಕೊಳ್ಳಲು ಸಿದ್ಧರಿಲ್ಲ. ನವ್ಯ, ಕಾವ್ಯ, ಬಂಡಾಯದ ಪರಂಪರೆ ಹೊಂದಿರುವ ಕನ್ನಡ ನಾಡಿನ ಸಾಹಿತ್ಯ ಲೋಕ ನೂರೆಂಟು ವಿಘ್ನ ಎದುರಿಸುತ್ತಿರುವುದನ್ನು ಅಲ್ಲಗಳೆಯುವಂತಿಲ್ಲ ಎಂದರು.ಸಾಹಿತ್ಯ ಪರಿಷತ್ತನ್ನು ಸಮಾಜಮುಖಿ, ಭ್ರಷ್ಟಾಚಾರಮುಕ್ತ ಹಾಗೂಯಾವುದೇ ಕಾರಣಕ್ಕೂ ಪರಿಷತ್ತಿನ ವಾಹನ ಮತ್ತು ವೇತನ ಇವೆರಡನ್ನು ಪಡೆಯದೆ ಉಚಿತವಾಗಿ ಪರಿಷತ್ತಿಗೆ ಸೇವೆ ಮಾಡಬೇಕೆಂದು ನಿರ್ಧರಿಸಿದ್ದೇನೆ ಜಾತ್ಯತೀತವಾಗಿಸಲು ಮತದಾರರು ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

Be the first to comment

Leave a Reply

Your email address will not be published.


*