ರಾಜ್ಯ ಸುದ್ದಿಗಳು
ಭಟ್ಕಳ
ಶಾಲೆ ಹಾಗೂ ಕಾಲೇಜುಗಳಲ್ಲಿ ಹಿಜಾಬ್ ಕಡ್ಢಾಯವಲ್ಲ ಎಂಬ ಹೈಕೊರ್ಟ ತೀರ್ಪಿಗೆ ಅಸಾಮಾಧಾನ ವ್ಯಕ್ತಪಡಿಸಿ ತಂಝಿಂ ಸಂಸ್ಥೆ ನೀಡಿದ ಸ್ವಯಂ ಪೇರಿತ ಬಂದ ಗೆ ಬುಧವಾರ ಕರೆನೀಡಿತ್ತು ಕೆಲ ಮುಸ್ಲಿಂ ವರ್ತಕರು ಬುಧವಾರ ಮಧ್ಯಾಹ್ನದ ತನಕ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಸಾಯಂಕಾಲ 4-00 ಗಂಟೆಯ ನಂತರ ನಂತರ ಹಳೆ ಬಸ್ ನಿಲ್ದಾಣ, ಮೇನ್ ರೋಡ್ಗಳಲ್ಲಿ ವ್ಯಾಪಾರ ವ್ಯವಹಾರ ನಡೆಸುತ್ತಿರುವುದು ಕಂಡುಬಂದಿತು.
ಮಾರ್ಚ 20 ರ ತನಕ ಜಾರಿಯಲ್ಲಿರುವ ನಿಷೇಧಾಜ್ಞೆ ಉಲ್ಲಂಘಿಸಿ ಮಾರಿಕಟ್ಟೆ ಬಳಿ ಗುಂಪು ಗೂಡಿದವರ ವಿರುದ್ದ ಶಹರ ಠಾಣೆಯಲ್ಲಿ ಕೇಸ್ ದಾಖಲಿಸಲಾಗಿದೆ. ಈ ಸಂಭಂಧ ಅಹಿತಕರ ಘಟನೆ ಮತ್ತೆ ಮರುಕಳಿಸದಿರಲಿ ಎಂದು ಡಿವೈಎಸ್ಪಿ- ಬೆಳ್ಳಿಯಪ್ಪ ನೇತೃತ್ವದಲ್ಲಿ ಸಿ.ಪಿ.ಆಯ್- ದಿವಾಕರ, ನಗರಠಾಣೆ ಪಿ.ಎಸ್.ಆಯ್ ಸುಮಾ ಆಚಾರ್ಯ, ಹೆಚ್.ಬಿ,ಕುಡುಗುಂಟಿ , ಗ್ರಾಮಾಂತರ ಠಾಣೆ ಪಿ.ಎಸ್.ಆಯ್ ಭರತ್ ಸೇರಿದಂತೆ ಇಲಾಖೆಯ ಸಿಬ್ಬಂದಿಗಳುಗಸ್ತು ತಿರುಗುತ್ತಿರುವುದು ಕಂಡುಂಬಂದಿತು.
Be the first to comment