“ಕಂದಾಯ ದಾಖಲೆಗಳು ಮನೆ ಬಾಗಿಲಿಗೆ” ಯೋಜನೆಯಿಂದ ತಳವಾರ ಜನಾಂಗಕ್ಕೆ ಅನ್ಯಾಯ. 

ವರದಿ ಅಂಭಿಗ್ ನ್ಯೂಸ್

ಜಿಲ್ಲಾ ಸುದ್ದಿಗಳು 

ವಿಜಯಪುರ 

ಇಂದು ದೇವರಹಿಪ್ಪರಗಿಯಲ್ಲಿ ಕರ್ನಾಟಕ ರಾಜ್ಯಬುಡಕಟ್ಟು ಜನಾಂಗದ ಸಂರಕ್ಷಣಾ ಸಮಿತಿಯ ರಾಜ್ಯಾಧ್ಯಕ್ಷರಾದ ಅಮರೇಶ ಕಾಮನಕೇರಿ ಅವರು ಕರ್ನಾಟಕ ಸರ್ಕಾರದ ನೂತನ ಯೋಜನೆಯಾದ ಕಂದಾಯ ದಾಖಲೆಗಳು ಮನೆ ಬಾಗಿಲಿಗೆ ಎಂಬ ಯೋಜನೆಯ ಮೂಲಕ ತಳವಾರ ಜಾತಿ ಜನಾಂಗಕ್ಕೆ ಅನ್ಯಾಯವಾಗುತ್ತಿದ್ದು, ಈ ಯೋಜನೆಯಲ್ಲಿ ತಳವಾರ ಜಾತಿ ಜನಾಂಗಕ್ಕೆ ಪರಿಶಿಷ್ಟ ಪಂಗಡ ಪ್ರಮಾಣಪತ್ರ ನೀಡಬೇಕು ದೇವರಹಿಪ್ಪರಗಿ ತಾಲ್ಲೂಕಿನ್ಯಾದಂತ ಈ ಯೋಜನೆ ಮೂಲಕ ಪ್ರವರ್ಗ-1ರಲ್ಲಿ ಪ್ರಮಾಣ ಪತ್ರ ನೀಡುತ್ತಿರುವುದನ್ನು ರದ್ದುಗೊಳಿಸಬೇಕು ಎಂದು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

CHETAN KENDULI

ಈಗಾಗಲೇ ಕರ್ನಾಟಕ ರಾಜ್ಯ ಸರ್ಕಾರವೇ ಹಿಂದುಳಿದ ವರ್ಗದ ಪ್ರವರ್ಗ-1ರ 88 ಎಚ್ ನ ತಳವಾರ ಜಾತಿ ಜನಾಂಗವನ್ನು 28/04/2014 ರಂದು ಕೇಂದ್ರ ಸರಕಾರಕ್ಕೆ ಎಸ್ಟಿ ಮಾಡಲು ರಾಜ್ಯದ ಕ್ಯಾಬಿನೆಟ್ ಅನುಮೋದನೆಒಂದಿಗೆ ಕಳುಹಿಸಿ ಕೊಟ್ಟಿರುತ್ತದೆ.ಅದರಂತೆ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದ ಮನವಿ ಪುರಸ್ಕರಿಸಿ 20/03/2020 ರಂದು ಲೋಕಸಭೆ ಹಾಗೂ ರಾಜ್ಯಸಭೆ ಅನುಮೋದನೆಒಂದಿಗೆ ರಾಷ್ಟ್ರಪತಿಗಳ ಅಂಕಿತವಾಗಿ ತಳವಾರ ಪದವು ಪರಿಶಿಷ್ಟ ಪಂಗಡದ 38ರ ಪಟ್ಟಿಗೆ ಸೇರ್ಪಡೆ ಮಾಡಲಾಗಿರುತ್ತದೆತ್ತದೆ.ಆದರೆ ಅನೇಕ ತೊಂದರೆಗಳನ್ನು ನೀಡುವ ಉದ್ದೇಶದಿಂದ ಕೆಲವು ಅಧಿಕಾರಿಗಳು ಅಸಂಬದ್ಧ ಆದೇಶಗಳನ್ನು ಹೊರಡಿಸಿ ಈ ಜನಾಂಗಕ್ಕೆ ಸರಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ಸಿಗದಂತೆ ವಂಚಿಸುತ್ತಿದ್ದು ಇದರ ವಿರುದ್ಧ ಈಗಾಗಲೇ ಕೆಲವರು ನ್ಯಾಯಾಲಯಕ್ಕೆ ಹೋಗಿ ತಳವಾರರಿಗೆ ಎಸ ಟಿ ಸರ್ಟಿಫಿಕೇಟ್ ನೀಡಬೇಕೆಂದು ಕೋರ್ಟ್ ಮುಖಾಂತರ ಆದೇಶಗಳನ್ನು ತಂದಿರುತ್ತಾರೆ.ಅದೇ ರೀತಿ ನಮ್ಮ ಸಂಘಟನೆಯು ಹಿಂದುಳಿದ ವರ್ಗದ ಪ್ರವರ್ಗ -1ರಿಂದ ತಳವಾರ ಜಾತಿ ಪದವನ್ನು ತೆಗೆಯಬೇಕೆಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ದೂರು ಸಲ್ಲಿಸಿದ್ದು,ವಿಚಾರಣೆ ಕೂಡ ಮಾಡಲಾಗಿರುತ್ತದೆ.ಇಂತಹ ಸಂದರ್ಭದಲ್ಲಿ ಈ ಯೋಜನೆ ಮೂಲಕ ಪರಿಶಿಷ್ಟ ಪಂಗಡಕ್ಕೆ ಸೇರಿರುವ ತಳವಾರರಿಗೆ ಪರಿಶಿಷ್ಟ ಪಂಗಡ(ಎಸ್. ಟಿ ) ಸರ್ಟಿಫಿಕೇಟ್ ನೀಡುವ ಬದಲು ದೇವರಹಿಪ್ಪರಗಿ ತಾಲ್ಲೂಕಾದ್ಯಂತ ಕಂದಾಯ ಅಧಿಕಾರಿಗಳ ಮೂಲಕ ಪ್ರವರ್ಗ-1 ಪ್ರಮಾಣಪತ್ರ ನೀಡುತ್ತಿದ್ದು ಇದು ಅಕ್ಷಮ್ಯ ಅಪರಾಧವಾಗಿದೆ.ಕೂಡಲೇ ತಾಲ್ಲೂಕಿನ ದಂಡಾಧಿಕಾರಿಗಳು ಇದನ್ನು ಮನವರಿಕೆ ಮಾಡಿಕೊಂಡು ತಾಲ್ಲೂಕಿನಾದ್ಯಂತ ಕಂದಾಯ ಅಧಿಕಾರಿಗಳಿಗೆ ತಳವಾರ ಜಾತಿ ಜನಾಂಗದ ಜನರಿಗೆ ಪರಿಶಿಷ್ಟ ಪಂಗಡ ಪ್ರಮಾಣಪತ್ರ ನೀಡಬೇಕು ಎಂದು ಆದೇಶ ಮಾಡಬೇಕು ಹಾಗೂ ಕಂದಾಯ ದಾಖಲೆಗಳು ಮನೆ ಬಾಗಿಲಿಗೆ ಎಂಬ ಯೋಜನೆಯ ಮೂಲಕ ತಾಲ್ಲೂಕಿದಾದ್ಯಂತ ತಳವಾರರಿಗೆ ಪ್ರವರ್ಗ-1ರ ಪ್ರಮಾಣಪತ್ರವನ್ನು ನೀಡಿದ್ದೆ ಆಗಿದ್ದಲ್ಲಿ ಎಲ್ಲ ಪ್ರಮಾಣ ಪತ್ರಗಳನ್ನು ರದ್ದುಗೊಳಿಸಿ ಆದೇಶ ಮಾಡಬೇಕು ಎಂದು ಸಮಾಜಕ್ಕೆ ಆದ ಅನ್ಯಾಯವನ್ನು ಹೋರಹಾಕಿದರು.  

ಸಂವಿಧಾನಬದ್ಧವಾಗಿ ಪರಿಶಿಷ್ಟ ಪಂಗಡ ಸೇರ್ಪಡೆಯಾಗಿರುವ ತಳವಾರ ಜಾತಿ ಜನಾಂಗಕ್ಕೆ ಪರಿಶಿಷ್ಟ ಪಂಗಡ (ಎಸ್. ಟಿ ) ಪ್ರಮಾಣಪತ್ರ ನೀಡಿ ತಳವಾರ ಜನಾಂಗದ ಶೈಕ್ಷಣಿಕ ಆರ್ಥಿಕ ಹಾಗೂ ಸಾಮಾಜಿಕ ಉನ್ನತಿಗೆ ಸಹಕರಿಸಬೇಕೆಂದು ವಿನಂತಿಸಿಕೊಂಡರು. ಇದೇ ಸಂದರ್ಭದಲ್ಲಿ ಶಂಕರ ಜಮದಾರ,ಬಸವರಾಜ ಯಲಗೋಡ ,ಪರಶುರಾಮ ನಾಟೀಕಾರ, ರಮೇಶ ಮೇಟಗಾರ,ಪ್ರಭು ನಾಟೀಕಾರ, ಆನಂದ ಮೇಟಗಾರ,ಸಂಜು ಕಾಮನಕೇರಿ,ಮುತ್ತು ನಾಟಿಕಾರ,ಸಿದ್ದು ಮೆಟಗಾರ,ಕುಮಾರ ಯಾಳವಾರ ಇನ್ನೂ ಪ್ರಮುಖರು ಭಾಗವಹಿಸಿದ್ದರು.

Be the first to comment

Leave a Reply

Your email address will not be published.


*