ದಳಪತಿಗಳ ಗೌರವ ಧನ ಹೆಚ್ಚಳಕ್ಕೆ – ತಾಲೂಕು ದಳಪತಿ ಸಂಘ ಒತ್ತಾಯ.

ವರದಿ ಗ್ಯಾನಪ್ಪ ದೊಡ್ಡಮನಿ ಮಸ್ಕಿ

ಜಿಲ್ಲಾ ಸುದ್ದಿಗಳು 

 ಮಸ್ಕಿ

ತಾಲೂಕಿನಲ್ಲಿರುವ ಎಲ್ಲ ದಳಪತಿಗಳ ಗೌರವಧನ, ತಕ್ಷಣ ಮುಂಜೂರಾತಿ ನೀಡುವಂತೆ ಮತ್ತು ವೇತನ ಹೆಚ್ಚಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಸ್ಕಿ ತಾಲೂಕು ದಳಪತಿಗಳ ಸಂಘದ ನೇತೃತ್ವದಲ್ಲಿ ಮಸ್ಕಿ ತಾಲೂಕು ತಹಶೀಲ್ದಾರ ಕವಿತಾ ಆರ್ ಅವರ ಮುಖಾಂತರ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕ ದಳಪತಿಯ ಸಂಘದ ಅಧ್ಯಕ್ಷರಾದ ಶರಬಣ್ಣ ಬಾಳೆಕಾಯಿ 1976 ಅಂದಿನ ಪೊಲೀಸ್ ಪಾಟೀಲರನ್ನು ತೆಗೆದನಂತರ ಪ್ರತಿ ಗ್ರಾಮದಲ್ಲಿ ದಳಪತಿ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ನೇಮಕ ಮಾಡಿ ಆದೇಶ ಹೊರಡಿಸಿ ಆದೇಶ ಪತ್ರ ಕೊಟ್ಟಿದ್ದಾರೆ. ನಾವು ಪೊಲೀಸ್ ಇಲಾಖೆ ವ್ಯಾಪ್ತಿಯಲ್ಲಿ ಇಲಾಖೆ ಆದೇಶದಂತೆ ಗ್ರಾಮದಲ್ಲಿ ಶಿಸ್ತು ಶಾಂತಿಯನ್ನು ಕಾಪಾಡಿಕೊಂಡು ಬರುತ್ತಿದ್ದೇವೆ. ಯಾವುದೇ ಅಹಿತಕರ ಘಟನೆ ಅಶಾಂತಿ ಕಂಡುಬಂದಲ್ಲಿ ತಕ್ಷಣ ಪೊಲೀಸ್ ಠಾಣೆಗೆ ತಿಳಿಸುತ್ತಿದ್ದೇವೆ ಶಿಸ್ತು ಶಾಂತಿ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಒಬ್ಬ ಹಳ್ಳಿಯ ಪೋಲೀಸನಂತೆ ಕೆಲಸ ಮಾಡುತ್ತಾ ಬಂದಿದ್ದೇವೆ ದಳಪತಿ ಗಳಿಗೆ ಗೌರವಧನ ಕೊಡಬೇಕೆಂದು ಕಾನೂನು ಇದ್ದರು ಸರಕಾರ ಕೊಡದೆ ನಿರ್ಲಕ್ಷಿಸಿದ್ದರಿಂದ ಇದ್ದಾಗ ನಾವು ಅನಿವಾರ್ಯವಾಗಿ ನ್ಯಾಯಾಲಕ್ಕೆ ಮೊರೆ ಹೋಗಿದ್ದೇವೆ ನ್ಯಾಯಾಲವು ಕೂಡ ದಳಪತಿ ಗಳಿಗೆ ಗೌರವಧನ ಕೊಡಬೇಕೆಂದು ಆದೇಶ ಮಾಡಿರುತ್ತದೆ ಆದರೆ ಸರ್ಕಾರ ನಾವು ಇದ್ದ ಗ್ರಾಮಗಳಲ್ಲಿ ರಿಜಿಸ್ಟಾರ್ ಪುಸ್ತಕಗಳ ಮಾಹಿತಿಯನ್ನು ಕೇಳಿರುತ್ತಾರೆ ತಮಗೆ ಆದೇಶಪತ್ರ ವರ್ತು ಪಡಿಸಿ ಯಾವುದೇ ಗ್ರಾಮದ ರಿಜಿಸ್ಟರ್ ಪುಸ್ತಕಗಳನ್ನು ಗಳನ್ನು ನಮಗೆ ಕೊಟ್ಟಿರುವುದಿಲ್ಲ, ನಾವುಗಳು 40 ವರ್ಷಗಳಿಂದ ಗ್ರಾಮದಲ್ಲಿ ಸೇವೆ ಮಾಡುತ್ತಾ ಬಂದಿರುವ ಗ್ರಾಮದ ದಳಪತಿಗಳಿಗೆ ಗೌರವ ಧನ ನೀಡಿರುವುದಿಲ್ಲ ಅದಕ್ಕೆ ಸರ್ಕಾರ ಕೂಲಂಕುಷವಾಗಿ ಚರ್ಚಿಸಿ ಮತ್ತು ಪರಿಶೀಲಿಸಿ ತಕ್ಷಣವೇ ಗೌರವಧನ ಹೆಚ್ಚಿಸಬೇಕು’ ಹಾಗೂ ಗೌರವಧನ ತಕ್ಷಣ ಮಂಜೂರು ಮಾಡಬೇಕೆಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಶರಬಣ್ಣ ಬಾಳೆಕಾಯಿ ಬೈಲಗುಡ್ಡ ದಳಪತಿ ಸಂಘದ ಅಧ್ಯಕ್ಷರು ಮಸ್ಕಿ, ವೀರಣ್ಣ ದಳಪತಿ, ಹನುಮಂತ, ಸಂಗನಗೌಡ, ಹಿರೇಲಿಂಗಪ್ಪ ಸೇರಿ ಅನೇಕರು ಭಾಗವಹಿಸಿದ್ದರು.

CHETAN KENDULI

Be the first to comment

Leave a Reply

Your email address will not be published.


*