ರಾಜ್ಯ ಸುದ್ದಿ
ಕುಮಟಾ: ಕುಮಟಾ ಬ್ಲಾಕ್ ಕಾಂಗ್ರೆಸ್ ಇಂಟೆಕ್‍ಸೆಲ್ ಅಧ್ಯಕ್ಷ ಹಾಗೂ ಸಾಮಾಜಿಕ ಕಾರ್ಯಕರ್ತ ಮನೋಜ ನಾಯ್ಕ ಮಿರ್ಜಾನ (54) ಭಾನುವಾರ ಕೊರೊನಾ ಮಹಾಮಾರಿಯಿಂದ ಕೊನೆಯುಸಿರೆಳೆದ್ದಾರೆ.
ತಾಲೂಕಿನ ಮಿರ್ಜಾನಿನ ನಿವಾಸಿಯಾದ ಇವರು ಕಾಂಗ್ರೆಸ್‍ನ ಸಕ್ರಿಯ ಕಾರ್ಯಕರ್ತರಲ್ಲದೇ, ಇಂಟೆಕ್‍ಸೆಲ್ ಅಧ್ಯಕ್ಷರಾಗಿ ಪಕ್ಷದ ಏಳ್ಗೆಗೆ ಸಾಕಷ್ಟು ಶ್ರಮಿಸಿದ್ದರು. ಅಲ್ಲದೇ, ತಮ್ಮ ಸಾಮಾಜಿಕ ಕಾರ್ಯಗಳ ಮೂಲಕ ಅಪಾರ ಜನಮನ್ನಣೆಗಳಿಸಿದ್ದರು. ಕೆಲ ದಿನಗಳ ಹಿಂದೆ ಕೊರೊನಾ ಸೋಂಕಿಗೆ ತುತ್ತಾದ ಇವರು, ಕೆ.ಎಸ್.ಹೆಗಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ಮೃತಪಟ್ಟಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಮಾಜಿ ಶಾಸಕಿ ಶಾರದಾ ಮೋಹನ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಲ್.ನಾಯ್ಕ ಸೇರಿದಂತೆ ತಾಲೂಕಿನ ಗಣ್ಯರು ಮೃತರ ಆತ್ಮಕ್ಕೆ ಶಾಂತಿ ಕೋರಿ, ಕುಟುಂಬಕ್ಕೆ ಅವರ ಅಗಲುವಿಕೆಯ ಶಕ್ತಿ ಭರಿಸಲೆಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ.
Be the first to comment