ರಾಜ್ಯ ಸುದ್ದಿಗಳು
ಶೃಂಗೇರಿ
ಕಳೆದೆರಡು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿದ್ದ ಶೃಂಗೇರಿ ಮೂಲದ ಹಿಂದೂ ಯುವತಿ ಹಾಗೂ ಮೂಡಿಗೆರೆ ಮೂಲದ ಮುಸ್ಲಿಂ ಯುವಕ ಜುನೈದ್ ಪರಾರಿ ಸುದ್ದಿಗೆ ಹೊಸ ಟ್ವಿಸ್ಟ್ ಸಿಕ್ಕಿದೆ. ಘಟನೆಗೆ ಸಂಬಂಧಿಸಿದಂತೆ ಯುವತಿ ವಿಡಿಯೋ ಹರಿಯಬಿಟ್ಟಿದ್ದು ಬಜರಂಗದಳದ ಮೇಲೆಯೇ ಆರೋಪ ಹೊರಿಸಿದ್ದಾಳೆ.
ಯುವತಿ ಈಗ ಅಜ್ಞಾತ ಸ್ಥಳದಿಂದ ವೀಡಿಯೋ ಶೇರ್ ಮಾಡಿದ್ದು, ನಾನು ಜುನೈದ್ ಮುಸ್ಲಿಂ ಯುವಕ ಎಂದು ಗೊತ್ತಿದ್ದೇ ಆತನನ್ನು ಪ್ರೀತಿಸಿದ್ದೇನೆ. ಅಲ್ಲದೇ ನಾವು ಇಬ್ಬರೂ ಇಷ್ಟಪಟ್ಟು ಈಗ ಮದುವೆಯಾಗುತ್ತಿದ್ದೇವೆ. ಆದರೆ ಈ ಹಿಂದೆ ಬಜರಂಗದಳದವರು ನಮಗೆ ಬೆದರಿಕೆ ಹಾಕಿ ಬೇರ್ಪಡಿಸಿದ್ದರು, ನಮ್ಮ ಹಾಗೂ ಜುನೈದ್ ಕುಟುಂಬಕ್ಕೆ ಏನೇ ತೊಂದರೆಯಾಗಬಾರದು ಎಂದು ಯುವತಿ ವೀಡಿಯೋದಲ್ಲಿ ಹೇಳಿಕೆ ನೀಡುವ ಮೂಲಕ ಮತ್ತೊಮ್ಮೆ ಯೂಟರ್ನ್ ಹೊಡೆದಿದ್ದಾಳೆ.
ಜುನೈದ್ ವಿರುದ್ಧ ಠಾಣೆ ಮೆಟ್ಟಿಲೇರಿದ್ದ ಯುವತಿ:ತಾನು ಶೃಂಗೇರಿಯಲ್ಲಿ ಕಾಲೇಜು ಓದುತ್ತಿದ್ದ ದಿನಗಳಲ್ಲಿ ಈತನ ಪರಿಚಯವಾಗಿದ್ದು, ಆನಂತರ ನಾವು ಶಿವಮೊಗ್ಗದಲ್ಲಿ ಬಾಡಿಗೆ ಮನೆಯಲ್ಲಿದ್ದೆವು. ಅಲ್ಲಿಗೆ ಆಗಾಗ ಜುನೈದ್ ಬರುತ್ತಿದ್ದು, ತನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಅಲ್ಲದೇ ಆತ ತನ್ನ ಹೆಸರು ಜಗನ್, ತಾನೊಬ್ಬ ಶೆಟ್ಟಿ ಜನಾಂಗಕ್ಕೆ ಸೇರಿದವನಾಗಿದ್ದೇನೆ ಎಂದು ಹೇಳಿಕೊಂಡಿದ್ದು, ಆತನ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಈ ಹಿಂದೆ 2021ರ ಅಕ್ಟೋಬರ್ ವೇಳೆ ಯುವತಿ ಇದೇ ಜುನೈದ್ ವಿರುದ್ಧ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು.ಅತ್ಯಾಚಾರದ ಆರೋಪದಡಿ ಜೈಲು ಸೇರಿದ್ದ ಜುನೈದ್ತಾನೊಬ್ಬ ಶೆಟ್ಟಿ ಜನಾಂಗಕ್ಕೆ ಸೇರಿದ ಹಿಂದೂ, ತನ್ನ ಹೆಸರು ಜಗನ್ ಎಂದು ವಂಚಿಸಿದ್ದ ಜುನೈದ್ ಇದೇ ರೀತಿ ಅನೇಕ ಯುವತಿಯರಿಗೂ ವಂಚಿಸಿದ್ದಾನೆಂಬ ಆರೋಪವಿದೆ. ಅಲ್ಲದೇ ಇದೇ ಯುವತಿ 2021ರ ಅಕ್ಟೋಬರ್ ತಿಂಗಳಿನಲ್ಲಿ ನೀಡಿದ ದೂರಿನ ಅನ್ವಯ ಪೊಲೀಸರು ಆರೋಪಿ ಜುನೈದ್ ಮೇಲೆ ಅತ್ಯಾಚಾರ ಪ್ರಕರಣ ದಾಖಲಿಸಿ ಬಂಧಿಸಿದ್ದರು. ಕಳೆದ 2 ತಿಂಗಳಿನಿಂದ ಜೈಲಿನಲ್ಲಿದ್ದ ಆರೋಪಿ ಜುನೈದ್ ಕೆಲ ದಿನದ ಹಿಂದೆ ರಿಲೀಸ್ ಆಗಿದ್ದ. ಈಗ ಅದೇ ಆರೋಪಿ ಜುನೈದ್ ಜೊತೆ ಯುವತಿ ಪರಾರಿಯಾಗಿದ್ದಾಳೆ.
ಲವ್ ಜಿಹಾದ್ ಶಂಕೆ, ವ್ಯಾಪಕ ಆಕ್ರೋಶ -ಬಜರಂಗದಳ ಶೃಂಗೇರಿ ಖಂಡನೆ…!!ಈ ಘಟನೆಗೆ ಸಂಬಂಧಿಸಿದಂತೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆರೋಪಿಯನ್ನು ಈ ಕೂಡಲೇ ಬಂಧಿಸಬೇಕು, ಹಿಂದೂ ಕುಟುಂಬದ ಯುವತಿಯರು ಹಾಗೂ ಮಹಿಳೆಯರು ಈ ಕುರಿತು ಹೆಚ್ಚಿನ ನಿಗಾವಹಿಸಬೇಕು ಎಂಬ ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಲಾಗುತ್ತಿದೆ. ಹಿಂದೂ ಪೋಷಕರು ತಮ್ಮ ಮಕ್ಕಳು ಕಾಲೇಜು, ಉದ್ಯೋಗ, ಮೊಬೈಲ್ ಗಳಲ್ಲಿ ಅಥವಾ ಮನೆಯಿಂದ ಹೊರಗಡೆ ಯಾವ ರೀತಿ ಇದ್ದಾರೆ ಎನ್ನುವುದನ್ನು ಗಮನಿಸಬೇಕು, ಹಿಂದೂ ಸಹೋದರಿಯರೂ ಕೂಡ ಹೆಚ್ಚಿನ ರೀತಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಮುಸಲ್ಮಾನ ಯುವಕರಿಂದ ದೂರವಿರಬೇಕು. ಸಾಮಾಜಿಕ ಜಾಲತಾಣ ಉಪಯೋಗ ಮಾಡುವಾಗ ಎಚ್ಚರ ವಹಿಸಬೇಕು. ಸರ್ಕಾರದ ಮಟ್ಟದಲ್ಲಿ ಲವ್ ಜಿಹಾದ್ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಶೃಂಗೇರಿಯ ಬಜರಂಗದಳ ತಾಲೂಕು ಸಂಚಾಲಕ ರವಿಸಂಜಯ್ ಪೂಜಾರಿ ಹೇಳಿಕೆ ನೀಡಿದ್ದಾರೆ.
ಮೋಸ ಮಾಡಿ ಲೈಂಗಿಕ ಸಂಪರ್ಕ, ದೂರು ನೀಡಿದ್ದ ಯುವತಿಯ ಯೂಟರ್ನ್ ಯಾಕೆ…!?ಇದೇ ಯುವತಿ ಈ ಹಿಂದೆ 2021ರ ಅಕ್ಟೋಬರ್ ತಿಂಗಳಿನಲ್ಲಿ ಇದೇ ಜುನೈದ್ ವಿರುದ್ಧವೇ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ದೂರಿನಲ್ಲಿ ತನಗೆ ಜುನೈದ್ ಮೋಸ ಮಾಡಿದ್ದಾರೆ ಆತ ತಾನೊಬ್ಬ ಶೆಟ್ಟಿ ಜನಾಂಗಕ್ಕೆ ಸೇರಿದ ಹಿಂದೂ ಎಂದು ನಂಬಿಸಿ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ ಎಂದು ಆರೋಪಿಸಿದ್ದಳು. ದೂರಿನ ಆಧಾರದ ಮೇರೆಗೆ ಜುನೈದ್ ಎರಡು ತಿಂಗಳು ಜೈಲು ಪಾಲಾಗಿದ್ದ.ಆದರೆ ಈಗ ಆಕೆ ದಿಢೀರ್ ಕಾಣೆಯಾಗಿರುವುದಲ್ಲದೇ ತನಗೆ ಮೊದಲೇ ಎಲ್ಲಾ ವಿಷಯ ತಿಳಿದಿತ್ತು ಎಂದು ಈಗ ಹೇಳಿಕೆ ನೀಡಿರುವ ಜೊತೆಗೆ ವೀಡಿಯೊ ಕೊನೆಯಲ್ಲಿ ಆಕೆ ವೀಡಿಯೋ ಮಾಡಿದವರ ಜೊತೆಗಿನ ಸಂಭಾಷಣೆ ನೋಡಿದಾಗ ಹೇಳಿಕೆ ಬಗ್ಗೆ ಸಾಕಷ್ಟು ಅನುಮಾನ ಮೂಡಿಸುತ್ತಿದೆ. ಆಕೆ ನಿಜವಾಗಿಯೂ ಈ ರೀತಿ ಹೇಳಿಕೆ ನೀಡಿದ್ದಾಳೋ ಇಲ್ಲವೇ ಜೀವ ಬೆದರಿಕೆಯ ಒತ್ತಡಕ್ಕೆ ಮಣಿದು ಹೇಳಿಕೆ ನೀಡಿದ್ದಾಳೋ ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ.
Be the first to comment