ಅಲೆಮಾರಿ/ಅರೆ ಅಲೆಮಾರಿ ಜನಾಂಗದವರು ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಅರಿವು ಕಾರ್ಯಕ್ರಮ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ:ಇಲಕಲ್ಲ ತಾಲೂಕಿನ ಕೆಲೂರ ಗ್ರಾಮದ ಹೆಳವರ ಕಾಲೋಣಿಯಲ್ಲಿರುವ ಶ್ರೀ ದುರ್ಗಾದೇವಿ ದೇವಾಲಯದ ಸಭಾಂಗಣದಲ್ಲಿ ಸಸಿಗೆ ನೀರುಣಿಸುವುದರೊಂದಿಗೆ ಅಲೆಮಾರಿ, ಅರೆ ಅಲೆಮಾರಿ ಜನಾಂಗದವರಿಗೆ ಸರಕಾರದ ವಿವಿಧ ಯೋಜನೆಗಳ ಅರಿವು ಮೂಡಿಸುವ ಕಾರ್ಯಾಗಾರ ಹುನಗುಂದ ಇಲಕಲ್ಲ ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯವತಿಯಿಂದ ನಡೆಸಲಾಯಿತು.

ತಾಲೂಕಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಯಾದ ಜಿ.ಎನ್.ಕ್ಯಾಡಿಯವರು ಸರ್ಕಾರ ಅಲೆಮಾರಿ ಜನಾಂಗದವರು ವಾಸಿಸುವ ಕಾಲೊನಿಗಳನ್ನು ಗುರುತಿಸಿ ಸರ್ಕಾರದಿಂದ ಸಿಗುವ ಸೌಲಭ್ಯಗಳ ಮಾಹಿತಿ ನೀಡಲು ಈ ಅರಿವು ಕಾರ್ಯಕ್ರಮ ಎಂದು ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ತಿಳಿಸಿದರು.ಇದರೊಂದಿಗೆ ತಮ್ಮ ಇಲಾಖೆಯಿಂದ ಸಿಗುವ ಸೌಲಭ್ಯಗಳ ಮಾಹಿತಿ ನೀಡಿದರು.

ಶಿಕ್ಷ ಣದಿಂದ ಸಮಾಜದ ಸರ್ವತೋಮುಖ ಅಭಿವೃದ್ಧಿ ಸಾಧ್ಯ. ಹೀಗಾಗಿ ಅಲೆಮಾರಿ, ಅರೆ ಅಲೆಮಾರಿ ಜನಾಂಗದವರು ಮೊದಲು ತಮ್ಮ ಮಕ್ಕಳ ಶಿಕ್ಷ ಣಕ್ಕೆ ಆದ್ಯತೆ ನೀಡಬೇಕು. ಅಲೆಮಾರಿ, ಅರೆ ಅಲೆಮಾರಿ ಜನಾಂಗದವರ ಅಭಿವೃದ್ಧಿಗಾಗಿ ಸರಕಾರ ಪರಿಣಾಮಕಾರಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಅನುಕೂಲವಾಗುವಂತೆ ಬಿಸಿಎಂ ಇಲಾಖೆಯಲ್ಲಿ ರಾಜ್ಯ ಮಟ್ಟದ ಅಲೆಮಾರಿ, ಅರೆ ಅಲೆಮಾರಿ ಅಭಿವೃದ್ಧಿ ಮಂಡಳಿ, ಅಲೆಮಾರಿ ಕೋಶ ರಚಿಸಲಾಗಿದೆ. ಅಲೆಮಾರಿ, ಅರೆ ಅಲೆಮಾರಿ ಜನಾಂಗದಲ್ಲಿ ಒಟ್ಟು 46 ಜಾತಿಗಳು ಒಳಪಡುತ್ತವೆ ಈಗ ಪ್ರತ್ಯೇಕ ಅಲೆಮಾರಿ ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪಿಸಲಾಗಿದೆ ಎಂದು ತಿಳಿಸಿದರು.ಮೆಟ್ರಿಕ್‌ ಪೂರ್ವ ವಿದ್ಯಾರ್ಥಿಗಳಿಗೆ ವಿಶೇಷ ಪ್ರೋತ್ಸಾಹ ಧನ, ಮೆಟ್ರಿಕ್‌ ನಂತರದ ವಿದ್ಯಾರ್ಥಿಗಳಿಗೆ ಅರ್ಹತಾ ವಿದ್ಯಾರ್ಥಿ ವೇತನ. ಪ್ರತಿಷ್ಠಿತ ಶಾಲೆಗಳಲ್ಲಿ ಪ್ರವೇಶಾವಕಾಶ, ಅರಿವು ಮೂಡಿಸುವ ಕಾರ್ಯಕ್ರಮ, ಮೂಲಭೂತ ಸೌಕರ್ಯಗಳು, ವಸತಿ ಸೌಲಭ್ಯ, ನಿವೇಶನ ಹಂಚಿಕೆಗಾಗಿ ಜಮೀನು ಖರೀದಿ ಅಲೆಮಾರಿ ಕೋಶದಿಂದ ಅನುಷ್ಠಾನ ಮಾಡುವ ಕಾರ್ಯಗಳಾಗಿವೆ ಎಂದು ಹೆಳವ ಜನಾಂಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಶರಣಪ್ಪ ಹೆಳವರ ಸಲಹೆ ನೀಡಿದರು.

ಅಲೆಮಾರಿ ಜನಾಂಗದವರಿಗೆ ಈ ಮೊದಲು ನೆಲೆ ಇಲ್ಲದೆ ಊರೂರು ಅಲೆಯುತ್ತ ತಮ್ಮ ಜೀವನ ಸಾಗಿಸುತ್ತಿದ್ದರು.ಜನಾಂಗದ ಅಭಿವೃದ್ಧಿ ಸರ್ಕಾರದ ಯೋಜನೆಗಳ ಜೋತೆಗೆ ಸಮುದಾಯದಲ್ಲಿ ಮುಂದುವರೆದ ವ್ಯಕ್ತಿಗಳಿಂದ ಸಾದ್ಯ.ಶಾಸಕರ ಅನುದಾನದಲ್ಲಿ ಅಲೆಮಾರಿ ಜನಾಂಗದವರಿಗೆ ಸಿಗುವ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ಕೊಡಿಸುವ ಪ್ರಯತ್ನ ಮಾಡುವೆ ಎಂದು ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಪಿಕೆಪಿಎಸ್ ಅಧ್ಯಕ್ಷರು ಹಾಗೂ ವಿಮ ಬ್ಯಾಂಕಿನ ಉಪಾಧ್ಯಕ್ಷರಾದ ಬಸವರಾಜ ನಾಡಗೌಡರ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮಹಾಲಿಂಗೇಶ ನಾಡಗೌಡರ ಮಾತನಾಡಿ ಈ ಗ್ರಾಮದಲ್ಲಿ 7೦ಕ್ಕೂ ಹೆಚ್ಚು ಹೆಳವ ಅಲೆಮಾರಿ ಕುಟುಂಬಗಳಿದ್ದು, ಸಾಕಷ್ಟು ಹಿಂದುಳಿದಿರುವ ಬಗ್ಗೆ ಅರಿವಿದೆ. ಅನೇಕ ಕುಟುಂಬಗಳಿಗೆ ಮನೆಗಳಿಲ್ಲ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜೊತೆಗೆ ಗ್ರಾಮ ಪಂಚಾಯ್ತಿಯಿಂದ ಈಗ ಬಂದಿರುವ ವಸತಿ ಯೋಜನೆ ಸೌಲಭ್ಯ ಕಲ್ಪಿಸಿಕೊಡಲಾಗುವುದು ಎಂದು ಗ್ರಾ.ಪಂ.ಅಧ್ಯಕ್ಷರು ತಿಳಿಸಿದರು. ಅಲೆಮಾರಿ ಸಮುದಾಯದವರ ಮನೆಮನೆಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗುವುದು.ಅಲೆಮಾರಿ ಜನಾಂಗದವರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವುದರೊಂದಿಗೆ ಮುಖ್ಯವಾಹಿನಿಗೆ ಬರುವಂತಾಗಬೇಕು ಎಂದರು.

ಈ ಸಂದರ್ಭದಲ್ಲಿ ತಾಲೂಕಾ ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ ಎಸ್.ಎಸ್.ಗಡೇದ,ಗ್ರಾಮ ಪಂಚಾಯತಿ ಸದಸ್ಯರಾದ ಶ್ರೀಮತಿ ರೇಣುಕಾ ಕಮತರ,ಬಿಬಿಜಾನ್ ಸಿಮಿಕೇರಿ,ಮಹಾಂತೇಶ ಹೆಳವರ,ಸಂಗಣ್ಣ ನಾಡಗೌಡರ,ಬಾಬು ಸಿಮಿಕೇರಿ, ಸಂಗೊಂದೆಪ್ಪ ಹೆಳವರ, ಯಲ್ಲಪ್ಪ ಹೆಳವರ,ನಾಗಪ್ಪ ಹೆಳವರ,ಸಮಗಪ್ಪ ಕಟ್ಟಿಮನಿ ಸೇರಿದಂತೆ ಇತರರಿದ್ದರು.ಸಂಗಮೇಶ ನಾಡಗೌಡರ ನಿಲಯ ಮೇಲ್ವಿಚಾರಕರು ಹುನಗುಂದ ನಿರೂಪಿಸಿದರು. ಎಮ್.ಎ.ಮಕಾಂದಾರ ನಿಲಯ ಮೇಲ್ವಿಚಾರಕರು ಹುನಗುಂದ ವಂದಿಸಿದರು.

Be the first to comment

Leave a Reply

Your email address will not be published.


*