ಜಿಲ್ಲಾ ಸುದ್ದಿಗಳು
ಮಸ್ಕಿ
ಅಭಿನಂದನ್ ಸಂಸ್ಥೆಯ ವತಿಯಿಂದ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಜಯಂತಿಯನ್ನು ವಿಶೇಷವಾಗಿ ಆಚರಣೆ ಮಾಡುವ ಉದ್ದೇಶದಿಂದಾಗಿ ಡಿಜಿಟಲ್ ಹೀರೋ ಗಳಿಗೆ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು. ಸತತ ಒಂದುವರೆ ವರ್ಷದಿಂದ ಪ್ರತಿ ದಿನವೂ ನಡೆದು ಬರುತ್ತಿರುವ ಡಿಜಿಟಲ್ ಕರ್ನಾಟಕ ಕ್ವಿಜ್ ನಲ್ಲಿ ಗೆದ್ದ ಸ್ಪರ್ಧಾರ್ಥಿಗಳಿಗೆ ಇಂದು ಪದಕ, ಪ್ರಶಸ್ತಿ ಪತ್ರ ಹಾಗೂ ಡಿಜಿಟಲ್ ಹೀರೋ ಬಿರುದು ನೀಡಿ ಗೌರವಿಸಲಾಯಿತು. ಪ್ರಶಸ್ತಿ ಪ್ರಧಾನ ಕಾರ್ಯಕ್ರಮದ ನಂತರ ಮಾತನಾಡಿದ ಮುಖ್ಯ ಅತಿಥಿಗಳಾಗಿ ಬಂದ ಪರಶುರಾಮ ಕೊಡಗುಂಟಿ ಅವರು ಗ್ರಾಮೀಣ ಭಾಗದ ಜನರನ್ನು ಸ್ಪರ್ಧಾತ್ಮಕ ಪರೀಕ್ಷೆಯತ್ತ ಗಮನ ಹರಿಸುವ ನಿಟ್ಟಿನಲ್ಲಿ ಆರಂಭವಾದ ಈ ಡಿಜಿಟಲ್ ಕರ್ನಾಟಕ ಕ್ವಿಜ್ ಎಂಬ ರಸಪ್ರಶ್ನೆ ಕಾರ್ಯಕ್ರಮವು ವಿದ್ಯಾರ್ಥಿಗಳ ಜ್ಞಾನದ ಮಟ್ಟವನ್ನು ಹೆಚ್ಚಿಸುವ ಕಾರ್ಯವನ್ನು ನಿರ್ವಹಿಸುತ್ತಿದೆ. ಪ್ರಸ್ತುತ ದಿನಮಾನದಲ್ಲಿ ಮೊಬೈಲ್ ಫೋನ್ ಅನ್ನು ದುರುಪಯೋಗ ಮಾಡಿಕೊಳ್ಳುವದು ಹೆಚ್ಚಾಗಿದ್ದು ಇಂತಹ ಸಂದರ್ಭದಲ್ಲಿ ಮೊಬೈಲ್ ಮೂಲಕ ನಡೆಯುತ್ತಿರುವ ಈ ರಸಪ್ರಶ್ನೆ ಕಾರ್ಯಕ್ರಮವು ಅತ್ಯುತ್ತಮ ಸಾಧನೆಯಾಗಿದೆ ಈ ಕಾರ್ಯಕ್ರಮ ಈಗಾಗಲೇ 500 ಸಂಚಿಕೆಯನ್ನು ತಲುಪಿ ಮುನ್ನಡೆಯುತ್ತಿದ್ದು, ಇನ್ನೂ ಹೆಚ್ಚಿನ ಸಂಚಿಕೆಯನ್ನು ತಲುಪಲಿ ಎಂದು ಹರಸಿದರು.
ಇದೇ ಸಂದರ್ಭದಲ್ಲಿ ಹಿರಿಯರಾದ ಬಸಲಿಂಗಪ್ಪ ಲಿಂಗಶೆಟ್ಟಿ, ಶಿಕ್ಷಕರಾದ ಮಹಾಂತೇಶ್ ಮತ್ತು ಅಭಿನಂದನ್ ಸಂಸ್ಥೆಯ ಗೌರವಾಧ್ಯಕ್ಷರಾದ ಶಿವಪ್ರಸಾದ್ ಕ್ಯಾತ್ನಟ್ಟಿ, ಸಂಸ್ಥಾಪಕರಾದ ರಾಮಣ್ಣ ಹಂಪರಗುಂದಿ, ಸದಸ್ಯರಾದ ಶೃತಿ ಹಂಪರಗುಂದಿ, ಆಶಾ ಕ್ಯಾತ್ನಟ್ಟಿ, ಮಲ್ಲಿಕಾರ್ಜುನ ಬಡಿಗೇರ, ಅಮೀತ್ ಕುಮಾರ್ ಪುಟ್ಟಿ, ರೇಣುಕಾ ಹಂಪರಗುಂದಿ, ಕಿಶೋರ್ ಹಾಗೂ ಪ್ರಶಸ್ತಿ ಪಡೆದ ಡಿಜಿಟಲ್ ಹೀರೋ ಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
Be the first to comment