ಜಿಲ್ಲಾ ಸುದ್ದಿಗಳು
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ವೆಂಕಟಾಪುರ ಹೊಳೆಯ ನೀರಕಂಠದ ಸಮೀಪದಲ್ಲಿ ಮರಳಿನ ದಿಬ್ಬದ ಮೇಲೆ, ಕಳೆದ ಎರಡು ದಿನಗಳಿಂದ ಮೊಸಳೆ ಕಂಡುಬಂದಿದೆ.ವೆಂಕಟಾಪುರ ನದಿಯಲ್ಲಿ ಮೊಸಳೆ ಕಾಣಿಸಿಕೊಂಡಿದ್ದು ಮೊದಲಬಾರಿಯಾಗಿದೆ. ಮಳೆಯ ರಭಸಕ್ಕೆ ಕಡವಿನಕಟ್ಟೆ ಡ್ಯಾಂ ನಿಂದ ಕೆಳಿಗನ ಭಾಗಕ್ಕೆ ಬಂದಿದೆ ಎನ್ನುವುದು ಕೆಲವರ ವಾದವಾದರೆ, ಇಷ್ಟು ವರ್ಷದಿಂದ ಇಲ್ಲಿಯೇ ಇದ್ದಿರಬಹುದು ಎನ್ನುವುದು ಇನ್ನು ಕೆಲವರ ವಾದವಾಗಿದೆ.
ಶುಕ್ರವಾರ ಸಂಜೆಯ ಸಮಯ ಮರಳು ದಿಬ್ಬದ ಮೇಲೆ ಮಲಗಿದ್ದ ಮೊಸಳೆಯನ್ನು ಕಂಡಿದ್ದ ಸ್ಥಳೀಯರು ಪೋಟೋ ಕ್ಲಿಕ್ಕಿಸಿದ್ದು, ಶನಿವಾರ ಮಧ್ಯಾಹ್ನದ ವೇಳೆಗೆ ಮೊಸಳೆ ಅದೇ ಮರಳು ದಿಬ್ಬದ ಮೇಲೆ ಕಾಣಿಸಿಕೊಂಡಿದೆ. ಸುಮಾರು 5-6 ಅಡಿ ಉದ್ದವಿದ್ದ ಮೊಸಳೆಯಾಗಿದ್ದು ಇದೇ ಪ್ರದೇಶದಲ್ಲಿ ಸದಾ ಜನರು ನೀರಿಗಿಳಿಯುವುದು, ಈಜುವುದು ಮಾಡುತ್ತಿರುವುದರಿಂದ ಮೊಸಳೆ ಕಾಣಿಸಿಕೊಂಡಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.ಮೊಸಳೆ ಕಾಣಿಸಿಕೊಂಡಿದ್ದನ್ನು ಅರಣ್ಯ ಇಲಾಖೆಯ ಗಮನಕ್ಕೆ ತರಲಾಗಿದ್ದೆ, ಕೇವಲ ಒಂದೇ ಮೊಸಳೆ ಇದೆಯೇ ಅಥವಾ ಇನ್ನೂ ಹೆಚ್ಚಿನ ಮೊಸಳೆಗಳಿವೆಯೇ ಎಂದು ತಿಳಿದು ತಕ್ಷಣ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯ ಮಾಡಿದ್ದಾರೆ.
Be the first to comment