ಜಿಲ್ಲಾ ಸುದ್ದಿಗಳು
ಮಂಜೇಶ್ವರ:
ಮಗಳೊಂದಿಗೆ ಹೊಸಂಗಡಿ ಪೇಟೆಗೆ ಸಾಮಾಗ್ರಿ ಖರೀದಿಗೆಂದು ಬಂದಿದ್ದ ವ್ಯಕ್ತಿಯ ಕಳೆದು ಹೋದ ನಗದು, ಅಗತ್ಯ ದಾಖಲೆಗಳನ್ನು ಹೊಂದಿರುವ ಪರ್ಸನ್ನು ಬಜರಂಗದಳ ಕಾರ್ಯಕರ್ತರೊಬ್ಬರು ಪೊಲೀಸ್ ಮುಖಾಂತರ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಹೊಸಂಗಡಿ ಸಮೀಪದ ಬಲ್ಲಂಗುಡೇಲು ನಿವಾಸಿ ಅಬ್ದುಲ್ ಹಜೀಜ್ (45) ರವರು ತನ್ನ ಮಗಳೊಂದಿಗೆ ನಿನ್ನೆ ಸಂಜೆ ವೇಳೆ ಹೊಸಂಗಡಿ ಪೇಟೆಗೆ ಸಾಮಾಗ್ರಿ ಖರೀದಿಗೆ ಕಾರಿನಲ್ಲಿ ಆಗಮಿಸಿದ್ದರು. ಸಾಮಾಗ್ರಿಗಳನ್ನೆಲ್ಲಾ ಖರೀದಿಸಿ ಹಿಂತಿರುಗಿ ತೆರಳಲು ಕಾರನ್ನು ಏರುವ ವೇಳೆ ತಮ್ಮ ಪ್ಯಾಂಟು ಕಿಸೆಯಲ್ಲಿದ್ದ ಪರ್ಸ್ ರಸ್ತೆಗೆ ಬಿದ್ದಿದೆ ಎನ್ನಲಾಗಿದೆ. ಈ ವೇಳೆ ರಸ್ತೆಯಲ್ಲಿ ಬಿದ್ದಿದ್ದ ಪರ್ಸ್ ಬಜರಂಗದಳ ಕಾರ್ಯಕರ್ತನಾದ ಭರತ್ ಕನಿಲ ಇವರಿಗೆ ಲಭಿಸಿದೆ. ಕೂಡಲೇ ಬಿಜೆಪಿ ಮಂಜೇಶ್ವರ ಪಂಚಾಯತ್ ಸಮಿತಿ ಅಧ್ಯಕ್ಷರಾದ ರಾಜೇಶ್ ತೂಮಿನಾಡ್‌ರನ್ನು ಸಂಪರ್ಕಿಸಿ ಪರ್ಸ್ ಲಭಿಸಿದ ಬಗ್ಗೆ ಮಾಹಿತಿ ನೀಡಿ ಮಂಜೇಶ್ವರ ಪೊಲೀಸ್ ಠಾಣೆಗೆ ತೆರಳಿ ಸಿ. ಐ ಸಂತೋಷ್ ರವರಲ್ಲಿ ಈ ಬಗ್ಗೆ ತಿಳಿಸಿ, ಪರ್ಸ್ ಕಳೆದುಕೊಂಡ ಅಬ್ದುಲ್ ಹಜೀಜ್‌ರವರನ್ನು ಠಾಣೆಗೆ ಕರೆಸಿ ಪೋಲಿಸರ ಸಮ್ಮುಖದಲ್ಲಿ ಪರ್ಸ್ ಮತ್ತು ಒಳಗೊಂಡ ನಗದನ್ನು ಹಿಂತಿರುಗಿಸಲಾಯಿತು. ಪರ್ಸ್‌ನಲ್ಲಿ 17,760 ರೂಪಾಯಿ ನಗದು, ವಿದೇಶಿ ಎಟಿಎಮ್ ಕಾರ್ಡ್, ಪಾಸ್‌ಪೋರ್ಟ್ ಅಲ್ಲದೇ ಮುಖ್ಯ ದಾಖಲೆಗಳು ಒಳಗೊಂಡಿತ್ತು. ಬಾರೀ ಮೊತ್ತವನ್ನೊಳಗೊಂಡ ಪರ್ಸ್ ನ್ನು ಮರಳಿ ವಾರಿಸುದಾರರಿಗೆ ನೀಡುವ ಮೂಲಕ ಪ್ರಾಮಾಣಿಕತೆ ಮೆರೆದ ಭರತ್ ಕನಿಲರವರನ್ನು ಅಭಿನಂದಿಸಿದ ಸಾರ್ವಜನಿಕರು.
Be the first to comment