ಜಿಲ್ಲಾ ಸುದ್ದಿಗಳು
ಕುಮಟಾ:
ಇಲ್ಲಿನ ಸಬಾ ಕೌಸರ್ ಜೆ. ಶೇಖ್ ಅವರು ರಸಾಯನಶಾಸ್ತ್ರದಲ್ಲಿ (Synthetic organic chemistry) ಡಾಕ್ಟರೇಟ್ ಪದವಿ ಪಡೆದಿದ್ದಾರೆ.
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ ರವೀಂದ್ರ ಕಾಂಬಳೆ ಅವರ ಮಾರ್ಗದರ್ಶನದಲ್ಲಿ ಸಬಾ ಕೌಸರ್ ಜೆ. ಶೇಖ್ ಅವರು 2019ರಲ್ಲಿ “ಸ್ಟಡೀಸ್ ಆನ್ ಸಿಂಥೆಸಿಕ್ ಆ್ಯಂಡ್ ಫಾರ್ಮಾಕೊಲಾಜಿಕಲ್ ಆ್ಯಕ್ಟಿವಿಟಿಸ್ ಆಫ್ ಸಮ್ ನೈಟ್ರೋಜನ ಹೆಟೆರೋಸೈಕಲ್ಸ್” ಕುರಿತು ಪ್ರಬಂಧ ಮಂಡಿಸಿದ್ದರು. ಶುಕ್ರವಾರ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ ನಡೆದ 70-71ನೇ ಘಟಕೋತ್ಸವ ಸಮಾರಂಭದಲ್ಲಿ ಸಬಾ ಕೌಸರ್ ಜೆ. ಶೇಖ್ ಅವರಿಗೆ ಡಾಕ್ಟರೇಟ್ ಪದವಿ ಪ್ರದಾನ ಮಾಡಿ ಗೌರವಿಸಲಾಯಿತು.
ಕುಮಟಾ ಹೆಡ್ ಬಂದರ್ ಕ್ರಾಸ್ ನಿವಾಸಿಯಾದ ಜಾವೇದ್ ಅನ್ವರ್ ಶೇಖ್ ಮತ್ತು ಶಕೀಲಾ ಶೇಖ್ ದಂಪತಿಯ ಪ್ರಥಮ ಪುತ್ರಿಯಾದ ಇವರು ಎಂಎಸ್‌ಸಿ ಸ್ನಾತಕೋತ್ತರ ಪಧವಿ ಪಡೆದಿದ್ದು, ಈಗ ರಸಾಯನಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ. ಸಬಾ ಅವರ ಈ ಸಾಧನೆಗೆ ಅವರ ತಂದೆ, ತಾಯಿ, ಕುಟುಂಬಸ್ಥರು, ಹಿತೈಷಿಗಳು ಶುಭ ಹಾರೈಸಿದ್ದಾರೆ.
Be the first to comment