ಶಿಥಿಲಾವಸ್ಥೆ ತಲುಪಿರುವ ಮೀನುಮಾರುಕಟ್ಟೆ ನವೀಕರಣಕ್ಕೆ ಸಾರ್ವಜನಿಕರ ಮನವಿ

ವರದಿ - ಜೀವೋತ್ತಮ ಪೈ

ಜಿಲ್ಲಾ ಸುದ್ದಿಗಳು 

ಭಟ್ಕಳ

ಪಟ್ಟಣದ ಚೌಥನಿಯಲ್ಲಿರುವ ಮೀನು ಮಾರುಕಟ್ಟೆಯೂ ಶಿಥಿಲಾವ್ಯಸ್ಥೆಗೆ ತಲುಪಿದ್ದು ಕೂಡಲೆ ಅದನ್ನು ನವಿಕರಣಗೊಳಿಸಬೇಕು ಎಂದು ಸ್ಥಳೀಯ ನಾಗರಿಕರು ಪುರಸಭೆ ಅಧ್ಯಕ್ಷರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.ಪಟ್ಟಣದ ಚೌಥನಿಯಲ್ಲಿರುವ ಮೀನು ಮಾರುಕಟ್ಟೆಯೂ ಅತಿ ಪುರಾತನವಾಗಿದ್ದು ಶಿಥಿಲಾವ್ಯಸ್ಥೆಗೆ ತಲುಪಿದೆ. ಅದರಲ್ಲಿ ಮೀನು ಮಾರಾಟ ಮಾಡುವ ಮಹಿಳೆಯರು ಒಳಗೆ ಹೋಗದೆ ಹೊರಗೆ ಮಾರಾಟ ಮಾಡುತ್ತಾರೆ. ಮೀನಿನ ನೀರು ಅಲ್ಲಿಯೆ ಹರಿಬಿಟ್ಟು ನಂತರ ದುರ್ವಾಸನೆಗೆ ಕಾರಣವಾಗುತ್ತಿದೆ.

CHETAN KENDULI

ಅಲ್ಲದೆ ಹಳೆಯ ಮಾರುಕಟ್ಟೆ ಅತ್ಯಂತ ಕಿರಿದಾಗಿದೆ. ಕೂಡಲೇ ಅದನ್ನು ಮೆಲ್ದರ್ಜೆಗೆ ಏರಿಸಿ ನೂತನವಾದ ಮೀನು ಮಾರುಕಟ್ಟೆಯನ್ನು ನಿರ್ಮಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಪರ್ವೆಜ್ ಅವರಿಗೆ ಸ್ಥಳೀಯರು ಮನವಿ ನೀಡಿದರು.ಹಿಂದೂ ಜಾಗರಣ ಪ್ರಮುಖ ದಿನೇಶ ನಾಯ್ಕ ಚೌಥನಿ, ಶಂಕರ ನಾಯ್ಕ ಚೌಥನಿ, ರಾಘವೇಂದ್ರ ನಾಯ್ಕ ಮುಠಳ್ಳಿ, ವೆಂಕಟೇಶ ಮೇಲ್ ಹಿತ್ತು ಮಂಜುನಾಥ ಕೇರೆಹಿತ್ತು ಕುಮಾರ ನಾಯ್ಕ ಇತರರು ಇದ್ದರು.

Be the first to comment

Leave a Reply

Your email address will not be published.


*