ರಾಜ್ಯ ಸುದ್ದಿಗಳು
ಬೆಂಗಳೂರ
ಮೇ ತಿಂಗಳಲ್ಲಿ ಬಿಸಿಲಿಗೆ ಬೆಂದು ಹೋಗ್ತಿದ್ದ ಬೆಂಗಳೂರು ಕೂಲ್ ಆಗಿದ್ದು,70 ವರ್ಷದಲ್ಲೇ ಅತ್ಯಂತ ತಣ್ಣನೆಯ ವಾತಾವರಣ ದಾಖಲಾಗಿದೆ.ಬೆಂಗಳೂರು ಮೇ ತಿಂಗಳಲ್ಲಿ ಕಂಪ್ಲೀಟ್ ಕೂಲ್ ಆಗಿದ್ದು, ಹಿಮಾಚಲ ಪ್ರದೇಶದ ಕುಲುಮನಾಲಿಗಿಂತಲೂ ತಂಪಾದ ವಾತಾವರಣವಿದೆ. ಸತತ ಮಳೆ, ಮೇಲ್ಮೈ ಸುಳಿಗಾಳಿ ಕಾರಣದಿಂದ ಉಷ್ಣಾಂಶ ತಗ್ಗಿದ್ದು, ಕಳೆದ ಎರಡು ದಿನಗಳಲ್ಲಿ ಗರಿಷ್ಠ ತಾಪಮಾನ 22.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಕಳೆದ ವಾರವೂ ಬೆಂಗಳೂರಿನ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ತಲುಪಿತ್ತು, ಶಿಮ್ಲಾದಲ್ಲಿ ನಿನ್ನೆ 26 ಡಿಗ್ರಿ, ಕುಲುವಿನಲ್ಲಿ 33.2 ಡಿಗ್ರಿ ಸೆಲ್ಸಿಯಸ್ ಇದ್ದು, ಬೆಂಗಳೂರಿನಲ್ಲಿ 70 ವರ್ಷದಲ್ಲೇ ದಾಖಲೆ ತಾಪಮಾನ ಇಳಿಕೆ ಕಂಡಿದೆ. ಗುರುವಾರ ರಾತ್ರಿ 8.30ರ ವೇಳೆಗೆ 20 ಡಿಗ್ರಿ ಸೆಲ್ಸಿಯಸ್ ಇತ್ತು. ಈ ವರ್ಷದ ಮೇನಲ್ಲಿ ಸರಾಸರಿ ಉಷ್ಣಾಂಶ 21.3 ಡಿಗ್ರಿ ಸೆಲ್ಸಿಯಸ್ ಇದ್ದು, 1972ರ ಮೇ 14ಕ್ಕೆ 22.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು
Be the first to comment