ಮೀನುಗಾರರನ್ನು ಒಕ್ಕಲೆಬ್ಬಿಸುವ ಕ್ರಮದ ವಿರುದ್ಧ ಹೋರಾಟ ಅನಿವಾರ್ಯ -ಮೀನುಗಾರರ ಸಂಘಟನೆ

ವರದಿ-ಕುಮಾರ್ ನಾಯ್ಕ.ಭಟ್ಕಳ

ಜಿಲ್ಲಾ ಸುದ್ದಿಗಳು 

ಕಾರವಾರ

ಕಾಸರಕೋಡ ವಾಣಿಜ್ಯ ಬಂದರು ಯೋಜನೆಯನ್ನು ಸರ್ಕಾರ ಕೈಬಿಡುವ ವರೆಗೆ ಮತ್ತು ಕರ್ನಾಟಕ ರಾಜ್ಯದ ಕರಾವಳಿ ತೀರಗಳನ್ನು ಬೃಹತ್ ಯೋಜನೆಗಳಿಗಾಗಿ ವಿರೂಪಗೊಳಿಸುವ ಮತ್ತು ಮೀನುಗಾರರನ್ನು ಒಕ್ಕಲೆಬ್ಬಿಸುವ ಪ್ರಜಾತಂತ್ರ ವಿರೋಧಿ ಕ್ರಮದ ವಿರುದ್ಧ ಜಿಲ್ಲೆಯಾದ್ಯಂತ ಮೀನುಗಾರರ ಹೋರಾಟ ವನ್ನು ತೀವ್ರ ಗೊಳಿಸುವದು ಅನಿವಾರ್ಯ ವಾಗುವದು ಎಂದು ಹೋರಾಟ ಸಮಿತಿ ಸುದ್ದಿ ಗೋಷ್ಟಿಯಲ್ಲಿ ತಿಳಿಸಿದ್ದಾರೆ.ಅಂತರರಾಷ್ಟ್ರೀಯ ಬ್ಲೂಫ್ಲಾಗ್ ಮನ್ನಣೆ ಪಡೆದ ಉತ್ತರ ಕನ್ನಡ ಕರಾವಳಿ ಭಾಗದ ಹೊನ್ನಾವರ ತಾಲೂಕಿನ ಕಾಸರಕೋಡ ಇಕೋ ಬೀಚ್ ಗೆ ಹೊಂದಿಕೊAಡಿರುವ ಸಾಂಪ್ರದಾಯಿಕ ಮೀನುಗಾರಿಕೆಗೆ ಆಶ್ರಯತಾಣವಾಗಿರುವ ಇಲ್ಲಿನ ಸಮುದ್ರ ತೀರದಲ್ಲಿ ಪರಿಸರ, ಜೀವವೈವಿಧ್ಯತೆ,ಸಾಂಪ್ರದಾಯಿಕ ಮೀನುಗಾರಿಕೆ ಮತ್ತು ಜನರ ಆರೋಗ್ಯಕ್ಕೆ ಮಾರಕವಾಗಬಲ್ಲ ಖಾಸಗಿ ವಾಣಿಜ್ಯ ಬಂದರು ನಿರ್ಮಾಣ ಯೋಜನೆಗೆ ಸ್ಥಳೀಯ ಸಾರ್ವಜನಿಕರು ತೀವ್ರ ವಿರೋಧ ವ್ಯಕ್ತಪಡಿಸುತ್ತ ಬಂದಿದ್ದು ಮಾನವ ಹಕ್ಕುಗಳನ್ನು ದಮನಮಾಡುವ ಆತಂಕ ಮತ್ತು ಬೆದರಿಕೆಗಳಿದ್ದು ರಾಜ್ಯಸರಕಾರ ಮತ್ತು ವಿರೋಧ ಪಕ್ಷದ ನಾಯಕರು ಸಾರ್ವಜನಿಕ ಹಿತಾಸಕ್ತಿಯ ವಿಚಾರದಲ್ಲಿ ಕೂಡಲೇ ಮಧ್ಯಪ್ರವೇಶಮಾಡಿ, ಹೊನ್ನಾವರ ತಾಲ್ಲೂಕಿನ ಕಾಸರಕೋಡ ಟೊಂಕ ಪ್ರದೇಶಕ್ಕೆ ಭೇಟಿ ನೀಡಿ ದೌರ್ಜನ್ಯಕ್ಕೆ ಒಳಗಾಗಿರುವ ಮೀನುಗಾರರ ಹಿತರಕ್ಷಣೆ ಮಾಡುವ ಜೊತೆಯಲ್ಲಿ – ಮಾನವಹಕ್ಕುಗಳ ರಕ್ಷಣೆಯೂ ಸೇರಿದಂತೆ ಸ್ಥಳೀಯ ಸಾರ್ವಜನಿಕರ ಹಿತಾಸಕ್ತಿಯನ್ನು ರಕ್ಷಿಸುವಂತೆ ರಾಷ್ಟ್ರೀಯ ಮೀನುಗಾರರ ಸಂಘಟನೆಯ ಕರ್ನಾಟಕ ಘಟಕವು ಸುದ್ದಿಗೋಷ್ಟಿಯಲ್ಲಿ ಆಗ್ರಹ ಪಡಿಸುತ್ತದೆ.ರಾಜ್ಯದ ಕರಾವಳಿಯ ಕಾರವಾರ ಮತ್ತು ಮಂಗಳೂರಿನ ಪಣಂಬೂರಿನಲ್ಲಿ ಈಗಾಗಲೇ ಎರಡು ಬೃಹತ್ ವಾಣಿಜ್ಯ ಬಂದರುಗಳು ಕಾರ್ಯಾಚರಿಸುತ್ತಿವೆ. ಜಿಲ್ಲೆಯ ಬೇಲೆಕೇರಿ ಬಂದರಿನಿAದಲೂ ಸಹ ಕಬ್ಬಿಣದ ಅದಿರನ್ನು ರಫ್ತು ಮಾಡಲಾಗುತ್ತಿದೆ. ಹೀಗಿದ್ದು ಪ್ರವಾಸಿತಾಣವಾಗಿರುವ ಅಂತರಾಷ್ಟ್ರೀಯ ಬ್ಲೂಫ್ಲಾಗ್ ಇಕೋ ಬೀಚ್‌ಗೆ ಹೊಂದಿಕೊAಡ ಹೊನ್ನಾವರ ಕಾಸರಕೋಡಿನಲ್ಲಿ -ಸ್ಥಳೀಯ ಪರಿಸರ ಮತ್ತು ಸಾಂಪ್ರದಾಯಿಕ ಮೀನುಗಾರಿಕೆಗೆ ಮಾರಕವಾಗಬಲ್ಲ ಖಾಸಗಿ ಮೂಲದ ಇನ್ನೊಂದು ವಾಣಿಜ್ಯ ಬಂದರು ನಿರ್ಮಾಣ ಮಾಡುವ ಅಗತ್ಯವಾದರೂ ಏನಿದೆ? ಎನ್ನುವದು ಕರಾವಳಿ ಭಾಗದ ಜನರ ಪ್ರಶ್ನೆಯಾಗಿದೆ. ನಿಸರ್ಗದತ್ತ ಕಾರವಾರ ಕಡಲತೀರ ಸಹಿತ ಉತ್ತರ ಕನ್ನಡ ಜಿಲ್ಲೆಯ ಕಡಲತೀರಗಳನ್ನು ಅಭಿವೃದ್ಧಿಯ ಹೆಸರಿನಲ್ಲಿ ಬಂಡವಾಳ ಆಕರ್ಷಿಸುವ ನೆಪದಲ್ಲಿ ವಿರೂಪಗೊಳಿಸುವ ಸರ್ಕಾರದ ಉದ್ದೇಶಿತ ಖಾಸಗಿ ವಾಣಿಜ್ಯ ಬಂದರು ಯೋಜನೆಯ ವಿಚಾರವಾಗಿ ಸ್ಥಳೀಯ ಪರಿಸರ, ಜೀವ ವೈವಿಧ್ಯತೆ, ಜನರ ಆರೋಗ್ಯ, ಸಾಂಪ್ರದಾಯಿಕ ಮೀನುಗಾರಿಕೆ, ವೃತ್ತಿ ಭದ್ರತೆ ಸಹಿತ ಸ್ಥಳೀಯರ ಕೆಲವು ಸಂದೇಹ ಮತ್ತು ಪ್ರಶ್ನಾವಳಿಗೆ ಸರ್ಕಾರ, ಕಂಪನಿ ಮತ್ತು ಬಂದರು ಇಲಾಖೆಯಿಂದ ಅಧೀಕೃತ ಲಿಖಿತ ಉತ್ತರವನ್ನು ಬಯಸಿದ್ದೆವು. ಆದರೆ ಸಾರ್ವಜನಿಕ ಹಿತಾಸಕ್ತಿಯ ಈವಿಚಾರವಾಗಿ ಸರಕಾರವಾಗಲೀ, ಜಿಲ್ಲಾ ಆಡಳಿತವಾಗಲೀ ಅಥವಾ ಸಂಬAಧಪಟ್ಟ ಕಂಪನಿ ಇಲಾಖೆಯಾಗಲೀ ಈವರೆಗೆ ಸ್ಪಂದಿಸಿಲ್ಲ.

CHETAN KENDULI

ಈ ಹಿನ್ನೆಲೆಯಲ್ಲಿ ಉದ್ದೇಶಿತ ಕಾಸರಕೋಡ ವಾಣಿಜ್ಯ ಬಂದರು ಯೋಜನೆಯನ್ನು ಸರ್ಕಾರ ಕೈಬಿಡುವ ವರೆಗೆ ಮತ್ತು ಕರ್ನಾಟಕ ರಾಜ್ಯಧ ಕರಾವಳಿ ತೀರಗಳನ್ನು ಬ್ರಹತ್ ಯೋಜನೆಗಳಿಗಾಗಿ ವಿರೂಪಗೊಳಿಸುವ ಮತ್ತು ಮೀನುಗಾರರನ್ನು ಒಕ್ಕಲೆಬ್ಬಿಸುವ ಪ್ರಜಾತಂತ್ರ ವಿರೋಧಿ ಕ್ರಮದ ವಿರುದ್ಧ ಜಿಲ್ಲೆಯಾದ್ಯಂತ ಮೀನುಗಾರರ ಹೋರಾಟ ವನ್ನು ತೀವ್ರ ಗೊಳಿಸುವದು ಅನಿವಾರ್ಯ ವಾಗುವದು ಎಂದು ಈ ಮೂಲಕ ಸರ್ಕಾರದ ಗಮನ ಸೆಳೆದು ಸಮಸ್ಯೆಗಳ ಪರಿಹಾರಕ್ಕೆ ಆಗ್ರಹ ಪಡಿಸುತ್ತಿದ್ದೇವೆ ಎಂದು ಸುದ್ದಿ ಗೋಷ್ಟಿಯಲ್ಲಿ ತಿಳಿಸದ್ದಾರೆ.ಈ ಸಂದರ್ಭದಲ್ಲಿ ರಾಷ್ಟ್ರೀಯ ಮೀನುಗಾರರ ಸಂಘಟನೆ ರಾಜ್ಯ ಕಾರ್ಯದರ್ಶಿ ಚಂದ್ರಕಾoತ ಕೊಚರೇಕರ. ಹೊನ್ನಾವರ. ಪ್ರಕಾಶ ಮೇಸ್ತ, ಕಡಲ ವಿಜ್ಞಾನಿಗಳು, ವಿವನ್ ಫರ್ನಾಂಡಿಸ್ ಕಾರ್ಯದರ್ಶಿ ಪರ್ಶಿಯನ್ ಬೋಟ್ ಮಾಲೀಕರ ಸಂಘ. ಕಾಸರಕೋಡ, ಗಣಪತಿ ಈಶ್ವರ ತಾಂಡೇಲ್ ಅಧ್ಯಕ್ಷರು ಹಸಿಮೀನು ವ್ಯಾಪರಸ್ಥರ ಸಂಘಕಾಸರಕೋಡ ಹೊನ್ನಾವರ, ರಾಜು. ಡಿ. ತಾಂಡೇಲ ಸದಸ್ಯರು ಬಂದರು ವಿರೋಧಿ ಹೋರಾಟ ಸಮಿತಿ ಕಾಸರಕೋಡ ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*