ಜಿಲ್ಲಾ ಸುದ್ದಿಗಳು
ಹುಬ್ಬಳ್ಳಿ
ನಿರಾಮಯ ಫೌಂಡೇಶನ್(ರಿ), ಹುಬ್ಬಳ್ಳಿ ವತಿಯಿಂದ ಕಾರ್ಗಿಲ್ ವಿಜಯೋತ್ಸವದ 22ನೇ ವರ್ಷಾಚರಣೆಯ ಪ್ರಯುಕ್ತ ದೇಶಕ್ಕಾಗಿ ಹುತಾತ್ಮರಾದ ವೀರಯೋಧರ ಬಲಿದಾನದ ಸ್ಮರಣೆಯಲ್ಲಿ ನಿರಾಮಯ ಫೌಂಡೇಶನ್ ವತಿಯಿಂದ ಹುಬ್ಬಳ್ಳಿಯ ಕುಸುಗಲ್ ರಸ್ತೆಯ ಸ್ಪೋರ್ಟ್ಸ್ ಪಾರ್ಕ ನಲ್ಲಿ ಹಮ್ಮಿಕೊಂಡ *ರಕ್ತದಾನ ಶಿಬಿರ* ಕ್ಕೆ ಡಾ. ಶ್ರೀ ಎ .ಸಿ.ವಾಲಿ ಗುರುಗಳು ತಾವೇ ಸ್ವತಃ ರಕ್ತದಾನ ಮಾಡುವ ಮೂಲಕ ಚಾಲನೆ ನೀಡಿದರು.
ನಂತರ ನಡೆದ ಸಭಾ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದ ಶ್ರೀಗಳು ನಾವೆಲ್ಲರೂ ಈ ಬದುಕನ್ನು ಸಾರ್ಥಕಗೊಳಿಸಲು ಸಮಾಜಕ್ಕಾಗಿ ನಮ್ಮನ್ನು ಮೀಸಲಿಡಬೇಕು. ಹುತಾತ್ಮರಾದ ಸೈನಿಕರ ತ್ಯಾಗದ ಬದುಕು ನಮಗೆಲ್ಲ ಪ್ರೇರಣೆಯಾಗಲಿ ಎಂದರು ಹಾಗೂ ನಿರಾಮಯ ಫೌಂಡೇಶನ್ ನ ಎಲ್ಲ ಕಾರ್ಯಗಳು ಶ್ಲಾಘನಿಯವಾಗಿದ್ದು , ತಾವೂ ಕೂಡ ಫೌಂಡೇಶನ್ ನ ಅನೇಕ ಚಟುವಟಿಕೆ ಗಳಲ್ಲಿ ಪಾಲ್ಗೊಂಡಿದ್ದನ್ನು ಸ್ಮರಿಸಿದರು.ರಾಮಚಂದ್ರ ದೇಶಪಾಂಡೆ ಪ್ರಾಸ್ತಾವಿಕವಾಗಿ ಮಾತನಾಡಿ ಫೌಂಡೇಶನ್ ನಡೆದು ಬಂದ ಹಾದಿಯನ್ನು ತಿಳಿಸಿದರು.ಗಿರಿಧರ ಹಿರೇಮಠ ಸ್ವಾಗತಿಸಿದರು, ಗುರು ಭದ್ರಾಪುರ ವಂದಿಸಿದರು.ಕಾರ್ಯಕ್ರಮದಲ್ಲಿ ಅಧ್ಯಕ್ಷ ರಾದ ಡಾ. ಮಲ್ಲಿಕಾರ್ಜುನ ಬಾಳಿಕಾಯಿ,ಉಪಾಧ್ಯಕ್ಷರಾದ ದೇವರಾಜ್ ದಾಡಿಬಾಯಿ, ಕಲ್ಲಪ್ಪ ಮೊರಬದ, ಸಂಚಾಲಕರಾದ ಪವನ್ ಪಾಟೀಲ್,ಗುರು ಬನ್ನಿಕೊಪ್ಪ ಹಾಗೂ ಫೌಂಡೇಶನ್ ಸರ್ವ ಸದಸ್ಯರು ಉಪಸ್ಥಿತರಿದ್ದರು.ಬೆಳಿಗ್ಗೆ 8-30ರಿಂದ ಆರಂಭವಾದ ರಕ್ತದಾನ ಶಿಬಿರದಲ್ಲಿ ಮಹಿಳೆಯರು ಸೇರಿದಂತೆ 80ಕ್ಕೂ ಅಧಿಕ ಜನ ರಕ್ತದಾನ ಮಾಡಿದರು.
Be the first to comment