ಸಿ.ಆರ್.ಜೆಡ್ ವ್ಯಾಪ್ತಿಯಲ್ಲಿ ಮರಳು ತೆಗೆದು ಮಾರಾಟ ಮಾಡದಂತೆ ಹಸಿರು ಪೀಠ ಆದೇಶ

ವರದಿ:ಕುಮಾರ ನಾಯ್ಕ

ಕಾರವಾರ:

ರಾಜ್ಯದ ಕರಾವಳಿ ಜಿಲ್ಲೆಯ ಸಿ,ಆರ್.ಜೆಡ್ ವಲಯದಲ್ಲಿ ನಡೆಯುತ್ತಿರುವ ಮರಳುಗಾರಿಕೆಯಿಂದ ಸ್ಥಳೀಯರಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ. ತಕ್ಷಣ ಸಿ,ಆರ್ ಜೆಡ್ ವ್ಯಾಪ್ತಿಯಲ್ಲಿ ತೆಗೆಯುವ ಮರಳನ್ನ ಮಾರಾಟ ಮಾಡದಂತೆ ಚೆನ್ನೈ ನ ರಾಷ್ಟ್ರೀಯ ಹಸಿರು ಪೀಠ ಆದೇಶಿಸಿದೆ.

ಉಡುಪಿ ಜಿಲ್ಲೆಯ ಕೆಲವರು ಸಿ.ಆರ್.ಜೆಡ್ ವಲಯದಲ್ಲಿ ನಡೆಯುತ್ತಿರುವ ಮರಳುಗಾರಿಕೆಯಿಂದ ಸ್ಥಳೀಯರಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ. ನದಿಯಲ್ಲಿನ ದಿಬ್ಬಗಳಿಂದ ಮರಳು ತೆಗೆದು ಸಮತಟ್ಟಾಗಿ ಮಾಡುವುದರ ಬದಲು, ಮರಳು ಮಾಫೀಯ ಮಾಡಲಾಗುತ್ತಿದ್ದು, ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಹಸಿರು ಪೀಠಕ್ಕೆ ದೂರನ್ನ ನೀಡಿದ್ದರು.

ಈ ಬಗ್ಗೆ ವಿಚಾರಣೆ ನಡೆಸಿರುವ ಹಸಿರು ಪೀಠ ಸಿ.ಆರ್.ಜೆಡ್ ವಲಯದಲ್ಲಿ ತೆಗೆದ ಮರಳನ್ನ ಮಾರಾಟ ಮಾಡದಂತೆ ಆದೇಶಿಸಿದೆ. ಸಿ,ಆರ್ ಜೆಡ್ ವಲಯದಲ್ಲಿ ಮರಳು ದಿಬ್ಬಗಳಿಂದ ನದಿಯ ಹರಿವಿಗೆ ಸಮಸ್ಯೆ ಆಗಲಿದ್ದು ಅಂತಹ ದಿಬ್ಬಗಳಿಂದ ಮರಳನ್ನ ತೆಗೆಯುವಂತೆ ತಾತ್ಕಾಲಿಕ ಪರವಾನಿಗೆಗಳನ್ನ ನೀಡಲಾಗಿದೆ. ಆದರೆ ಪರವಾನಿಗೆ ದಾರರಿಂದ ಕೆಲ ಗುತ್ತಿಗೆದಾರರು ಸಬ್ ಲೀಸ್ ಪಡೆದು ನಿಯಮಗಳನ್ನ ಗಾಳಿಗೆ ದೂರಿ, ಬೃಹತ್ ಆಕಾರದ ಯಂತ್ರಗಳನ್ನ ಬಳಸಿ ಮರಳು ಗಾರಿಕೆ ಮಾಡುತ್ತಿರುವುದು ಮಾಫಿಯಾ ಎಂದು ಅಭಿಪ್ರಾಯ ಪಟ್ಟಿದೆ.

ಮರಳು ಮಾಫಿಯಾದಿಂದ ಸಿ.ಆರ್.ಜೆಡ್ ವಲಯ ಪ್ರದೇಶದಲ್ಲಿ ಭಯಭೀತವಾಗಿದ್ದು, ಮರಳು ತೆಗೆಯುವುದರ ಬದಲು ಮರಳು ಗಣಿಗಾರಿಕೆಯಾಗಿ ಇದು ಬದಲಾಗಿದೆ. ಇನ್ನು ಮರಳು ತೆಗೆದು ಬಳಕೆ ಮಾಡಿಕೊಳ್ಳಲು ಸ್ಥಳೀಯರಿಗೆ ಅವಕಾಶ ನೀಡಲಾಗಿತ್ತು. ಆದರೆ ಸದ್ಯ ಮರಳುಗಾರಿಕೆಯಿಂದ ಸ್ಥಳೀಯರಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ. ಸಬ್ ಲೀಸ್ ಪಡೆದ ಗುತ್ತಿಗೆದಾರರು ಸ್ಥಳೀಯರನ್ನ ಕಡೆಗಣಿಸಿ ಬೇರೆ ರಾಜ್ಯದ ರ‍್ಮಿಕರನ್ನ ಬಳಸಿಕೊಂಡು ಬೇರೆ ಕಡೆಗಳಲ್ಲಿ ಮಾರಾಟ ಮಾಡುವ ರ‍್ಯದಲ್ಲಿ ತೊಡಗಿದ್ದಾರೆ ಎಂದು ಅಭಿಪ್ರಾಯ ಪಟ್ಟಿದೆ.

ಸರ್ಕಾರ ಹಣ ಪಡೆದು ಮರಳನ್ನ ತೆಗೆಯಲು ತಾತ್ಕಾಲಿಕ ಪರವಾನಿಗೆ ಕೊಡುತ್ತದೆ. ಲೀಸ್ ಪಡೆದವರು ನಂತರ ನಿಯಮಾವಳಿಗಳನ್ನ ಉಲ್ಲಂಘಿಸುತ್ತಾರೆ. ಸಿಆರ್.ಜೆಡ್ ವಲಯದಲ್ಲಿ ನದಿಗೆ ಹಾನಿಯಾಗುವಂತೆ ಮರಳು ತೆಗೆಯುತ್ತಿದ್ದರೂ, ಮರಳುಗಾರಿಕೆಯಲ್ಲಿ ಅಕ್ರಮಕ್ಕೆ ಕಡಿವಾಣ ಹಾಕಬೇಕಿದ್ದ ಜಿಲ್ಲಾ ಸಿ.ಆರ್.ಜೆಡ್ ಸಮಿತಿ ಗಮನಹರಿಸುತ್ತಿಲ್ಲ. ಕೂಡಲೇ ಕ್ರಮ ಕೈಗೊಂಡು ಮರಳುಗಾರಿಕೆ ನಿಲ್ಲಿಸುವಂತೆ ರಾಷ್ಟ್ರೀಯ ಹಸಿರು ಪೀಠ ಆದೇಶಿಸಿದೆ.

ರಾಜ್ಯದಲ್ಲಿ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಮಂಗಳೂರು ಹಾಗೂ ಉಡುಪಿ ಜಿಲ್ಲೆಯಗಳಲ್ಲಿ ಸಿ.ಆರ್.ಜೆಡ್ ವ್ಯಾಪ್ತಿಯಲ್ಲಿನ ನದಿಗಳಲ್ಲಿ ಮರಳುಗಾರಿಕೆ ನಡೆಯುತ್ತಿದ್ದು ರಾಷ್ಟ್ರೀಯ ಹಸಿರು ಪೀಠದ ಆದೇಶದಿಂದ ಮೂರು ಜಿಲ್ಲೆಗಳಲ್ಲಿ ಮರಳುಗಾರಿಕೆ ಬಂದ್ ಆಗಲಿದೆ ಎನ್ನಲಾಗಿದ್ದು ಇದು ಕಟ್ಟಡ ಕಾಮಗಾರಿ, ಅಭಿವೃದ್ದಿ ಕಾಮಗಾರಿಗಳ ಮೇಲೆ ದೊಡ್ಡ ಹೊಡೆತ ಬೀಳಲಿದೆ. ಮರಳುಗಾರಿಕೆಯನ್ನೇ ನಂಬಿಕೊಂಡಿದ್ದ ಹಲವರಿಗೆ ಇದು ಅನ್ಯಾಯವಾಗಲಿದೆ ಎನ್ನಲಾಗಿದೆ.

ಜಿಲ್ಲೆಯಲ್ಲಿ ಇಂದಿನಿಂದ ಮರಳು ಗಾರಿಕೆ ಬಂದ್- ರಾಜ್ಯದ ಕರಾವಳಿ ಭಾಗದಲ್ಲಿ ಮರಳನ್ನ ತೆಗೆದು ಮಾರಾಟ ಮಾಡದಂತೆ ರಾಷ್ಟ್ರೀಯ ಹಸಿರು ಪೀಠ ಆದೇಶಿಸಿರುವ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಇಂದಿನಿಂದ ಸಿ.ಆರ್.ಜೆಡ್ ವ್ಯಾಪ್ತಿಯಲ್ಲಿ ಮರಳು ದಿಬ್ಬಗಳಿಂದ ಮರಳನ್ನ ತೆರವುಗಗೊಳಿಸುವ ಪ್ರಕ್ರಿಯೆಯನ್ನ ನಿಲ್ಲಿಸುವಂತೆ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಸೂಚಿಸಿದ್ದಾರೆ.

ಜಿಲ್ಲೆಯ ಕರಾವಳಿ ಭಾಗ ಕಾಳಿ ನದಿಯ 42, ಅಂಕೋಲಾ ತಾಲೂಕಿನ ಗಂಗಾವಳಿ ನದಿಯ 8, ಕುಮಟಾ ತಾಲೂಕಿನ ಅಘನಾಶಿನಿ ನದಿಯ 33 ಹಾಗೂ ಹೊನ್ನಾವರದ ಶರಾವತಿ ನದಿಯ 45 ಪರವಾನಿಗೆದಾರರು ಸೇರಿ ಒಟ್ಟು 128 ಪರವಾನಿಗೆದಾರರು ಜಿಲ್ಲೆಯಲ್ಲಿ ಮರಳುಗಾರಿಕೆ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ.

ಸದ್ಯ ಮಳೆಗಾಲ ಪ್ರಾರಂಭವಾಗಲಿದ್ದು ಜೂನ್ ಪ್ರಾರಂಭದ ವೇಳೆ ಮರಳುಗಾರಿಕೆಯನ್ನ ಬಂದ್ ಮಾಡಲಾಗುತ್ತಿತ್ತು. ಆದರೆ ಈ ಬಾರಿ ರಾಷ್ಟ್ರೀಯ ಹಸಿರು ಪೀಠ ಸಿ.ಆರ್.ಜೆಡ್ ವ್ಯಾಪ್ತಿಯಲ್ಲಿ ಮರಳು ತೆಗೆದು ಮಾರಾಟ ಮಾಡದಂತೆ ಆದೇಶಿಸಿರುವ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಜಿಲ್ಲೆಯಲ್ಲಿ ಮರಳುಗಾರಿಕೆ ಮಾಡುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.

Be the first to comment

Leave a Reply

Your email address will not be published.


*