ರಾಜ್ಯ ಸುದ್ದಿಗಳು
ಬೆಂಗಳೂರು
ವಿಧಾನಪರಿಷತ್ ಅಭ್ಯರ್ಥಿ ಬಿ ಸಿ ನಾರಾಯಣ ಸ್ವಾಮಿ ನೆಡೆಸಿದ್ದ ಪತ್ರಿಕಾ ಘೋಷ್ಠಿ ಹಿನ್ನಲೆಯಲ್ಲಿ ಇಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ಪ್ರವಾಸಿ ಮಂದಿರದಲ್ಲಿ ತುರ್ತುಸಭೆ ಸೇರಿದ್ದ ಸಾಸಲು ಹೋಬಳಿಯ ಬಿ ಜೆ ಪಿ ಕಾರ್ಯಕರ್ತರು ಕಳೆದ ವಿಧಾನಪರಿಷತ್ ಚುನಾವಣೆಯಲ್ಲಿ ಯಾವುದೇ ಪಕ್ಷಗಳ ಆಮಿಷಕ್ಕೆ ಒಳ್ಳಗಾಗದೆ ಪಕ್ಷ ನಿಷ್ಠೆಯಿಂದ ನಮ್ಮ ಮತವನ್ನು ಬಿ ಜೆ ಪಿ ಪಕ್ಷದ ಸ್ಥಳೀಯ ಅಭ್ಯರ್ಥಿಯಾದ ಬಿ ಸಿ ನಾರಾಯಣ ಸ್ವಾಮಿ ಯವರಿಗೆ ಚಲಾಯಿಸಲಾಗಿದೆ.
ಬಿ ಸಿ ನಾರಾಯಣ ಸ್ವಾಮಿಯವರ ಟೀಕೆ ಸರಿಯಲ್ಲ ನಾವು ನಮ್ಮ ಪಕ್ಷದ ಸಿದ್ದಂತಕ್ಕೆ ಬದ್ಧರಾಗಿದ್ದೇವೆ ಮುಂದಿನ ದಿನಗಳಲ್ಲಿ ಬರುವ ಚುನಾವಣೆಗಳನ್ನು ಸರ್ವ ಸದಸ್ಯರ ಬೆಂಬಲದಿಂದ ಎದುರಿಸುತ್ತೆವೆ ಎಂದು ತಿಳಿಸಿದರು. ಸಭೆಯಲ್ಲಿ ಭಕ್ತರಹಳ್ಳಿ ಗ್ರಾಮಪಂಚಾಯಿತಿ ಅಧ್ಯಕ್ಷರಾದ ಸಿದ್ದಲಿಂಗಯ್ಯ ಸಾಸಲು ಹೋಬಳಿ ಅಧ್ಯಕ್ಷ ( ಬಿ ಜೆ ಪಿ )ಕದಿರೆ ಗೌಡ ಆರೋಡಿ ಗ್ರಾಮಪಂಚಾಯತಿ ಅಧ್ಯಕ್ಷರಾದ ಜಯಮ್ಮ ಮತ್ತು ಸಾಸಲು ಹೋಬಳಿಯ ಸದಸ್ಯರು ಉಪಸ್ಥಿತರಿದ್ದರು.
Be the first to comment