ಜಿಲ್ಲಾ ಸುದ್ದಿಗಳು
ಶ್ರೀ ಮಾರುತಿ ಪತ್ತಿನ ಸಹಕಾರಿ ಸಂಘ ಶಿರಾಲಿ ಇದರ22 ನೇ ವಾರ್ಷಿಕ ಸರ್ವಸಾಧಾರಣ ಸಭೆ ಶಿರಾಲಿಯ ಪೇಟೆ ಶ್ರೀ ಹನೂಮಂತ ದೇವಸ್ಥಾನದ ಶ್ರೀ ದ್ವಾರಕಾನಾಥ ಸಭಾಗ್ರಹದಲ್ಲಿ ಸಂಜೆ 5-00 ಗಂಟೆಗೆ ದೀಪ ಬೆಳಗುವ ಮೂಲಕ ಪ್ರಾರಂಭಿಸಲಾಯಿತು. ಅಧ್ಯಕ್ಷರಾದ ಶ್ರೀ ಅಶೊಕ ಪೈ ಮಾತನಾಡಿ ಈ ಕರೋನಾ ಸಂಧರ್ಭದಲ್ಲಿ ಸಂಘವು 2ಕೋಟಿ 17 ಲಕ್ಷರೂಗಳ ಲಾಭ ಗಳಿಸಿದೆ. 12% ಡಿವಿಡೆಂಟ್ ಸದಸ್ಯರಿಗೆ ನೀಡಲಾಗುವುದು ಎಂದರು. ಅಂತೆಯೆ ಕಳೆದ 5-6 ವರ್ಷಗಳಿಂದ ಸಂಘದ ಸದಸ್ಯರ ಬೇಡಿಕೆಯಂತೆ ಇನ್ನು 2 ವರ್ಷಗಳೊಳಗಾಗಿ ಸಂಘವು ಸ್ವಂತ ಕಟ್ಟಡ ಹೊಂದಲಿದೆ. 2024 ರಲ್ಲಿ ನಡೆಯುವ ಸಂಘದ ರಜತ ಮಹೋತ್ಸವದ ಸಂಧರ್ಭದಲ್ಲಿ ಉದ್ಘಾಟನೆಗೊಳ್ಳುವ ವಿಶ್ವಾಸ ವ್ಯಕ್ತಪಡಿಸಿದರು. ಈ ಸಂಧರ್ಭದಲ್ಲಿ ಸಂಘವು ಶಾಖೆ ಹೊಂದಿರುವ ತಾಲೂಕುಗಳಾದ ಭಟ್ಕಳ , ಹೊನ್ನಾವರ, ಕುಮಟಾದ ಎಸ್. ಎಸ್. ಎಲ್ .ಸಿ ಪರೀಕ್ಷೇಯಲ್ಲಿ ತಾಲೂಕಿಗೆ ಪ್ರಥಮ ,ದ್ವಿತಿಯ,ತೃತಿಯ ಬಂದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಲಾಯಿತು. ಶ್ರೀ ಪ್ರಧಾನ ವ್ಯವಸ್ಥಾಪಕರಾದ ಶ್ರೀ ರಾಜೇಂದ್ರ ಸ್ಯಾನಭಾಗ್ ವಾರ್ಷಿಕ ವರದಿ ವಾಚಿಸಿದರು. ಉಪಾಧ್ಯಕ್ಷರಾದ ಶ್ರೀ ಸುಬ್ರಾಯ ಕಾಮತ ಮಾತನಾಡಿ ಸಂಘದ ಶ್ರೇಯಸ್ಸಿಗೆ ಸಹಕರಿಸಿದ ಎಲ್ಲ ಸದಸ್ಯರನ್ನು ಅಭಿನಂದಿಸಿ.
ಯಾವಗಲು ತಮ್ಮ ಸಹಕಾರ ಸಂಘದೊಂದಿಗಿರಲಿ ಎಂದು ಆಶಿಸಿದರು. ನಿರ್ದೇಶಕರಾದ ಶ್ರೀ ನರೇಂದ್ರ ನಾಯಕ ಮಾತನಾಡಿ ಸಂಘದ ಸೇವೆಗಳ ಕುರಿತು ಪರಿಚಯಿಸಿದರು, ಸಂಘವು ಉಳಿದ ಸಹಕಾರಿ ಸಂಘಗಳಿಗೆ ಹೋಲಿಸಿದರೆ ಬಂಗಾರದ ಮೇಲಿನ ಸಾಲ, ಮನೆಸಾಲ, ವಾಹನ ಸಾಲಗಳನ್ನು ಅತಿ ಕಡಿಮೆ ಬಡ್ಡಿದರಕ್ಕೆ ನೀಡುತಿದ್ದು ಇದರ ಪ್ರಯೋಜನವನ್ನು ಸಂಘದ ಸದಸ್ಯರು ಪಡೆದುಕೊಳ್ಳುವಂತೆ ವಿನಂತಿಸಿದರು. ನಿರ್ದೇಶಕರಾದ ರವೀಂದ್ರ ಪ್ರಭು ಮಾತನಾಡಿ ಸಂಘ ನೀಡುತ್ತಿರುವ ಈ ಸ್ಟಾಂಪಿಂಗ್ ಸೇವೆಯ ಕುರಿತು ವಿವರಿಸಿರು ಹಾಗೂ ನೂತನ ಕಟ್ಟಡದ ನೀಲನಕ್ಷೇಯ ಕುರಿತು ಪ್ರಸ್ತಾಪಿಸಿದರು. ಶ್ರೀ ಡಿ.ಜೆ ಕಾಮತ್ ಹಾಗೂ ಶ್ರೀ ಮಂಜುನಾಥ ಪ್ರಭು ಅವರು ಸಂಘ ಶೇರುದಾರ ಪರವಾಗಿ ಮಾತನಾಡಿ ಸಂಘವು ಇನ್ನೇಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು. ನೀರ್ದೇಶಕರಾದ ಶ್ರೀ ನಾಗೇಶ ಪೈ ವಂದಿಸಿದರು. ಶ್ರೀ ಪ್ರಸನ್ನ ಪ್ರಭು ಕಾರ್ಯಕ್ರಮ ನಿರ್ವಹಿಸಿದರು.
Be the first to comment