ಕಾರ್ತಿಕ ಮಾಸದ ನಿಮಿತ್ತ ಸಂಡೆ ಫಾರ್ ಸೋಶಿಯಲ್ ವರ್ಕ್ ಸೇವಾ ಕಾರ್ಯ

ವರದಿ ಗ್ಯಾನಪ್ಪ ದೊಡ್ಡಮನಿ ಮಸ್ಕಿ

ಜಿಲ್ಲಾ ಸುದ್ದಿಗಳು 

ಮಸ್ಕಿ

ಸಂಡೇ ಫಾರ್ ಸೋಷಿಯಲ್ ವರ್ಕ್ ಅಭಿಯಾನದಡಿಯಲ್ಲಿ ಪ್ರತಿವಾರದಂತೆ ಈ ಬಾರಿಯ 22 ನೇ ಸಂಡೇ ಫಾರ್ ಸೋಷಿಯಲ್ ವರ್ಕ್ ಸೇವಾ ಕಾರ್ಯವನ್ನು ವಿಶ್ವ ಪ್ರಸಿದ್ಧ ಎರಡನೇ ಶ್ರೀಶೈಲ ಮಲ್ಲಿಕಾರ್ಜುನ ದೇವಾಲಯ ಮಸ್ಕಿ ಬೆಟ್ಟದ ಮಧ್ಯ ಭಾಗದಲ್ಲಿ ಇರುವ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಹಾಗೂ ಜಡಿ ಶಂಕರಲಿಂಗೇಶ್ವರ ದೇವಾಲಯದ ಆವರಣವನ್ನು ಸ್ವಚ್ಛ ಮಾಡಿ ದೇವಾಲಯದ ಗೋಡೆಗಳಿಗೆ ಬಣ್ಣವನ್ನು ಹಚ್ಚಲಾಯಿತು. ಪ್ರತಿ ವರ್ಷ ವಿಷೇಶವಾಗಿ ಮತ್ತು ವಿಜ್ರಂಭಣೆಯಿಂದ ನಡೆಯುವ ಕಾರ್ತಿಕ ಮಾಸದ ಆಚರಣೆಗೆ ಬರುವ ಭಕ್ತರಿಗೆ ಅನುಕೂಲಕರ ವಾತಾವರಣ ಕಲ್ಪಿಸುವ ಉದ್ದೇಶದಿಂದ ಈ ಬಾರಿಯ ಸಂಡೇ ಫಾರ್ ಸೋಷಿಯಲ್ ವರ್ಕ್ ಸೇವಾ ಕಾರ್ಯವನ್ನು ಮಸ್ಕಿಯ ಬೆಟ್ಟದ ಈ ದೇವಾಲಯಗಳ ಆವರಣದಲ್ಲಿ ಬೆಳೆದಿದ್ದ ಕಸವನ್ನು ತೆಗೆದು ದೇವಾಲಯದ ಗೋಡೆಗಳಿಗೆ ಬಣ್ಣವನ್ನು ಹಚ್ಚಲಾಯಿತು.

CHETAN KENDULI

 

 ಇದೇ ಸಮಯದಲ್ಲಿ ಮಾತನಾಡಿದ ಶ್ರೀಧರ ಬೆಳ್ಳುಳ್ಳಿ ಅವರು ನಮ್ಮ ಪ್ರೀತಿಯ ಆಹ್ವಾನದ ಮೇರೆಗೆ ಅಭಿನಂದನ್ ಸಂಸ್ಥೆಯು ತಮ್ಮ ಸಂಡೆ ಫಾರ್ ಸೋಶಿಯಲ್ ವರ್ಕ್ ಅಭಿಯಾನದಲ್ಲಿ ಇಂದು ಈ ಐತಿಹಾಸಿಕ ಹಿನ್ನೆಲೆ ಹೊಂದಿರುವ ಎರಡನೇ ಶ್ರೀಶೈಲ ಎಂದೇ ಪ್ರಸಿದ್ಧವಾದ ಮಸ್ಕಿಯ ಬೆಟ್ಟದ ಮಲ್ಲಿಕಾರ್ಜುನಕ್ಕೆ ಹೋಗುವ ಮಾರ್ಗದ ಮಧ್ಯ ಭಾಗದಲ್ಲಿ ಇರುವಂತಹ ವೀರಭದ್ರೇಶ್ವರ ಹಾಗೂ ಜಡಿ ಶಂಕರಲಿಂಗೇಶ್ವರ ದೇವಾಲಯಗಳಿಗೆ ಹೊಸ ಚೇತನವನ್ನು ನೀಡಿದ್ದು ಬಹಳ ಸಂತಸದ ವಿಷಯ ಅದರಲ್ಲೂ ಈ ಕಾರ್ತಿಕ ಮಾಸದ ಆಚರಣೆಗೆ ಬರುವ ಭಕ್ತರಿಗೆ ಉತ್ತಮ ರೀತಿಯ ವಾತಾವರಣವನ್ನು ನಿರ್ಮಾಣ ಮಾಡಿರುವ ಈ ಸಂಸ್ಥೆಗೆ ಹಾಗೂ ಭಾಗವಹಿಸಿದ ಎಲ್ಲಾ ಸ್ವಯಂ ಸೇವಕರಿಗೆ ದೇವಸ್ಥಾನದ ಎಲ್ಲಾ ಭಕ್ತಾದಿಗಳ ಪರವಾಗಿ ಅಭಿನಂದನೆಗಳು ಎಂದು ತಮ್ಮ ಅನಿಸಿಕೆಗಳನ್ನು ತಿಳಿಸಿದರು.

 ಇದೇ ಸಂದರ್ಭದಲ್ಲಿ ಅಭಿನಂದನ್ ಸಂಸ್ಥೆಯ ಗೌರವಾಧ್ಯಕ್ಷರಾದ ಶಿವಪ್ರಸಾದ್ ಕ್ಯಾತ್ನಟ್ಟಿ ಸಂಸ್ಥಾಪಕರಾದ ರಾಮಣ್ಣ ಹಂಪರಗುಂದಿ, ಅಭಿನಂದನ್ ಸಂಸ್ಥೆಯ ಆಶಾ ಕ್ಯಾತ್ನಟ್ಟಿ, ಮಲ್ಲಿಕಾರ್ಜುನ ಬಡಿಗೇರ, ಬಸವರಾಜ ಬನ್ನಿಗಿಡ, ಅಮಿತ್ ಕುಮಾರ ಪುಟ್ಟಿ ಕಾರ್ತಿಕ್ ಜೋಗಿನ್, ಕಿಶೋರ್, ಶರಣಬಸವ, ಕುಮಾರಿ ಸನ್ನಿಧಿ, ಶ್ರೀ ಶೈಲ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*