ಕರ್ನಾಟಕ ರಾಷ್ಟ್ರೀಯ ಸಮಿತಿ (ಕೆ ಆರ್ ಎಸ್ ) ಪಕ್ಷದ ಅಭ್ಯರ್ಥಿ ಗೌಸಿಯಾ ಬೇಗಂ ನಾಮಪತ್ರ ಸಲ್ಲಿಕೆ.

ವರದಿ ಗ್ಯಾನಪ್ಪ ದೊಡ್ಡಮನಿ ಮಸ್ಕಿ

ರಾಜ್ಯ ಸುದ್ದಿಗಳು 

ಮಸ್ಕಿ

ಡಿ.27 ರಂದು ನಡೆಯಲಿರುವ ಪುರಸಭೆ ಚುನಾವಣೆಯಲ್ಲಿ ಕರ್ನಾಟಕ ರಾಷ್ಟ್ರಸಮಿತಿ (ಕೆ ಆರ್ ಎಸ್)ಅಭ್ಯರ್ಥಿಯಾಗಿ ಶ್ರೀಮತಿ ಗೌಸಿಯಾ ಬೇಗಂ ಗಂ/ ಎಸ್ ನಜೀರ್ ಮಸ್ಕಿ ನಾಮಪತ್ರ ಸಲ್ಲಿಕೆ.ದಿನಾಂಕ 14.12.2021ರಂದು ಮಸ್ಕಿ ಪುರಸಭೆಯ ವಾರ್ಡ್ ನಂ 10 ರಿಂದ ಶ್ರೀಮತಿ ಗೌಸಿಯಾ ಬೇಗಂ ರವರು ನಾಮ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸಲಹೆಗಾರರು ಸುಬ್ಬರಾವ್ ಕುಲಕರ್ಣಿ ಮಸ್ಕಿ, ಕರ್ನಾಟಕ ರಾಷ್ಟ್ರ ಸಮಿತಿ ( ಕೆ ಆರ್ ಎಸ್) ಪಕ್ಷದ ಓಬಳೇಶ್ ಅಪ್ಪ ಜಿಲ್ಲಾ ಉಸ್ತುವಾರಿ ಹಾಗೂ ಎಸ್ಸಿ, ಎಸ್ಟಿ ಘಟಕದ ರಾಜ್ಯ ಅಧ್ಯಕ್ಷರು

CHETAN KENDULI

ಉಪಾಧ್ಯಕ್ಷರಾದ ಆನಂದರವರು, ಕರ್ನಾಟಕ ಛಲವಾದಿ ಮಹಾಸಭಾದ ರಾಜ್ಯ ಕಾರ್ಯದರ್ಶಿ ಮಲ್ಲಪ್ಪ ಗೋನಾಳ, ಮೊಹಮ್ಮದ್ ಅಜ್ಮೀರ್ ಶೆಡ್ಮಿ, ಬಸವರಾಜ್ ಹುಲಿಯಾರ್ ಯುವ ಮುಖಂಡರು, ಪ್ರಗತಿಪರ ಚಿಂತಕರು ರಾಯಚೂರು ಜಿಲ್ಲಾ ಯುವ ಘಟಕದ ಅಧ್ಯಕ್ಷರಾದ ನಿರುಪಾದಿ ಗೋಮರ್ಸಿ, ಮಾನ್ವಿ ತಾಲೂಕು ಯುವ ಘಟಕದ ಅಧ್ಯಕ್ಷರಾದ ದೇವರಾಜ ದೇವಿಪುರ , ಲಿಂಗಸೂಗೂರು ಎಸ್ಸಿ ಎಸ್ಪಿ ಘಟಕದ ತಾಲೂಕ ಅಧ್ಯಕ್ಷ ದುರುಗಪ್ಪ ಹಾಗೂ ಮಸ್ಕಿ ಪಟ್ಟಣದ ಪುರಸಭೆಯ 10ನೇ ವಾರ್ಡಿನ ಸಾರ್ವಜನಿಕರನೇತೃತ್ವದಲ್ಲಿ ನಾಮಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಅಭ್ಯರ್ಥಿ ಶ್ರೀಮತಿ ಗೌಸಿಯಾ ಬೇಗಂ ಎಸ್ ನಜೀರ್ ಮಸ್ಕಿ ರವರು ಮಸ್ಕಿ ಪುರಸಭೆಯ 10ನೇ ವಾರ್ಡಿನ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸುವ ಮೂಲಕನನ್ನ ಈ 10ನೇ ವಾರ್ಡಿನ ಮತ ಕ್ಷೇತ್ರದಲ್ಲಿ ಹೊಸ ಬೆಳವಣಿಗೆ ಮತ್ತು ಇಡೀ ರಾಜ್ಯಕ್ಕೆ ಮಾದರಿ ಕ್ಷೇತ್ರವನ್ನಾಗಿ ಮಾಡಿ ತೋರಿಸಿವೆ. ಎಂದು ಸಂದರ್ಭದಲ್ಲಿ ಶ್ರೀಮತಿ ಗೌಸಿಯಾ ಬೇಗಂ ಎಸ್ ನಜೀರ್ ಮಸ್ಕಿ ಅವರು 10ನೇ ವಾರ್ಡಿನ ಜನತೆಗೆ ಭರವಸೆ ನೀಡಿದರು.ಹಾಗು ಪಕ್ಷದ ಹಿರಿಯ ಮುಖಂಡರು. ಯುವ ಮುಖಂಡರು ಮತ್ತು ಪಕ್ಷದ ಹಲವಾರು ಕಾರ್ಯಕರ್ತರು ಮತ್ತು ವಾರ್ಡನ ನುರಾರು ಮತದಾರರ ಸಮುಖದಲ್ಲಿ ನಾಮಪತ್ರಸಲ್ಲಿಸಿ ಪ್ರಚಾರ ಕಾರ್ಯಕ್ರಮವನ್ನು ಆರಂಭಿಸಲಾಯಿತ್ತು.

Be the first to comment

Leave a Reply

Your email address will not be published.


*