ರಾಜ್ಯ ಸುದ್ದಿಗಳು
ಮಹಾರಾಷ್ಟ್ರ
ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಎಂಇಎಸ್ ಪುಂಡರು ಹಾಗೂ ಶಿವಸೇನಾ ಕಾರ್ಯಕರ್ತರು ಕನ್ನಡ ತಾಯಿಯ ಬಾವುಟವನ್ನು ಸುಟ್ಟು ವಿಕೃತಿಯನ್ನು ಮೆರೆದ ವಿರೋಧವಾಗಿ ಕನ್ನಡಿಗರ ಪರವಾಗಿ ಕರುನಾಡ ವಿಜಯ ಸೇನೆ ವತಿಯಿಂದ ಬೆಂಗಳೂರಿನ ಮೌರ್ಯ ಸರ್ಕಲ್ ಬಳಿ ಪ್ರತಿಭಟನೆ ನಡೆಸಲಾಯಿತು. ಹೋರಾಟದಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಭವ್ ಟಾಕ್ರೆ ಪ್ರತಿಕೃತಿ ದಹಿಸಿ ಕನ್ನಡಿಗರ ಭಾವನೆಗಳಿಗೆ ಧಕ್ಕೆ ಉಂಟುಮಾಡಿರುವ ಇಂತಹ ಪುಂಡರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟವನ್ನು ಕೈಗೊಂಡು ಈ ರೀತಿಯ ಕೃತ್ಯವೆಸಗಿರುವ ಎಂಇಎಸ್ ಹಾಗೂ ಶಿವಸೇನಾ ಕಾರ್ಯಕರ್ತರಿಗೆ ಪಾಠ ಕಲಿಸಬೇಕಾಗುತ್ತದೆ ಎಂದು ಕರುನಾಡ ವಿಜಯ ಸೇನೆಯ ಕಾರ್ಮಿಕ ಘಟಕದ ಅಧ್ಯಕ್ಷರಾದ ನೆ.ಲ. ರಾಮ್ ಪ್ರಸಾದ್ ಗೌಡ ಎಚ್ಚರಿಕೆ ನೀಡಿದರು .
ಈ ಸಂದರ್ಭದಲ್ಲಿ ಕರುನಾಡ ವಿಜಯ ಸೇನೆಯ ಸಂಘಟನಾ ಕಾರ್ಯದರ್ಶಿಯಾದ ಮೋಹನ್, ಜಿಲ್ಲಾ ಅಧ್ಯಕ್ಷರಾದ ವಿಜಯಕುಮಾರ್ ಜಿಲ್ಲಾ ಮುಖಂಡರಾದ ಮಂಜುನಾಥ, ರಾಘವೇಂದ್ರ, ಮಂಜುಳಾ ಹಾಗೂ ಕರುನಾಡ ವಿಜಯ ಸೇನೆಯ ಎಲ್ಲಾ ಸದಸ್ಯರು, ಮತ್ತು ಕನ್ನಡ ಪರ ಹೋರಾಟಗಾರರು ಉಪಸ್ಥಿತರಿದ್ದರು
Be the first to comment