ಜಿಲ್ಲಾ ಸುದ್ದಿಗಳು
ಬಾಗಲಕೋಟೆ:ಪ್ರಸಕ್ತ ಸಾಲಿನ ಹಿಂಗಾರು ಹಂಗಾಮಿನ ಬೆಳೆಗಳ ಸಮೀಕ್ಷೆಯನ್ನು ಜಿಲ್ಲಾದ್ಯಂತ ಡಿಸೆಂಬರ 8 ರಿಂದ ಪ್ರಾರಂಭಿಸಲಾಗಿದ್ದು, ರೈತ ಬಾಂಧವರು ಈ ಸುವರ್ಣ ಅವಕಾಶವನ್ನು ಬಳಸಿಕೊಂಡು ತಾವೆ ಖುದ್ದಾಗಿ ತಮ್ಮ ಜಮೀನಿನಲ್ಲಿ ಬೆಳೆದಿರುವ ಬೆಳೆಗಳ ಮಾಹಿತಿಯನ್ನು ಮೊಬೈಲ್ ಆಪ್ ಮುಖಾಂತರ ಛಾಯಾ ಚಿತ್ರ ಸಮೇತ ಸೆರೆ ಹಿಡಿಯಬಹುದಾಗಿದೆ ಎಂದು ಜಿಲ್ಲಾ ಕೃಷಿ ಜಂಟಿ ನಿರ್ದೇಶಕಿ ಚೇತನಾ ಪಾಟೀಲ ತಿಳಿಸಿದರು.
ಜಮಖಂಡಿ ತಾಲೂಕಿನ ರೈತರ ಜಮೀನೊಂದರಕ್ಕೆ ತೆರಳಿ ಬೆಳೆ ಸಮೀಕ್ಷೆ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು. ತಮ್ಮ ಮೊಬೈಲ್ ನಲ್ಲಿ ಈ ಮುಂದಿನ ಲಿಂಕ್‍ನ್ನು ಬಳಸಿ ಹಿಂಗಾರು ರೈತರ ಬೆಳೆ ಸಮೀಕ್ಷೆ ಆಪ್‍ನ್ನು ಡೌನ್ ಲೋಡ ಮಾಡಿಕೊಂಡು ತಮ್ಮ ಜಮೀನುಗಳ ಸರ್ವೆ ನಂಬರ್, ಹಿಸ್ಸಾ ನಂಬರ್‍ವಾರು ಹಾಗೂ ಬೆಳೆವಾರು ಕ್ಷೇತ್ರ ನಮೂದಿಸಿ ಛಾಯಾ ಚಿತ್ರ ಸೆರೆ ಹಿಡಿದು ಮಾಹಿತಿಯನ್ನು ಅಪ್‍ಲೋಡ ಮಾಡುವುದು. ಈ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ತಮ್ಮ ಗ್ರಾಮದ ಕೃಷಿ, ತೋಟಗಾರಿಕೆ, ರೇಷ್ಮೆ, ಕಂದಾಯ ಅಧಿಕಾರಿಗಳನ್ನು ಹಾಗೂ ಗ್ರಾಮವಾರು ನೇಮಿಸಿರುವ ಖಾಸಗಿ ನಿವಾಸಿಗಳಿಂದ ಮಾಹಿತಿಯನ್ನು ಪಡೆಯಬಹುದಾಗಿದೆ ಎಂದು ತಿಳಿಸಿದರು.
ಮೊಬೈಲ್ ಆಪ್ ಡೌನ್ ಲೋಡ ಮಾಡಿಕೊಳ್ಳಲು ಪ್ಲೇ ಸ್ಟೋರ್ ನಲ್ಲಿ “https://play.google.com/store/apps/details?id=com.csk.RabiCropfarmer_21.cropsurvey” ಲಿಂಕ್ ನ್ನು ಅಳವಡಿಸಿಕೊಳ್ಳುವುದು. ಹೀಗೆ ಅಪ್ ಲೋಡ್ ಮಾಡಲಾದ ಬೆಳೆ ಸಮೀಕ್ಷೆ ದತ್ತಾಂಶವನ್ನು ಕೃಷಿ, ತೋಟಗಾರಿಕೆ, ರೇಷ್ಮೆ ಹಾಗೂ ಇತರೆ ಬೆಳೆಗಳ ವಿಸ್ತೀರ್ಣ ಲೆಕ್ಕ ಹಾಕುವಲ್ಲಿ, ಬೆಳೆ ವಿಮೆ ಯೋಜನೆಯಲ್ಲಿ ಬೆಳೆ ಪರಿಶೀಲನೆಗಾಗಿ, ಬೆಳೆ ಕಟಾವು ಪ್ರಯೋಗ ಕೈಗೊಳ್ಳಲು, ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಫಲಾನುಭವಿ ಗುರುತಿಸಲು, ಉತಾರೆ, ಆರ್.ಟಿ.ಸಿ ಯಲ್ಲಿ ಬೆಳೆ ವಿವರ ದಾಖಲಾತಿಗಳಿಗಾಗಿ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಬೆಳೆ ಮಾಹಿತಿಯನ್ನು ಪಡೆಯಲು ಹಾಗೂ ಇತರೆ ರೈತ ಕಲ್ಯಾಣ ಯೋಜನೆಗಳಲ್ಲಿ ಬಳಸಲಾಗುತ್ತಿದೆ. ಆದ್ದರಿಂದ ರೈತ ಬಾಂಧವರು ಇಂದೇ ತಮ್ಮ ಜಮೀನಿನ ಬೆಳೆ ವಿವರಗಳನ್ನು ಅಪ್ ಲೋಡ ಮಾಡುವಂತೆ ರೈತರಲ್ಲಿ ಮನವಿ ಮಾಡಿಕೊಂಡರು.
Be the first to comment