ಜಿಲ್ಲಾ ಸುದ್ದಿಗಳು
ಮಸ್ಕಿ
ಪುರಸಭೆ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಜಾತಿ ಪ್ರಮಾಣ ಪತ್ರ ನೀಡಲು ಪ್ರತ್ಯೇಕ ಕೌಂಟರ್ ತೆರೆಯದ ಹಿನ್ನಲೆಯಲ್ಲಿ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಪರದಾಡುವಂತಾಗಿದೆ.ಡಿ.8 ರಿಂದ ಪುರಸಭೆಗೆ ನಾಮಪತ್ರ ಸಲ್ಲಿಕೆ ಆರಂಭವಾಗಿದೆ. ಪಟ್ಟಣದ 23 ನೇ ವಾರ್ಡಿನ ಪೈಕಿ ಬಹುತೇಕ ವಾರ್ಡಿನ ಅಭ್ಯರ್ಥಿಗಳು ಜಾತಿ ಪ್ರಮಾಣ ಪತ್ರ ಪಡೆಯಲು ತಹಶೀಲ್ದಾರ ಕಚೇರಿ ಸುತ್ತ ಗಿರಕಿ ಹೊಡೆಯುತ್ತಿದ್ದು,ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಅನುಕೂಲವಾಗಲೆಂದು ಜಾತಿ ಪ್ರಮಾಣ ಪತ್ರ ನೀಡಲು ಪ್ರತ್ಯೇಕ ಕೌಂಟರ್ ತೆರೆಯಬೇಕು, ಈ ಬಗ್ಗೆ ಚುನಾವಣೆ ಅಧಿಕಾರಿಗಳು ಗಮನ ಹರಿಸಿಲ್ಲ, ಇದರಿಂದ ಅಭ್ಯರ್ಥಿಗಳು ಗ್ರಾಮ ಲೆಕ್ಕಾಧಿಕಾರಿ, ಕಂದಾಯ ನಿರೀಕ್ಷಕ, ತಹಶೀಲ್ದಾರರ ಬಳಿ ಅಲೆದಾಡಿ ಸುಸ್ತಾಗಿದ್ದಾರೆ. ಈ ಕುರಿತು ತಹಶೀಲ್ದಾರ ಕವಿತಾ ಕೆ.ಆರ್ ಅವರ ಬಳಿ ಮಾಹಿತಿ ಕೇಳಲು ಹೋದರೆ ಹಾರಿಕೆ ಉತ್ತರ ನೀಡುತ್ತಾರೆ. ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಇಂತಹ ಪರಿಸ್ಥಿತಿ ಒದಗಿ ಬಂದರೆ ಸಾಮಾನ್ಯ ಜನರ ಗತಿ ಎನೆಂದು ಚುನಾವಣೆ ಸ್ಪರ್ಧಿಸುವ ಅಭ್ಯರ್ಥಿಗಳು ಅಸಮಾಧಾನ ಹೊರ ಹಾಕಿದರು.
ಪಟ್ಟಣದ 02 ಮತ್ತು 23ನೇ ವಾರ್ಡಿಗೆ ಸ್ಪರ್ಧಿಸುವ ಅಭ್ಯರ್ಥಿಗಳ ಜಾತಿ ಪ್ರಮಾಣ ಪತ್ರ ತಗಿಸಲು ಬಂದ ರಮೇಶ ಗುಡಸಲಿ, ಶಿವಕುಮಾರ ಭಜಂತ್ರಿ, ನಾಗರಾಜ, ಅಂಬಣ್ಣ ಉದ್ಬಾಳ, ಮಲ್ಲಿಕಾರ್ಜುನ ಕಾಸ್ಲಿ ಅವರು ತಹಶೀಲ್ದಾರ ಅವರ ಬಳಿ ಹೋದರೆ ಸಭೆ ಇದೆ. ಗಂಟೆ ಕಾಯಿರಿ ಎಂದು ಕಳಿಸುತ್ತಾರೆ. ತಹಶೀಲ್ದಾರ್ ಕಚೇರಿಯಲ್ಲಿನ ಸಿಬ್ಬಂದಿಗಳಿಗೆ ವಿಚಾರಿಸಿದರೆ ನಮಗೆ ಗೊತ್ತಿಲ್ಲ ಎನ್ನುತ್ತಾರೆ. ಕೂಡಲೇ ಜಾತಿ ಪ್ರಮಾಣ ಪತ್ರ ಪಡೆಯಲು ತಹಶೀಲ್ದಾರ್ ಕಚೇರಿಯಲ್ಲಿ ಪ್ರತ್ಯೇಕ ಕೌಂಟರ್ ತೆರೆಯಬೇಕೆಂದು ಚುನಾವಣೆಯ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಚುನಾವಣೆ ಕುರಿತು ಮಾಹಿತಿ ಕೇಳಲು ತಹಶೀಲ್ದಾರ್ ಕವಿತಾ.ಆರ್ ಅವರಿಗೆ ಆಕಾಂಕ್ಷಿಗಳು ದೂರವಾಣಿ ಕರೆ ಮಾಡಿದರೆ ಸ್ವೀಕರಿಸುವುದಿಲ್ಲ. ಸರಕಾರ ಇವರಿಗೆ ದೂರವಾಣಿ ನಂಬರ್ ನೀಡಿರುವುದು ಏನಕೆ ಬರಿ ಅಧಿಕಾರಿಗಳ ಕರೆ ಸ್ವೀಕಾರ ಮಾಡುವುದಕ್ಕೆ ನಾ ಎಂದು ಸಾರ್ವಜನಿಕರ ಯಜ್ಞ ಪ್ರಶ್ನೆಯಾಗಿದೆ.
Be the first to comment