ರಾಜ್ಯ ಸುದ್ದಿಗಳು
ದೊಡ್ಡಬಳ್ಳಾಪುರ
ಇಂದು ನಡೆದ ರಾಜ್ಯ ಒಕ್ಕಲಿಗರ ಸಂಘದ ಚುನಾವಣೆ ಪ್ರಚಾರ ಸಭೆಯಲ್ಲಿಎಂ ನಾಗರಾಜು ನೇತೃತ್ವದ ತಂಡ ಪಾಲ್ಗೊಂಡಿತ್ತು ತಂಡದಲ್ಲಿನ ಹಲವು ಅಭ್ಯರ್ಥಿಗಳು ತಮ್ಮ ಮುಂದಿನ ಗುರಿಯ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರುಈ ಸಂದರ್ಭದಲ್ಲಿ ಮಾತನಾಡಿದ ಆನಂದ್ ರವರು ಸತತ 20 ವರ್ಷಗಳಿಂದ ಸಂಘದ ಏಳಿಗೆಗಾಗಿ ದುಡಿಯುತ್ತಿದ್ದು ಒಕ್ಕಲಿಗ ಸಮುದಾಯವನ್ನು ಉಳಿಸುವ ನಿಟ್ಟಿನಲ್ಲಿ ಹಲವು ಉನ್ನತ ಉತ್ತಮ ಕಾರ್ಯಗಳನ್ನು ಮಾಡಿದ್ದೇನೆ.
ಮುಂದೆಯೂ ಸಹ ಹಲವು ಯೋಜನೆಗಳು ರೂಪಿಸಿದ್ದು ಪ್ರತಿ ತಾಲೂಕಿನಲ್ಲಿ ಒಕ್ಕಲಿಗ ಸಮುದಾಯದ ಒಳಿತಿಗಾಗಿ ಕಾಲೇಜು ಸ್ಥಾಪಿಸುವ ಹಾಗೂ ಆಸ್ಪತ್ರೆಗಳನ್ನು ಇನ್ನಷ್ಟು ಅಭಿವೃದ್ಧಿಪಡಿಸುವ ಯೋಜನೆ ಇದೆ ಸಂಘದಲ್ಲಿರುವ 120 ಕೋಟಿ ಹಣವನ್ನು ಸಂಘದ ಒಳಿತಿಗಾಗಿ ಪ್ರತಿ ತಾಲೂಕಿನಲ್ಲಿ ಸಂಘದ ಅಡಿಯಲ್ಲಿ 5 ಎಕರೆ ಜಾಗವನ್ನು ಖರೀದಿಸುವ ಯೋಜನೆ ಇದೆ ಮತದಾರರು ಮತ ಹಾಕುವಲ್ಲಿ ಮುಂದಾಗಬೇಕು ಅಭಿವೃದ್ಧಿಪರ ಇರುವ ಅಭ್ಯರ್ಥಿಗಳಿಗೆ ತಮ್ಮ ಮತವನ್ನು ನೀಡಬೇಕೆಂದು ಮನವಿ ಮಾಡಿದರು
Be the first to comment