ಎಚ್.ಮರಿಯಪ್ಪ ವಕೀಲರ ಟ್ರಸ್ಟ್ ವತಿಯಿಂದ ಉಚಿತ ಗಣಕ ಯಂತ್ರ ವಿತರಣೆ

ವರದಿ: ಗ್ಯಾನಪ್ಪ ದೊಡ್ಡಮನಿ ಮಸ್ಕಿ,

ಜಿಲ್ಲಾ ಸುದ್ದಿಗಳು 

ಮಸ್ಕಿ

ತಾಲೂಕಿನ ಸರಕಾರಿ ಪ್ರೌಢಶಾಲೆ ತುರುವಿಹಾಳ ಶಾಲೆ ಯಲ್ಲಿ ಎಚ್. ಮರಿಯಪ್ಪ ವಕೀಲರು ಹೆಡಗಿಬಾಳ ಚಾರಿಟೇಬಲ್ ಟ್ರಸ್ಟ್ (ರಿ)ಸಿಂಧನೂರು ವತಿಯಿಂದ ಸರಕಾರಿ ಪ್ರೌಢಶಾಲೆ ತುರುವಿಹಾಳ ಶಾಲೆಗೆ 5 ಗಣಕಯಂತ್ರಗಳನ್ನು ಉಚಿತವಾಗಿ ವಿತರಿಸಲಾಯಿತು. ಈ ಹಿಂದೆ ಇದೇ ಶಾಲೆಯಲ್ಲಿ 10 ಗಣಕಯಂತ್ರಗಳು ಕಳ್ಳತನವಾಗಿರುವ ಬಗ್ಗೆ ವಿಷಯ ಪ್ರಸ್ತಾಪವಾಗಿತ್ತು. ಶಾಲೆ ಆರಂಭವಾದ ನಂತರ ಮಕ್ಕಳಿಗೆ ಗಣಕಯಂತ್ರದ ತರಬೇತಿಯು ಕುಂಠಿತವಾಗಿತ್ತು. ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಎಸ್ಡಿಎಂಸಿ ಅಧ್ಯಕ್ಷರು ನಮ್ಮ ಟ್ರಸ್ಟ್ ಗೆ ಗಣಕಯಂತ್ರಗಳನ್ನು ನೀಡಿ ಎಂದು ಮನವಿ ಸಲ್ಲಿಸಿದ್ದರು. ಅವರ ಮನವಿಗೆ ಸ್ಪಂದಿಸಿ ಇಂದು ಟ್ರಸ್ಟ್ನ ಸರ್ವ ಸದಸ್ಯರ ಸಮಕ್ಷಮದಲ್ಲಿ ಶಾಲೆಗೆ ಗಣಕಯಂತ್ರಗಳನ್ನು ವಿತರಿಸಲಾಯಿತು ಎಂದು ಎಚ್. ಮರಿಯಪ್ಪ ವಕೀಲರು ತಿಳಿಸಿದರು. ಅದೇ ರೀತಿಯಾಗಿ ಈ ಟ್ರಸ್ಟ್ ನ ಅಧ್ಯಕ್ಷರು ಇದೇ ಶಾಲೆಯ ಹಳೆಯ ವಿದ್ಯಾರ್ಥಿ ಆಗಿದ್ದರಿಂದ ನಾನು ಓದಿದ ಶಾಲೆಗೆ ಏನಾದರೂ ಒಂದು ಉಡುಗೊರೆ ನೀಡಬೇಕು ಎಂಬ ಮಹದಾಸೆಯಿಂದ ಗುರುಗಳ ಮನವಿಗೆ ಸ್ಪಂದಿಸಿ ತ್ವರಿತಗತಿಯಲ್ಲಿ ಗಣಕಯಂತ್ರಗಳನ್ನು ಸರಕಾರಿ ಪ್ರೌಢ ಶಾಲೆ ತುರುವಿಹಾಳ ಶಾಲೆಗೆ ಗಣಕಯಂತ್ರಗಳನ್ನು ವಿತರಿಸಿ ನಂತರ ಈ ಶಾಲೆಯ ಗುರುಗಳಿಗೆ ಗುರುವಂದನೆ ಸಮರ್ಪಿಸಿದರು. ಹಾಗೆಯೇ ಟ್ರಸ್ಟ್ ನ ಪದಾಧಿಕಾರಿಗಳಿಗೆ ಶಾಲೆಯ ಆಡಳಿತ ಮಂಡಳಿ ಗೌರವಿಸಿ ಸನ್ಮಾನಿಸಲಾಯಿತು. ಇದರಿಂದ ಶಾಲೆಯ ಮಕ್ಕಳಲ್ಲಿ ಮಂದಹಾಸ ಮೂಡಿಬಂದಿತು.

CHETAN KENDULI

ಇದೇ ಸಂದರ್ಭದಲ್ಲಿ ಚಿನ್ನಪ್ಪ ಹೆಡಗಿಬಾಳ ಗೌರವಾಧ್ಯಕ್ಷರು, ಕೆ. ಮಹೇಶ ಉಪಾಧ್ಯಕ್ಷರು, ಪಿ.ಪಿ ಡೇವಿಡ್ ಖಜಾಂಚಿ, ರಮೇಶ್ ಸಜ್ಜನ್ ತುರುವಿಹಾಳ ಮಾರ್ಗದರ್ಶಕರು, ಸೋಮಲಿಂಗಪ್ಪ ಮುಖ್ಯೋಪಾಧ್ಯಾಯರು ಸರಕಾರಿ ಪ್ರೌಢಶಾಲೆ ತುರುವಿಹಾಳ, ರಮೇಶ್ ಎಸ್ಡಿಎಂಸಿ ಅಧ್ಯಕ್ಷರು ತುರುವಿಹಾಳ ಹಾಗೂ ಸರ್ವ ಎಸ್ಡಿಎಂಸಿ ಸದಸ್ಯರು ಮತ್ತು ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಸೇರಿದಂತೆ ಇನ್ನಿತರೆ ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*