ಜಿಲ್ಲಾ ಸುದ್ದಿಗಳು
ಮಸ್ಕಿ
ಪಟ್ಟಣದ ಕೇಂದ್ರ ಶಾಲೆ ಆವರಣದಲ್ಲಿ ಆರೋಗ್ಯ ಇಲಾಖೆಯ ವತಿಯಿಂದ ಗ್ರಾಮ ಆರೋಗ್ಯ ಮತ್ತು ನೈರ್ಮಲ್ಯ ಪೋಷಣೆ ಕಮಿಟಿ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಈ ಕಾರ್ಯಕ್ರಮವನ್ನು ಉದ್ದೇಶಿಸಿ ಗ್ರಾಮೀಣ ಭಾಗದಲ್ಲಿ ಆರೋಗ್ಯದ ಸ್ಥಿತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯತ್ ಸದಸ್ಯರು ಮತ್ತು ಸಮಿತಿಯ ಗ್ರಾಮ ನೈರ್ಮಲ್ಯ ಆರೋಗ್ಯ ಪೋಷಣ ಸಮಿತಿಯ ಒಂದು ಪಾತ್ರ ಬಹಳ ಮಹತ್ವದ್ದು, ಆ ಒಂದು ಸಮಿತಿಯು ಊರಿನಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಿ ಈ ಒಂದು ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಮತ್ತು ಊರಿನ ಗುರುಹಿರಿಯರನ್ನು ಮತ್ತು ಸಮವಯಸ್ಕರನ್ನು, ಮಕ್ಕಳನ್ನು ಗಣನೆಗೆ ತೆಗೆದುಕೊಂಡು ಅವರ ಆರೋಗ್ಯವನ್ನು ಕಾಪಾಡಲು ನೀವೆಲ್ಲಾ ಸಹಕರಿಸಿ ಹಾಗೂ ನಿಮ್ಮ ಮತ್ತು ನಿಮ್ಮ ಗ್ರಾಮದ ಅರೋಗ್ಯ ನಿಮ್ಮ ಕೈಯಲ್ಲಿದೆ ಎಂದು ಪ್ರಾಣೇಶ್ ಜೋಶಿ ತಾಲೂಕ ಆರೋಗ್ಯ ಶಿಕ್ಷಣ ಅಧಿಕಾರಿಗಳು ಹಾಗೂ ಗದ್ದೆಪ್ಪ ಆರೋಗ್ಯ ನಿರೀಕ್ಷಣಾಧಿಕಾರಿಗಳು ಮಸ್ಕಿ ಇವರು ಕಾರ್ಯಕ್ರಮದಲ್ಲಿ ನೆರೆದಿರುವಂತಹ ಸರ್ವರಿಗೂ ಆರೋಗ್ಯದ ಬಗ್ಗೆ ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಪ್ರಾಣೇಶ್ ಜೋಶಿ ತರಬೇತಿದಾರರು, ಬಸವರಾಜ್ ಎಚ್ಎಸ್ ಡಿ ಸಿ ಜಿಲ್ಲಾ ಸಂಯೋಜಕರು, ಗದ್ದೆಪ್ಪ ಆರೋಗ್ಯ ನಿರೀಕ್ಷಣಾಧಿಕಾರಿಗಳು ಪಿ ಎಚ್ ಸಿ ಮಸ್ಕಿ, ಶ್ರೀಮತಿ ಅಂಬಮ್ಮ ತಾಲೂಕ ಆಶಾ ಸದಸ್ಯರು, ಕುಮಾರಿ ಶಶಿರೇಖಾ ಪಿ ಎಚ್ ಸಿ ಒ ಮಸ್ಕಿ, ಹಾಗೂ ಮಸ್ಕಿ ಮೆದಿಕಿನಾಳ ಸಂತೆಕೆಲ್ಲೂರು ಗ್ರಾಮ ಪಂಚಾಯತ್ ಸದಸ್ಯರುಗಳು ಮತ್ತು ಆಶಾ ಕಾರ್ಯಕರ್ತರು ಹಾಜರಿದ್ದರು.
Be the first to comment