ಬೇಕಾಬಿಟ್ಟಿ ಸಂಚರಿಸುತ್ತಿದ್ದ ಜನರಿಂದ ನಿಯಮ ಪಾಲನೆಗಾಗಿ ದೇವರ ಪ್ರಮಾಣ ಪಡೆದ ಪೊಲೀಸ ಇಲಾಖೆ ಅಧಿಕಾರಿಗಳು….!!! ಕೊರೊನಾ ನಿಯಮ ಜನರಿಗಾಗಿದೆ: ಈಶಾನ್ಯ ಭಾಗದ ಡಿಸಿಪಿ ಸಿ.ಕೆ.ಬಾಬಾ…!

ವರದಿ: ಆಕಾಶ ಚಲವಾದಿ

ರಾಜ್ಯ ಸುದ್ದಿಗಳು

CHETAN KENDULI

ಬೆಂಗಳೂರು (ಯಲಹಂಕ):

ಕೊರೊನಾ ಅಲೆಯನ್ನು ಮೆಟ್ಟಿನಿಲ್ಲಲು ರಾಜ್ಯ ಸರಕಾರ ಸಾಕಷ್ಟು ಕಟ್ಟುನಿಟ್ಟಿನ ನಿಯಮಾವಳಿಗಳನ್ನು ಮಾಡಿದ್ದರೂ ಅವುಗಳನ್ನು ಪಾಲನೆ ಮಾಡುವಲ್ಲಿ ಯಡವಟ್ಟು ಮಾಡುತ್ತಿರುವ ಜನತೆಯಿಂದ ಮುಂದಿನ ಲಾಕಡೌನ್ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತೇವೆ ಎಂದು ಪೊಲೀಸ ಇಲಾಖೆ ಮೇಲಾಧಿಕಾರಿಗಳು ಸಾರ್ವಜನಿಕವಾಗಿಯೇ ದೇವರ ಮೇಲೆ ಪ್ರಮಾಣ ಮಾಡಿಸಿಕೊಂಡ ಘಟನೆ ಬೆಂಗಳೂರಿನ ಯಲಹಂಕ ವ್ಯಾಪ್ತಿಯಲ್ಲಿ ನಡೆದಿದೆ.



ಹೌದು, ಶನಿವಾರ ಹಾಗೂ ರವಿವಾರ ಸಂಪೂರ್ಣ ಬಂದ್ ಹಿನ್ನೆಲೆಯಲ್ಲಿಯೂ ಬೆಂಗಳೂರಿನಲ್ಲಿ ಬೇಕಾಬಿಟ್ಟಿಯಾಗಿ ಸಂಚಾರ ನಡೆಸಿದ ಜನರನ್ನು ಒಟ್ಟಾಗಿಸಿ ರಸ್ತೆಯ ಮೇಲೆ ಸಾಮಾಜಿಕ ಅಂತರ ಗೆರೆಗಳನ್ನು ಹಾಕಿದ ಪೊಲೀಸರು ಜನರಿಗೆ ದಂಡ ವಿಧಿಸುವ ಬದಲಿಗೆ ಅವರಿಂದ ದೇವರ ಮೇಲೆ ಪ್ರಮಾಣ ಮಾಡಿಸಲಾಯಿತು. ಇದರಿಂದ ಬೇಕಾಬಿಟ್ಟಿಯಾಗಿ ಸಂಚಾರ ನಡೆಸಿದ್ದ ಜನರಿಗೆ ತಪ್ಪಿನ ಅರಿವು ಮಾತ್ರವಲ್ಲದೇ ಸಾರ್ವಜನಿಕರಿಗಾಗಿ ನಿತ್ಯವೂ ಶ್ರಮ ಪಡುತ್ತಿರುವ ಆರೋಗ್ಯ ಹಾಗೂ ರಕ್ಷಣಾ ಸಿಬ್ಬಂದಿಗಳ ಕರ್ತವ್ಯದ ಬಗ್ಗೆಯೂ ತಿಳಿದಂತಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಈಶಾನ್ಯ ಭಾಗದ ಡಿಸಿಪಿ ಸಿ.ಕೆ.ಬಾಬಾ, ಕೊರೊನಾ ದುಸ್ಥಿತಿಯನ್ನು ಹೋಗಲಾಡಿಸಬೇಕೆಂದೇ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಸಾಕಷ್ಟು ಶ್ರಮ ಪಡುತ್ತಿವೆ. ಅಲ್ಲದೇ ಜನರಿಗಾಗಿ ಆರೋಗ್ಯ ಮತ್ತು ಪೊಲೀಸ ಇಲಾಖೆಯೂ ಸಾಕಷ್ಟು ಶ್ರಮಿಸುತ್ತಿದೆ. ಇದು ಯಾವುದೇ ವ್ಯಯಕ್ತಿಕ ಸೇವೆಯಾಗಿಲ್ಲ. ಇದನ್ನು ಅರಿತು ಜನರು ತಮ್ಮೊಳಗೆ ತಾವೇ ಬದಲಾವಣೆ ಬಯಸಿ ಕೊರೊನಾ ಕಟ್ಟುನಿಟ್ಟಿನ ಕ್ರಮಗಳ ಪಾಲನೆ ಮಾಡಬೇಕು. ಇದರಿಂದ ಜನರಿಗೇ ಲಾಭದಾಯಕವಾಗಿದೆ ಎನ್ನುವುದು ತಿಳಿಯೇಬಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಎಸಿಪಿ ಆರ್.ಜಯರಾಮ, ನ್ಯೂಟೌನ್ ಪಿಐ ಅರುಣಕುಮಾರ, ಪಿಐ ಸತ್ಯನಾರಾಯಣ, ಗಂಗರುದ್ರಯ್ಯ, ಹರೀಶ, ಸುನೀಲ ಕುಮಾರ ಇದ್ದರು.

 

 

Be the first to comment

Leave a Reply

Your email address will not be published.


*