ರಾಜ್ಯ ಸುದ್ದಿಗಳು
ದೇವನಹಳ್ಳಿ
ಎಲ್ಲಿ ಸ್ವಚ್ಛತೆ ಇರುತ್ತದೆಯೋ ಅಲ್ಲಿ ಆರೋಗ್ಯಕರ ವಾತಾವರಣ ಸೃಷ್ಠಿಯಾಗುತ್ತದೆ ಎಂದು ಪುರಸಭಾ ಆರೋಗ್ಯ ನಿರೀಕ್ಷಕಿ ಶ್ರೀದೇವಿ ತಿಳಿಸಿದರು.ಪಟ್ಟಣದ ಗಾಂಧಿ ಚೌಕದಲ್ಲಿ ಮೈತ್ರಿ ಸರ್ವ ಸೇವಾ ಸಮತಿ ವತಿಯಿಂದ ಪುರಸಭೆ ಸಹಯೋಗದಲ್ಲಿ ನಡೆದ ಬೀದಿ ನಾಟಕ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸ್ವಚ್ಛ ಸುಂದರ ನಗರವನ್ನಾಗಿಸಲು ಪ್ರತಿ ಜನರು ಜಾಗೃತರಾಗಬೇಕು. ಕೋವಿಡ್‌ನಂತಹ ಮಹಾ ಮಾರಿಯನ್ನು ತೊಲಗಿಸಲು ವೈಯಕ್ತಿಕ ಸ್ವಚ್ಛತೆಯ ಜೊತೆಗೆ ತ್ಯಾಜ್ಯ ವಿಲೇವಾರಿ ಮತ್ತು ನೀರಿನ ಮಿತ ಬಳಕೆಯವ ಬಗ್ಗೆ ತಿಳಿದುಕೊಳ್ಳಬೇಕು. ಎಲ್ಲೆಂದರಲ್ಲಿ ಕಸ ಹಾಕುವುದನ್ನು ಬಿಟ್ಟು, ಪುರಸಭೆಯಿಂದ ಬರುವ ಕಸದ ವಾಹನಕ್ಕೆ ಹಾಕಬೇಕು. ನಗರದ ಸ್ವಚ್ಛತೆ ಕೇವಲ ಪುರಸಭೆಯವರದ್ದೊಬ್ಬರದ್ದೇ ಆಗಿರುವುದಿಲ್ಲ ನಾಗರೀಕರಾಗಿರುವ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಪ್ರತಿಯೊಬ್ಬರು ಇಂದಿನಿಂದಲೇ ನಗರ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು.
ಮೈತ್ರಿ ಸರ್ವ ಸೇವಾ ಸಮಿತಿ ಘನತ್ಯಾಜ್ಯ ಘಟಕದ ತಜ್ಞೆ ಕೆ.ಗೌರಮ್ಮ ಮಾತನಾಡಿ, ಪುರಸಭೆಯ ಸಹಯೋಗದಲ್ಲಿ ಬೀದಿ ನಾಟಕದ ಮೂಲಕ ಜನರಿಗೆ ಅರಿವು ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ. ಈ ಕಾರ್ಯಕ್ರಮದ ಉದ್ದೇಶ ನಗರ ಸ್ವಚ್ಛತೆ, ಘನ ತ್ಯಾಜ್ಯವನ್ನು ಯಾವ ರೀತಿ ವಿಲೇವಾರಿ ಮಾಡಬೇಕು. ಒಣ ಕಸ, ಹಸಿ ಕಸವನ್ನು ವಿಂಗಡಿಸಿ ಪುರಸಭೆಯಿಂದ ಬರುವ ವಾಹನದ ಸಿಬ್ಬಂದಿಗೆ ನೀಡಬೇಕು. ರಸ್ತೆ ಬದಿ, ಎಲ್ಲೆಂದರಲ್ಲಿ ಬಿಸಾಡಿದರೆ ಕಸವು ನಗರದ ಸೌಂದರ್ಯವನ್ನು ಹಾಳು ಮಾಡುವುದರ ಜತೆಗೆ ಅನಾರೋಗ್ಯದಂತಹ ಲಕ್ಷಣಗಳು ನಾಗರೀಕರನ್ನು ಬಾಧಿಸುತ್ತದೆ. ಅದ್ದರಿಂದ ಪ್ರತಿಯೊಬ್ಬರು ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಬೇಕು ಎಂದು ಸಲಹೆ ಮಾಡಿದರು. ಇದೇ ಸಂದರ್ಭದಲ್ಲಿ ಬೀದಿ ನಾಟಕದ ಮೂಲಕ ಜನರಿಗೆ ಅರಿವು ಮೂಡಿಸಲಾಯಿತು. ಈ ವೇಳೆ ಪುರಸಭಾ ನಾಮಿನಿ ನಿರ್ದೇಶಕರಾದ ಆರ್.ಪುನಿತಾ, ಮಧುಸುದನ್, ಮಂಜುಳಗುರುಸ್ವಾಮಿ, ಮೈತ್ರಿ ಸರ್ವ ಸೇವಾ ಸಮಿತಿಯ ಬಿ.ಎನ್. ದೇವಾರಾಜ್, ವೆಂಕಟೇಶ್, ಪುರಸಭೆಯ ಸಿಬ್ಬಂದಿಗಳು ಇದ್ದರು.
Be the first to comment