ರಾಜ್ಯ ಸುದ್ದಿಗಳು
ದೇವನಹಳ್ಳಿ
ಭಾರತ ದೇಶದ ಈಶಾನ್ಯ ರಾಜ್ಯ ತ್ರಿಪುರದ ರಾಜ್ಯದ ರಾಜಧಾನಿ ಅಗರ್ತಲದಲ್ಲಿ ನಡೆಯುತ್ತಿರುವ ಭಾರತೀಯ ಪರಂಪರೆ ಉತ್ಸವ ೨೦೨೨ರಲ್ಲಿ ಭಾಗವಹಿಸಲು ಕರ್ನಾಟಕದ ರಾಜ್ಯದ ಪ್ರತಿನಿಧಿಯಾಗಿ ದೇವನಹಳ್ಳಿ ತಾಲೂಕಿನ ಕುಂದಾಣ ಹೋಬಳಿಯ ನೆರಗನಹಳ್ಳಿ ಗ್ರಾಮದ ಆರ್.ಅಕ್ಷಯ್ ಆಯ್ಕೆಯಾಗಿದ್ದಾರೆ.
ಶಾಸಕ ಎಲ್.ಎನ್.ನಾರಾಯಣಸ್ವಾಮಿ ಮಾತನಾಡಿ, ನಮ್ಮ ರಾಜ್ಯದ ಪರಂಪರೆ ಎತ್ತಿಹಿಡಿಯುತ್ತಿರುವ ಯುವ ಅಕ್ಷಯ್ ಅವರಿಗೆ ಅಭಿನಂದಿಸುವುದರ ಜತೆಗೆ ತಾಲೂಕು, ಜಿಲ್ಲೆ ಮತ್ತು ರಾಜ್ಯಮಟ್ಟದಲ್ಲಿ ಉನ್ನತ ಸ್ಥಾನಮಾನ ಸಿಗಲಿ ಎಂದು ಧನಸಹಾಯ ಮಾಡುವುದರ ಮೂಲಕ ಹಾರೈಸಿದರು. ಈ ವೇಳೆಯಲ್ಲಿ ಜೆಡಿಎಸ್ ಪ್ರಚಾರ ಘಟಕದ ತಾಲೂಕು ಅಧ್ಯಕ್ಷ ನೆರಗನಹಳ್ಳಿ ಶ್ರೀನಿವಾಸ್, ಮುಖಂಡರು ಇದ್ದರು.
Be the first to comment