ಕ್ರೈಸ್ತ ಸಮುದಾಯದವರಿಂದ ವಿವಿಧ ಕಡೆಗಳಲ್ಲಿ ಕ್ರಿಸ್ಮಸ್ ಸಂಭ್ರಮಾಚರಣೆ

ವರದಿ ಹೈದರ್ ಸಾಬ್ ಕುಂದಾಣ

ರಾಜ್ಯ ಸುದ್ದಿಗಳು 

ಬೆಂಗಳೂರು

ದೇವನಹಳ್ಳಿ ತಾಲೂಕಿನ ಕಾರಹಳ್ಳಿ ಗ್ರಾಮದ ಸಂತ ಜೂದ್ ತದ್ದೇಯುಸರ ಚರ್ಚ್‌ನಲ್ಲಿ ಸರಳ ಮತ್ತು ಸಾಂಪ್ರದಾಯಿಕವಾಗಿ ಕ್ರೈಸ್ತ ಸಮುದಾಯದವರು ಸರಳವಾಗಿ ಕ್ರಿಸ್‌ಮಸ್ ಹಬ್ಬವನ್ನು ಆಚರಿಸಿದರು. ಚರ್ಚ್‌ನಲ್ಲಿ ವಿವಿಧ ರೀತಿಯಲ್ಲಿ ಚಿಕ್ಕ ಚಿಕ್ಕ ಕೊಟಿರವನ್ನು ಮಾಡಿ, ಅದರಲ್ಲಿ ಗೊಂಬೆಗಳು ಮತ್ತು ಯೇಸು ಕ್ರೈಸ್ತನ ಜನನದ ಇತಿಹಾಸವನ್ನು ಸಾರಿ ಹೇಳುವಂತೆ ಅಲಂಕಾರಗೊಳಿಸಲಾಗಿತ್ತು. ರಾತ್ರಿವಿಡೀ ಬೈಬಲ್ ಶ್ಲೋಕಗಳನ್ನು ಮತ್ತು ಯೇಸು ಕ್ರೈಸ್ತನ ಹಾಡುಗಳನ್ನು ಜಪಿಸುವುದರ ಮೂಲಕ ಶ್ರದ್ಧಭಕ್ತಿಯಿಂದ ಆಚರಿಸಲಾಯಿತು. ಚರ್ಚ್‌ಅನ್ನು ದೀಪಾಲಂಕಾರಗೊಳಿಸಿ ಕಂಗೊಳಿಸುವಂತೆ ಮಾಡಲಾಗಿತ್ತು. ವರ್ಷದಲ್ಲಿ ಒಂದು ಬಾರಿ ಬರುವ ಕ್ರಿಸ್ಮಸ್ ಹಬ್ಬವನ್ನು ಅರ್ಥಪೂರ್ಣವಾಗಿ ಎಲ್ಲಾ ಕೋವಿಡ್ ನಿಯಮಗಳನ್ನು ಪಾಲಿಸುವುದರ ಮೂಲಕ ಗ್ರಾಮೀಣ ಭಾಗದಲ್ಲಿ ಆಚರಿಸಿದರು. 

CHETAN KENDULI

ವಿಚಾರಣೆ ಗುರು ಮ್ಯಾಥ್ಯು ಕೊಟಯಿಲ್ ಮಾತನಾಡಿ, ಕ್ರಿಸ್ಮಸ್ ಹಬ್ಬದಲ್ಲಿ ಎಲ್ಲರೂ ಒಗ್ಗೂಡಿ ಸಾಂಪ್ರದಾಯಿಕವಾಗಿ ಆಚರಿಸುತ್ತಿದ್ದೇವೆ. ಸುಮಾರು ೧೨೫ವರ್ಷಗಳಿಂದ ಕಾರಹಳ್ಳಿ ಗ್ರಾಮದ ಈ ಮಂದಿರದಲ್ಲಿ ಆಚರಿಸುತ್ತಿದ್ದೇವೆ. ಇಲ್ಲಿ ೨೫ ಕುಟುಂಬಗಳು ಮಾತ್ರ ಇದ್ದಾರೆ. ಸರಳವಾಗಿ ಸರಕಾರದ ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ಆಚರಿಸಲಾಗುತ್ತಿದೆ ಎಂದು ಹೇಳಿದರು.

ಕಾರಹಳ್ಳಿ ಕ್ರೈಸ್ತ ಮುಖಂಡ ಜೋಸೇಫ್ ಮಾತನಾಡಿ, ಸಂತಜೂದ್ ತದ್ದೇಯುಸರ ದೇವಾಲಯವೆಂಬ ಹೆಸರು ಈ ಚರ್ಚಿಗೆ ಹೆಸರಿದೆ. ೪೦೦ ವರ್ಷದಿಂದ ಇಲ್ಲಿರುವ ಮೂಲ ಕ್ರೈಸ್ತರು ಇಲ್ಲಿದ್ದಾರೆ. ಮುಂಚೆ ಒಂದು ಚರ್ಚ್ ಇತ್ತು ಆ ಮಂದಿರ ಶಿಥಿಲಗೊಂಡಿದ್ದರಿಂದ ಈ ಹೊಸ ಚರ್ಚ್‌ಅನ್ನು ನಿರ್ಮಾಣ ಮಾಡಲಾಗಿದೆ. ಇದು ಕಟ್ಟಿ ೧೨೫ ವರ್ಷಗಳಾಗಿದೆ. ನಾವು ಕ್ರಿಸ್ಮಸ್ ಅನ್ನು ಆ ಕಾಲದಿಂದಲೂ ಸರಳ ಮತ್ತು ಸಾಂಪ್ರದಾಯಿಕವಾಗಿ ಈ ವರ್ಷದಲ್ಲಿ ಕೋವಿಡ್ ಇರುವುದರಿಂದ ಬಹಳ ಸರಳವಾಗಿ ಆಚರಣೆ ಮಾಡಲಾಗಿದೆ. ೬೦ ಜನರ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಗಿದೆ. ಸರ್ವ ಜನಾಂಗದವರು ಒಂದೆ ಎಂಬ ಭಾವನೆಯಲ್ಲಿ ಹಬ್ಬವನ್ನು ಆಚರಿಸಲಾಗಿದೆ ಎಂದರು. ಈ ವೇಳೆಯಲ್ಲಿ ಬಿಎಸ್‌ಎಫ್‌ನ ಯೋಧರು, ಗ್ರಾಮದ ಮುಖಂಡರು, ಮಕ್ಕಳು ಇದ್ದರು.

Be the first to comment

Leave a Reply

Your email address will not be published.


*