ಜಿಲ್ಲಾ ಸುದ್ದಿಗಳು
ಬಾಗಲಕೋಟೆ:ರೀಚ್ ಸಂಸ್ಥೆಯ ಮಕ್ಕಳ ಸಹಾಯವಾಣಿ-1098 ಸಹಯೋಗದಲ್ಲಿ ಸರಕಾರಿ ಬಾಲಕಿಯರ ಪ್ರಾಥಮಿಕ ಶಾಲೆ, ಕರಡಿ ಗ್ರಾಮದಲ್ಲಿ ತೆರೆದ ಮನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ತೆರೆದ ಮನೆ ಕಾರ್ಯಕ್ರಮಕ್ಕೆ ಆಗಮಿಸಿದಂತಹ ಎಲ್ಲ ಸ್ಥಳೀಯ ಮಟ್ಟದ ಅಧಿಕಾರಿಗಳು ದೀಪ ಬೆಳಗಿಸುವುದರ ಮೂಲಕವಾಗಿ ಉದ್ಘಾಟನೆಯನ್ನು ನೆರವೇರಿಸಿದರು.ಮಾನ್ಯ ಸಬ್ ಇನ್ಸ್ಪೆಕ್ಟರ್. ಹುನಗುಂದ.ಎಸ್ ಬಿ ಪಾಟೀಲ್ ರವರು ಮಕ್ಕಳನ್ನು ಉದ್ದೇಶಿಸಿ ಬಾಲ್ಯ ವಿವಾಹ. ಪೋಸ್ಕೋ ಮಕ್ಕಳ ಕಳ್ಳ ಸಾಗಾಣಿಕೆ ಹಾಗೂ ಮಕ್ಕಳ ಮೇಲೆ ನಡೆಯುವ ದೌರ್ಜನ್ಯದ ಕುರಿತಾಗಿ ಹಾಗೂ ಮೊಬೈಲ್ ಬಳಕೆಯ ದುಷ್ಪರಿಣಾಮಗಳ ಕುರಿತಾಗಿ ಮಕ್ಕಳಿಗೆ ಸವಿಸ್ತಾರವಾಗಿ ತಿಳಿಸಿ ಹೇಳಿದರು.
ನಂತರ ಮಕ್ಕಳ ಕಡೆಯಿಂದ ಶಾಲಾ ಆವರಣದ ಸ್ವಚ್ಛತೆಯ ಕುರಿತಾಗಿ ಮಕ್ಕಳ ಕಡೆಯಿಂದ ಮಾನ್ಯ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಪತ್ರ ನೀಡಲಾಯಿತು.ಇದರನ್ವಯ ಮಾತನಾಡಿದ ಮಾನ್ಯ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ತಕ್ಷಣ ಶಾಲಾ ಆವರಣದ ಸ್ವಚ್ಛತೆ ಕುರಿತಾಗಿ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದರು.
ನಂತರ ಪ್ರಾಥಮಿಕ ಶಾಲಾ ಪ್ರಭಾರಿ ಮುಖ್ಯೋಪಾಧ್ಯಾಯರಾದಂತಹ ಎಂ ಬಿ ಗೌಡರ್ ರವರು ಮಕ್ಕಳ ಸಹಾಯವಾಣಿ-1098 ಮಕ್ಕಳಿಗಾಗಿ ಮಕ್ಕಳಿಗೋಸ್ಕರ ಇರುವಂತಹ ಒಂದು ಸಹಾಯವಾಣಿ ಸಂಖ್ಯೆ ಇದರ ಸದುಪಯೋಗವನ್ನು ಮಕ್ಕಳು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳಬೇಕೆಂದು ತಿಳಿಸಿದರು.
ಮಕ್ಕಳ ಸಹಾಯವಾಣಿ ಸಿಬ್ಬಂದಿರವರು ಮತ್ತು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುನಗುಂದರವರು ಮಾನ್ಯ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ನಮ್ಮ ಶಾಲೆಗೆ ಆಗಮಿಸಿ ನಮ್ಮ ಶಾಲಾ ಮಕ್ಕಳಿಗೆ ಕಾನೂನು ಅರಿವು ಹಾಗೂ ಮಕ್ಕಳ ರಕ್ಷಣೆಗೆ ಸ್ಥಳೀಯ ಮಟ್ಟದಲ್ಲಿ ನಾವೆಲ್ಲ ಅಧಿಕಾರಿಗಳು ಇದ್ದೇವೆ ಎಂದು ತಿಳಿಸಿಕೊಟ್ಟಿದ್ದಕ್ಕೆ ಮತ್ತೊಮ್ಮೆ ತಮಗೆಲ್ಲರಿಗೂ ನಮ್ಮ ಪ್ರಾಥಮಿಕ ಶಾಲಾ ಸಿಬ್ಬಂದಿ ಹಾಗೂ ಮುದ್ದುಮಕ್ಕಳ ಪರವಾಗಿ ಹೃತ್ಪೂರ್ವಕ ವಂದನೆಗಳನ್ನು ತಿಳಿಸಿದರು.
ತದ ನಂತರ ಮಕ್ಕಳ ಸಹಾಯವಾಣಿ ಸಿಬ್ಬಂದಿ ಗಳಾದ ಶ್ರೀ ರಮೇಶ್ ಚವಡಿರವರು ಮಾನ್ಯ ಸಬ್ಇನ್ಸ್ಪೆಕ್ಟರ್ ರವರನ್ನು ಕುರಿತಾಗಿ ಮಾತನಾಡುತ್ತಾ ಬಾಲ್ಯ ವಿವಾಹ ಪೋಕ್ಸೋ ಹಾಗೂ ಮಕ್ಕಳ ಕಳ್ಳ ಸಾಗಾಣಿಕೆ ಅಂತಹ ಪ್ರಕರಣಗಳಲ್ಲಿ ಪೊಲೀಸ್ ಇಲಾಖೆಯ ಸಹಕಾರ ಮತ್ತು ಸಹಭಾಗಿತ್ವ ಉತ್ತಮವಾಗಿದೆ. ಆದ ಕಾರಣ ಮಕ್ಕಳ ಸಹಾಯವಾಣಿ ಕಡೆಯಿಂದ ಪೊಲೀಸ್ ಇಲಾಖೆಯ ಎಲ್ಲಾ ಸಿಬ್ಬಂದಿಗಳಿಗೆ ವಂದನೆಗಳನ್ನು ಸಲ್ಲಿಸುತ್ತೇವೆ.
ಇತ್ತೀಚಿನ ದಿನಮಾನಗಳಲ್ಲಿ ಮಕ್ಕಳ ಸಹಾಯವಾಣಿಗೆ ಬರುವಂತಹ ಪ್ರಕರಣಗಳು ಈ ಕೆಳಗಿನಂತಿವೆ ಮಕ್ಕಳು ಭಿಕ್ಷಾಟನೆ, ತಂದೆ ಕುಡಿದು ಬಂದು ತಾಯಿ ಮತ್ತು ಮಕ್ಕಳನ್ನು ಹೊಡೆಯುವುದು. ಹೆಣ್ಣುಮಕ್ಕಳು ಶಾಲೆಗೆ ಬರುವ ದಾರಿಯಲ್ಲಿ ಹುಡುಗರು ಚುಡಾಯಿಸುವುದು. ಜೋರಾದ ಟ್ರ್ಯಾಕ್ಟರ್ ಗಳ ಪದ್ಯಗಳ ಶಬ್ದ. ಸಾರ್ವಜನಿಕರು ಶಾಲಾ ಆವರಣವನ್ನು ಸ್ವಂತಕ್ಕೆ ಬಳಕೆ ಮಾಡುವುದು. ಶಾಲಾವರಣದಲ್ಲಿ ಧೂಮಪಾನ ಮದ್ಯಪಾನ ಮಾಡುವುದು. ಬಸ್ಸು ಹಾಗೂ ಬಸ್ ನಿಲ್ದಾಣಗಳಲ್ಲಿ ಹೆಣ್ಣು ಮಕ್ಕಳಿಗೆ ಅಸುರಕ್ಷತೆ. ಈ ತರಹದ ಪ್ರಕರಣಗಳು ಇತ್ತೀಚಿಗೆ ಹೆಚ್ಚಾಗಿ ಮಕ್ಕಳ ಸಹಾಯವಾಣಿ 1098ಗೆ ಪ್ರಕರಣಗಳು ಬರುತ್ತಿದ್ದು ಇಂತಹ ಪ್ರಕರಣಗಳಲ್ಲೂ ಕೂಡ ಪೊಲೀಸ್ ಇಲಾಖೆಯು ಮಕ್ಕಳ ಹಿತದೃಷ್ಟಿಯಿಂದ ಸೂಕ್ತ ಕಾನೂನು ಕ್ರಮವನ್ನು ತೆಗೆದುಕೊಳ್ಳಬೇಕಾಗಿ ತಮ್ಮಲ್ಲಿ ಮೂಲಕ ಕೇಳಿಕೊಳ್ಳುತ್ತೇನೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ C B ಬೂದಿಹಾಳ್ ಹಾಗೂ ಉಪಾಧ್ಯಕ್ಷರಾಗಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಎಸ್ ಬಿ ಪಾಟೀಲ್,ಮುಖ್ಯ ಅತಿಥಿಗಳಾಗಿ ಸಿ.ಆರ್.ಪಿ ಪಿ ಟಿ ದೊಡ್ಮನೆ ರವರು ವಹಿಸಿಕೊಂಡಿದ್ದರು.ಹಾಗೂ ಪಂಚಾಯತ್ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಮತ್ತು ಸರ್ವ ಸದಸ್ಯರು ಈ ಸಭೆಯಲ್ಲಿ ಬಾಗಿಯಾಗಿದ್ದರು.ಯಲ್ಲಪ್ಪ ಬಾರಕೇರ ನಿರೂಪಿಸಿದರು,ಶ್ರೀಮತಿ ಶಾರದಾ ಪೂಜಾರಿ ಸ್ವಾಗತಿಸಿದರು,ಶ್ರೀ ರಮೇಶ್ ಚವಡಿರವರು ವಂದಿಸಿದರು.
Be the first to comment