ಜಿಲ್ಲಾ ಸುದ್ದಿಗಳು
ಭಟ್ಕಳ
ಕೋವಿಡ್ ಸಂಕಷ್ಟದ ಸ್ಥಿತಿಯಲ್ಲಿಯೂ ಭಟ್ಕಳ ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿ ಸಹಕಾರಿ ಬ್ಯಾಂಕ್ ಕಳೆದ ಸಾಲಿನಲ್ಲಿ 98.87 ಲಕ್ಷ ಲಾಭ ಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ಭಟ್ಕಳ ಶಾಸಕ ಸುನೀಲ ನಾಯ್ಕ ಹೇಳಿದರು. ಶುಕ್ರವಾರ ಬ್ಯಾಂಕನಮೇಲ್ಗಡೆ ಇರುವ ಸಭಾಂಗಣದಲ್ಲಿ ಶೇರುದಾರರ ಸಭೆಯಲ್ಲಿ ಮಾತನಾಡಿ, ಪಿ.ಎಲ್.ಡಿ ಬ್ಯಾಂಕ್ ಉತ್ತರ ಕನ್ನಡ ಜಿಲ್ಲೆಯಲ್ಲಿ 11 ಶಾಖೆಗಳನ್ನು ಹೊಂದಿದೆ. ಬ್ಯಾಂಕ್ ಕೃಷಿ ಸಾಲದ ಜತೆಗೆ ಕೃಷಿಯೇತರ ಸಾಲಗಳನ್ನು ಗ್ರಾಹಕರ ಅವಶ್ಯಕತೆಗೆ ತಕ್ಕಂತೆ ನೀಡುತ್ತಿದೆ ಎಂದರು.ಬ್ಯಾಂಕಿನಲ್ಲಿ 28,501 ಸದಸ್ಯರಿದ್ದು, 1007.73 ಲಕ್ಷ ಷೇರು ಬಂಡವಾಳ ಸಂಗ್ರಹಿಸಲಾಗಿದೆ.ವಷಾಂತ್ಯಕ್ಕೆ 710,816.49 ಲಕ್ಷ ಠೇವು ಸಂಗ್ರಹಿಸಿದ್ದು, 31,124.99 ಲಕ್ಷ ಕೃಷಿ ಸಾಲ ಹಾಗೂ 71,1412.16 ಲಕ್ಷ ಕೃಷಿಯೇತರ ಸಾಲ ನೀಡಲಾಗಿದೆ. ವಿವಿಧ ಬ್ಯಾಂಕ್‌ಗಳಲ್ಲಿ 73,330.57 ಲಕ್ಷ ಹೂಡಿಕೆ ಮಾಡಲಾಗಿದೆ ಎಂದರು.ಮುಖ್ಯ ಕಾರ್ಯನಿರ್ವಾಹಕ ವಾಸುದೇವ ನಾಯ್ಕ ವರದಿ ವಾಚಿಸಿದರು. ಉಪಾಧ್ಯಕ್ಷೆ ಗಾಯತ್ರಿ ನಾಯ್ಕ, ನಿರ್ದೇಶಕರಾದ ಈರಪ್ಪ ನಾಯ್ಕ, ಈಶ್ವರ ನಾಯ್ಕ, ಸುರೇಶ ನಾಯ್ಕ, ಸಂತೋಷ ನಾಯ್ಕ, ನವನೀತ ನಾಯ್ಕ, ಮಂಜಪ್ಪ ನಾಯ್ಕ, ಹರೀಶ ನಾಯ್ಕ, ಮೋಹನ ನಾಯ್ಕ, ಈಶ್ವರ ನಾಯ್ಕ, ನಾಗಯ್ಯ ಗೊಂಡ, ಮಂಜು ಮೊಗೇರ, ಕಮಲಾ ನಾಯ್ಕ ಇದ್ದರು.
Be the first to comment