ರಾಜ್ಯ ಸುದ್ದಿಗಳು
ದೇವನಹಳ್ಳಿ
ತಾಲೂಕಿನ ಅರದೇಶನಹಳ್ಳಿ ಗ್ರಾಮದ ಕಾಲೋನಿಯಲ್ಲಿ ಇತ್ತೀಚೆಗೆ ಬಿದ್ದಂತಹ ಮಳೆಯಿಂದಾಗಿ ಮನೆಯ ಗೋಡೆ ಮೇಲ್ಛಾವಣಿ ಕುಸಿದಿದ್ದು, ವಾಸವಾಗಿದ್ದ ಕುಟುಂಬಸ್ಥರಿಗೆ ಯಾವುದೇ ಪ್ರಾಣಾಪಯ ಸಂಭವಿಸಿರುವುದಿಲ್ಲ.
ಮನೆಯಲ್ಲಿ ಬಾಣಂತಿ ಮಹಿಳೆ ಸೇರಿದಂತೆ ಎರಡು ಕುಟುಂಬಗಳು ವಾಸ ಮಾಡುತ್ತಿದ್ದರು. ಗೋಡೆ ಕುಸಿದಿರುವುದನ್ನು ಗಮನಕ್ಕೆ ಬಂದ ಕೂಡಲೇ ಸ್ಥಳಕ್ಕೆ ಜಾಲಿಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಕುಸಿದಿರುವ ಮನೆಯ ಪೋಟೋಗಳನ್ನು ಹಿಡಿದುಕೊಂಡು ಹೋಗಿದ್ದಾರೆ. ಆದರೆ, ಇದುವರೆಗೂ ಯಾವುದೇ ಪರಿಹಾರ ಸಿಕ್ಕಿಲ್ಲ. ಶೀಘ್ರವಾಗಿ ಪರಿಹಾರ ನೀಡಿದರೆ ಹೆಚ್ಚು ಅನುಕೂಲವಾಗುತ್ತದೆ ಎಂದು ಮನೆಯ ಮಾಲೀಕ ವಿಜಯಕುಮಾರ್ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
Be the first to comment