ಖಾಸಗಿ ಕಾರ್ಯಕ್ರಮಕ್ಕೆ ಮಾಜಿ ಸಂಸದ ಎಂ.ವೀರಪ್ಪಮೊಯ್ಲಿ ಭೇಟಿ  ಬಿಜೆಪಿ ಸರಕಾರದಲ್ಲಿ ಸಫಲತೆಗಿಂತ ವಿಫಲತೆಗಳೇ ಹೆಚ್ಚು ಆರೋಪ

ವರದಿ: ಹೈದರ್ ಸಾಬ್, ಕುಂದಾಣ

ರಾಜ್ಯ ಸುದ್ದಿಗಳು 

ದೇವನಹಳ್ಳಿ

ಪಟ್ಟಣದ ಸೂಲಿಬೆಲೆ ರಸ್ತೆಯಲ್ಲಿರುವ ಕುಂಭೇಶ್ವರ ಬಿಲ್ಡಿಂಗ್‌ನಲ್ಲಿ ನೂತನವಾಗಿ ಖಾಸಗಿ ಬ್ಯಾಟರಿ ಚಾಲಿತ ದ್ವಿಚಕ್ರ ವಾಹನ ಮಳಿಗೆಗೆ ಮಾಜಿ ಸಂಸದ ಎಂ.ವೀರಪ್ಪಮೊಯ್ಲಿ ಭೇಟಿ ನೀಡಿದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಬಿಜೆಪಿ ಸರಕಾರದಲ್ಲಿ ಸಫಲತೆಗಿಂತ ವಿಫಲತೆಗಳೇ ಹೆಚ್ಚು ಇದೆ. ಏನು ೧೦೦ಕೋಟಿ ಡೋಸ್ ಲಸಿಕೆ ಸಂಭ್ರಮಾಚರಣೆ ಮಾಡುತ್ತಿದ್ದಾರೆ ಅದು ಇಡೀ ದೇಶದ ಪ್ರತಿಯೊಬ್ಬ ಜನರಿಗೆ ಸಲ್ಲುವಂತಹದ್ದು, ಎಲ್ಲರೂ ಇದರಲ್ಲಿ ಪಾಲ್ಗೋಂಡಿದ್ದಾರೆ. ನರೇಂದ್ರ ಮೋದಿ ಒಬ್ಬರೇ ಅಲ್ಲ ಎಂದು ಹೇಳಿದರು. ಬಿಜೆಪಿ ಪಕ್ಷದ ಜವಾಬ್ದಾರಿಯುತ ಸ್ಥಾನದಲ್ಲಿರುವ ನಳಿನ್‌ಕುಮಾರ್ ಕಟೀಲ್ ಅವರು ರಾಹುಲ್ ಗಾಂಧಿಯವರ ಬಗ್ಗೆ ಟೀಕೆ ಮಾಡಿರುವುದು ಅವರ ಕೆಟ್ಟ ಸಂಸ್ಕೃತಿಯನ್ನು ತೋರಿಸುತ್ತದೆ. ಇಂತಹ ಟೀಕೆಗಳಿಂದ ರಾಹುಲ್‌ಗಾಂಧಿಯವರ ಸ್ಥಾನಮಾನ ಹೇರುತ್ತದೆ ಹೊರತು ಕಡಿಮೆಯಾಗುವುದಿಲ್ಲ. ಈ ಟೀಕೆಗಳು ಬಿಜೆಪಿ ಸಂಸ್ಕೃತಿಯನ್ನೇ ಪ್ರತಿಬಿಂಬಿಸುತ್ತದೆ. ಅದರಿಂದ ಅವರ ಪಕ್ಷದ ಘನತೆಗೂ ದಕ್ಕೆಯಾಗುತ್ತದೆ. ಸಂಭ್ರಮಾಚರಣೆ ಮಾಡುತ್ತಿರುವುದಕ್ಕೆ ಅಡ್ಡಿ ಇಲ್ಲ. ಎರಡೂ ಡೋಸ್ ಶೇ.೧೦೦ರಷ್ಟು ಆಗಿಲ್ಲ. ಕ್ರಮಿಸುವ ದಾರಿ ಹೆಚ್ಚು ಇದೆ. ಕೇಂದ್ರ ಮತ್ತು ರಾಜ್ಯದಲ್ಲಿ ತಡವಾಗಿ ಲಸಿಕೆ ಅಭಿಯಾನದಿಂದಾಗಿ ಸಾಕಷ್ಟು ಸಾವು ನೋವುಗಳು ಆಗಿದೆ. ಪರಿಹಾರ ಇವತ್ತಿಗೂ ಕೊಟ್ಟಿಲ್ಲ. ಸಂತೃಪ್ತಿ ಪಡೆಯುವಂತದ್ದಲ್ಲ. ಇಡೀ ದೇಶ ಮಾಡಿದಂತಹ ಸಾಧನೆಯಾಗಿದೆ. ಬರೀ ಮೋದಿ, ಒಂದು ಪಕ್ಷ ಮಾಡಿರುವ ಸಾಧನೆಯಲ್ಲ ಎಂದರು.

CHETAN KENDULI

ಎತ್ತಿನಹೊಳೆ ಯೋಜನೆಯು ಶೀಘ್ರವಾಗಿ ಆಗಬೇಕಿತ್ತು. ಆದರೆ ಕಾರಣಾಂತರಗಳಿಂದ ಆಗಿಲ್ಲ. ಎಲ್ಲಾ ರೀತಿಯಲ್ಲಿ ಸರಕಾರದ ದೂರದೃಷ್ಠಿ ಕೋನ ಬದಲಿಸಿಕೊಳ್ಳಬೇಕು. ನಮ್ಮ ಸರಕಾರದಲ್ಲಿ ಸಾಕಷ್ಟು ಜನಪರ ಕಾರ್ಯಗಳು ಆಗಿರುವುದು ಇಡೀ ದೇಶದ ಮತ್ತು ರಾಜ್ಯದ ಜನರಿಗೆ ತಿಳಿದಿದೆ ಎಂದರು. ಈ ವೇಳೆಯಲ್ಲಿ ಮಾಜಿ ಶಾಸಕ ಮುನಿನರಸಿಂಹಯ್ಯ, ಜಿ.ವೆಂಕಟಸ್ವಾಮಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ಸಿ.ಶ್ರೀನಿವಾಸ್, ಜಿಪಂ ಮಾಜಿ ಸದಸ್ಯರಾದ ಲಕ್ಷ್ಮೀನಾರಾಯಣ್, ಕೆ.ಸಿ.ಮಂಜುನಾಥ್, ಚೇತನ್‌ಗೌಡ, ಕೆಪಿಸಿಸಿ ರಾಜ್ಯ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಸಿ.ಜಗನ್ನಾಥ್, ಕೃಷಿಕ ಸಮಾಜದ ಅಧ್ಯಕ್ಷ ಎಸ್.ಆರ್.ರವಿಕುಮಾರ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಆರ್.ನಾಗೇಶ್, ದೇವನಹಳ್ಳಿ ತಾಲೂಕು ಖಾದಿ ಬೋರ್ಡ್ ಅಧ್ಯಕ್ಷ ಎಸ್.ನಾಗೇಗೌಡ, ಯುವ ಕಾಂಗ್ರೆಸ್‌ನ ಚಂದನ್‌ಗೌಡ, ಪುರಸಭಾ ಸದಸ್ಯ ಮುನಿಕೃಷ್ಣ, ಖಾಸಗಿ ಬೈಕ್ ಶೋರೂಂನ ಮಾಲಿಕ ಶಿವಮೂರ್ತಿ, ಚಂದನ್‌ಕುಮಾರ್, ಯಶೋದ್‌ಕುಮಾರ್, ಕಿಶೋರ್‌ಕುಮಾರ್ ಹಾಗೂ ಇತರರು ಇದ್ದರು. 

Be the first to comment

Leave a Reply

Your email address will not be published.


*