ರಾಜ್ಯ ಸುದ್ದಿಗಳು
ಭಟ್ಕಳ್
*ಪತ್ರಕರ್ತರ ವಿರುದ್ಧ ಪತ್ರಕರ್ತರೇ ಮನವಿ ಪತ್ರ ಸಲ್ಲಿಸೋದು ಸರಿಯಾದ ಬೆಳವಣಿಗೆ ಅಲ್ಲವೇ ಅಲ್ಲ. ಪತ್ರಕರ್ತರಿಗೆ, ಪತ್ರಕರ್ತರೇ ಅವಮಾನಿಸಿದಂತೆ ಹೌದಲ್ಲವೇ…..?*ಕರ್ನಾಟಕ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಪತ್ರಕರ್ತರಾದವರು ಸತ್ಯ ಹರಿಶ್ಚಂದ್ರನ ಮೊಮ್ಮಗನಂತೆ ಫೋಜು ನೀಡುತ್ತಿರುವುದನ್ನು ನೋಡಿದರೆ ನಿಜವಾಗಿಯೂ ನನಗೆ ಬಹಳ ಖೇದವೆನಿಸುತ್ತದೆ. ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಪತ್ರಕರ್ತರು ನಡೆದುಕೊಳ್ಳುತ್ತಿರುವ ರೀತಿ ನೀತಿಗಳು ನೋಡಿದರೆ ತುಂಬಾ ಬೇಸರವಾಗುತ್ತದೆ.ಇವರಿಗೆ ಅನೇಕ ವಿವಿಧ ಸೌಲಭ್ಯಗಳು ಸಿಗುವಂತಿದ್ದರೆ ಇನ್ನೆಷ್ಟು ಜಗಳವಾಡುತ್ತಿದ್ದರೋ ಅಥವಾ ಇನ್ನೆಷ್ಟು ಪತ್ರಕರ್ತರ ಬದುಕಿಗೆ ಕೊಳ್ಳೆ ಇಡುತ್ತಿದ್ದರೋ ಆ ದೇವರೇ ಬಲ್ಲ. ಈ ಪತ್ರಕರ್ತ ಮಹಾಶಯರಿಗೆ ನಾನು ಹೇಳುವುದಿಷ್ಟೇ ಮೊದಲು ನಿಮ್ಮಲ್ಲಿ ಒಗ್ಗಟ್ಟಿನ ಮಂತ್ರ ಜಪಿಸಿ, ಎಲ್ಲಾ ಪತ್ರಕರ್ತರು ಒಂದೇ ಎಂಬ ಭಾವನೆ ಇಟ್ಟುಕೊಂಡು ಮಾನವೀಯತೆ ತೋರುವುದು ಕಲಿಯಿರಿ ಎನ್ನುವ ಅಭಿಪ್ರಾಯ ನನ್ನದು. ನೀವು ಪತ್ರಕರ್ತರೇ ಅವರೂ ಪತ್ರಕರ್ತರೇ ಹೀಗಿರುವಾಗ ತಾರತಮ್ಯ ನೀತಿ ಯಾಕೆ…? ದಾರಿ ತಪ್ಪುತ್ತಿರುವ ಪ್ರಿಂಟ್ ಮಾದ್ಯಮ ಪತ್ರಕರ್ತರು, ಆದರೆ ಯಾವುದೇ ಪತ್ರಿಕೆಯ ಸಂಪಾದಕರಾದವರು ಯಾರೂ ಈ ಬಗ್ಗೆ ತಾರತಮ್ಯ ನೀತಿ ಅನುಸರಿಸುತ್ತಿಲ್ಲ. ಆಯಾ ಪತ್ರಿಕೆಯ ವರದಿಗಾರರು ಮಾತ್ರ ಮಾಡುತ್ತಿರುವ ತಾರತಮ್ಯ ಎಂಬ ಅರಿವು ಎಲ್ಲೆಡೆ ಕೇಳಿಬರುತ್ತಿದೆ.
ಬೇರೆ ಬೇರೆ ಕ್ಷೇತ್ರಗಳಲ್ಲಿ ಅಸೂಯೆ ಪಡುವಂತಹ ನಾಗರಿಕರನ್ನು ಕಂಡಿದ್ದೇವೆ. ಪತ್ರಿಕೆಯ ಕ್ಷೇತ್ರದ ವರದಿ ಮಾಡುವ, ಮತ್ತು ಸಮಾಜದ ಏಳಿಗೆಗೆ ಚಿಂತಿಸುವ ಪತ್ರಕರ್ತರಾದವರಲ್ಲಿ ಅಸೂಯೆ ಪಡುವಂತಹ ಗುಣಗಳು ಕಾಣುತ್ತಿರುವುದು ನಿಜಕ್ಕೂ ಬೇಸರದ ಸಂಗತಿಯೆಂದರೆ ತಪ್ಪಾಗಲಾರದು. ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ಪತ್ರಕರ್ತರ ಮೇಲೆ ಹಲ್ಲೆ, ಗಲಾಟೆ, ಬೆದರಿಕೆ ಹಾಕುವ ಕೆಲಸ ಮತ್ತು ಭ್ರಷ್ಟಾಚಾರ ಮಾಡುವ ಮತ್ತು ಸಮಾಜ ಘಾತುಕ ಶಕ್ತಿಗಳನ್ನು ಪೂಜಿಸುವ ಕೆಲಸ ನಮ್ಮ ಪತ್ರಕರ್ತರಿಂದಲೇ ನಡೆಯುತ್ತಿರಬಹುದೆನೋ ಎಂಬ ಸಂಶಯವೂ ಬಾರದೇ ಇರಲ್ಲ. ಮಾಧ್ಯಮದ ಗಂಧ,ಗಾಳಿ ಗೊತ್ತು,ಗುರಿ ಇಲ್ಲದ ಸಂವಿಧಾನದ ಚೌಕಟ್ಟಿನ ಅಡಿಯಲ್ಲಿ ಬರುವ ಮಾಧ್ಯಮದ ಕಾಯ್ದೆ ಕಾನೂನುಗಳು ಅರಿಯದವರು ಮತ್ತು ಪತ್ರಿಕೆಯ ವರದಿಗಾರರು ಆಗಿರುವ ನಿಮಗೆ ಶಾಂತಿ, ನೆಮ್ಮದಿ ಹಾಗೂ ಸೌಹಾರ್ದತೆಯಿಂದ, ಸ್ನೇಹ ಭ್ರಾತೃತ್ವದಿಂದ ಒಗ್ಗಟ್ಟಿನಿಂದ ಕೆಲಸ ಮಾಡುವುದನ್ನು ಕಲಿತರೆ ನಿಮಗೆ ಎಲ್ಲರಿಗೂ ಒಳ್ಳೆಯದು. ಅದನ್ನು ಬಿಟ್ಟು ದ್ವೇಷ, ಅಸೂಯೆ ಪಡುವಂತೆ ಬದುಕುವ ನಿಮಗಿದು ಸರಿಯಲ್ಲ. ಪತ್ರಕರ್ತರಿಗೆ ಇಂತಹ ಗುಣಗಳು ಯಾವುದೇ ಕಾರಣಕ್ಕೂ ಇರಬಾರದು. ನಿಮ್ಮನ್ನು ನೀವು ಸುಧಾರಣೆ ಆಗೋದು, ಮೇಲಾಗಿ ಪತ್ರಕರ್ತರೆಲ್ಲರ ಕುಟುಂಬಗಳ ಬಗ್ಗೆ ಗಮನ ಹರಿಸೋದು ಬಿಟ್ಟು ಪತ್ರಕರ್ತರ ಕುಟುಂಬಗಳನ್ನೇ ಆತಂಕದಲ್ಲಿ ನೋಡುವಂತೆ ಮಾಡೋದು ಪತ್ರಕರ್ತರ ನಿಜವಾದ ಕೆಲಸವಲ ಎನ್ನುವ ಚಿಂತನೆ ಎಲ್ಲರಿಗೂ ಬರಲಿ.ನಿಜವಾದ ಪತ್ರಕರ್ತರು ಮಾಡುವ ಕೆಲಸ ಇದಲ್ಲ, ಪತ್ರಿಕೆಯ ಕಾಳಜಿ, ಸಂಪಾದಕರ ಬಗ್ಗೆ ಒಲವು, ಪತ್ರಿಕೆಗಳ ಅಳಿವು ಉಳಿವಿನ ಬಗ್ಗೆ ಗಮನ ಹರಿಸದೆ, ಕೇವಲ ಹಣದ ದಾಹಕ್ಕೆ ಪರಿತಪಿಸುವ ವರದಿಗಾರರು, ಮತ್ತು ಪತ್ರಕರ್ತರಿಂದ ಮಾತ್ರ ಈ ರೀತಿಯ ತಾರತಮ್ಯ ನೀತಿಅನುಸರಿಸುತ್ತಿರುವುದು ಮಾತ್ರ ಕಂಡು ಬರುತ್ತಿದೆ.
ಪ್ರಜಾಪ್ರಭುತ್ವ ಮತ್ತು ಅದರ ಆಶಯಗಳ ಬೆನ್ನಿಗೆ ಚೂರಿ ಹಾಕುವ ಪತ್ರಕರ್ತರಿಂದ ಮಾತ್ರ ಈ ಕೆಲಸಗಳು ನಡೆಯುತ್ತಿವೆ. ಪ್ರತಿಯೊಂದು ಜಿಲ್ಲೆಯ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳು ಸೂಕ್ತ ರೀತಿಯಲ್ಲಿ ಗಮನ ಹರಿಸಬೇಕು ಎನ್ನುವುದು ನಮ್ಮ ಪತ್ರಿಕೆಯು ವಿನಂತಿಸುತ್ತದೆ. ಯಾಕೆಂದರೆ ಕೇವಲ ತಮ್ಮ ತಮ್ಮ ಸ್ವಾರ್ಥ ಬೇಳೆ ಬೇಯಿಸಿಕೊಳ್ಳಲು ಮುಂದಾಗಿರುವ ಕೆಲವೊಂದು ಪತ್ರಿಕೆಗಳ ಪತ್ರಕರ್ತರ ಮೇಲೆ ಸೂಕ್ತ ನಿಗಾ ವಹಿಸಬೇಕು.ಸತ್ಯಾ ಸತ್ಯತೆಯನ್ನು ಅರಿತುಕೊಂಡು, ತಿಳಿದುಕೊಂಡು ಸಂಬಂಧ ಪಟ್ಟ ಹಿರಿಯ ಅಧಿಕಾರಿಗಳು ಸೂಕ್ತ ಕಾನೂನು ಕ್ರಮಕ್ಕೆ ಮುಂದಾಗಬೇಕು.ಪಕ್ಷಾಂತರಿಗಳಿಗೆ – ರಾಜಕೀಯ ಬ್ರೋಕರ್ ಗಳಿಗೆ – ಸಾರ್ವಜನಿಕ ಹಣದ ದರೋಡೆಕೋರರಿಗೆ ಮಣೆ ಹಾಕಿ ಮಾನವೀಯ ಮೌಲ್ಯಗಳ ಕುಸಿತಕ್ಕೆ ಕಾರಣರಾದ ಕೆಲವೊಂದು ಪತ್ರಕರ್ತರು ಪ್ರಜಾಪ್ರಭುತ್ವದ ನಾಲ್ಕನೆಯ ಅಂಗ…. ಪತ್ರಿಕಾ ರಂಗವನ್ನು ಇತ್ತೀಚಿನ ದಿನಗಳಲ್ಲಿ ಗೌರವಿಸದೇ ಅದನ್ನು ಹಾಳು ಮಾಡುತ್ತಿರುವವರ ಸಂಖ್ಯೆ ಹೆಚ್ಚಾದಂತೆ ಕಂಡು ಬರುತ್ತಿದೆ ಇಂತಹವರ ಮೇಲೆ ನಿಮ್ಮ ಗಮನವಿರಲಿ.ವಿರೋಧ ಪಕ್ಷವಾಗಿ ಕೆಲಸ ಮಾಡಿ ಜನರ ಆಶೋತ್ತರಗಳಿಗೆ ಸ್ಪಂದಿಸಬೇಕಾಗಿದ್ದ ಈ ಮಾಧ್ಯಮಗಳು ಆಳುವವರ ತುತ್ತೂರಿಯಾಗಿ ಧ್ವನಿ ಇಲ್ಲದವರ ಸಮಾಧಿಯ ಮೇಲೆ ಮಹಲು ಕಟ್ಟಲು ಹೊರಟ ಕೆಲವೊಂದು ಪತ್ರಕರ್ತರ ಮೇಲೆ ನಿಮ್ಮ ಸೂಕ್ತ ಗಮನವಿರಲಿ.
ಸಮಾಜದ ಪ್ರಾಮಾಣಿಕ ಮತ್ತು ಪ್ರಬುದ್ಧ ವ್ಯಕ್ತಿಗಳಿಗೆ ವೇದಿಕೆ ಕಲ್ಪಿಸುವ ಜವಾಬ್ದಾರಿ ನಿರ್ವಹಿಸದೆ ಕೂಗು ಮಾರಿಗಳಿಗೆ ಅವಕಾಶ ಕಲ್ಪಿಸಿ ಇಡೀ ವ್ಯವಸ್ಥೆ ಅಸಹಿಷ್ಣುತೆ ಅಸಮಾಧಾನದಿಂದ ಭುಗಿಲೇಳುವಂತೆ ಮಾಡುವ ಅಸೂಯೆ ಪಡುವಂತಹ ಪತ್ರಕರ್ತರ ಮೇಲೆ ನಿಮ್ಮ ಗಮನವಿರಲಿ.ಚಿಂತನೆ – ಅಧ್ಯಯನ – ದೂರದೃಷ್ಟಿ – ವಿಶಾಲ ಮತ್ತು ಸೂಕ್ಷ್ಮ ಮನಸ್ಥಿತಿ – ಜನಪ್ರಿಯತೆ ಮೀರಿ ಸತ್ಯ ಮತ್ತು ವಾಸ್ತವದ ಹುಡುಕಾಟ ಮಾಡಬೇಕಿದ್ದ ಈ ಪತ್ರಕರ್ತರು ಅತ್ಯಂತ ಕೆಳ ಮಟ್ಟದ ಭಾಷೆ ವಿಷಯ ಸಂಗ್ರಹ ಮತ್ತು ಗ್ರಹಿಕೆ, ನಿರೂಪಣೆ ಹಾಗೂ ಚರ್ಚಾ ವಿಧಾನಗಳನ್ನೇ ಮಲಿನ ಗೊಳಿಸಿ ಪತ್ರಿಕಾ ಧರ್ಮವನ್ನೇ ಕತ್ತು ಹಿಸುಕಿ ಪತ್ರಿಕಾಧರ್ಮವನ್ನೇ ಹಾಳು ಮಾಡುವಂತಹ ಭ್ರಷ್ಟರಾಗಿದ್ದಾರೆ……? ಇಂತವರ ಮೇಲೆ ನಿಮ್ಮ ಸೂಕ್ತ ನಿಗಾ ಇರಲಿ.
ಒಳ್ಳೆಯ ಅಂಶಗಳು ಮತ್ತು ಒಳ್ಳೆಯ ವ್ಯಕ್ತಿಗಳು ಒಳ್ಳೆಯ ವಿಚಾರಗಳನ್ನು ಹೆಚ್ಚು ಪ್ರಸಾರ ಮಾಡುವ ಮೂಲಕ ಸಮಾಜ ಮುಖಿ ಚಿಂತನೆಗಳಿಗೆ ಪ್ರೋತ್ಸಾಹ ನೀಡಿ, ಕೆಟ್ಟ ವಿಷಯ ಕೆಟ್ಟ ವ್ಯಕ್ತಿಗಳಿಗೆ ವಿರೋಧ ಮಾಡಬೇಕಿದ್ದ ಈ ಪತ್ರಕರ್ತರು ವಿಕೃತ ಮನಸ್ಥಿತಿಯವರನ್ನು ಪ್ರೋತ್ಸಾಹಿಸುವ ಮೂಲಕ ಸಮಾಜಕ್ಕೆ ಹುಚ್ಚು ಹಿಡಿಸುವ ಕೆಲಸ ಮಾಡುತ್ತಿದ್ದಾರೆ…. ಇಂತಹ ಪತ್ರಕರ್ತರ ಕಡೆ ತಮ್ಮ ಗಮನವಿರಲಿ.ಇಂದು ರಾಜ್ಯದಲ್ಲಿ ಜ್ವಲಂತ ಸಮಸ್ಯೆಗಳು ಕಣ್ಣೆದುರಿಗಿವೆ. ಅವುಗಳ ಬಗ್ಗೆ ತಿಕ್ಕಿ ಹೆಕ್ಕಿ ಹೊರಗೆ ತಂದು ಪತ್ರಿಕೆಗಳಲ್ಲಿ ಸುದ್ದಿಗಳು ಪ್ರಕಟಿಸೋದು ಬಿಟ್ಟು ಕೇವಲ ಪತ್ರಕರ್ತರ ಮೇಲೆ ಪತ್ರಕರ್ತರೇ ರೇಗಾಡುವುದು, ಅಸೂಯೆ ಪಡುವಂತಹ ಕೆಲಸ ಮಾಡುತ್ತಿರುವ ಇವರನ್ನು ಪತ್ರಕರ್ತರು ಎಂದು ಕರೆಯಬೇಕೆ ಅಥವಾ ಮತ್ತೇನೆನ್ನಬೇಕೋ ಎಂಬ ನಿರ್ಧಾರ ನಿಮ್ಮ ವಿವೇಚನೆಗೆ ಸೇರಿದ್ದು…..ರೈತ ಹೋರಾಟದ ಅನೇಕ ಕಾರ್ಯಕ್ರಮಗಳು, ಕೋಮು ಸಾಮರಸ್ಯದ ವಿಚಾರ ಸಂಕಿರಣಗಳು, ಭ್ರಷ್ಟಾಚಾರ ವಿರುದ್ಧದ ಸಂವಾದಗಳು, ಸಾಹಿತ್ಯದ ಚಟುವಟಿಕೆಗಳನ್ನು ನಿರ್ಲಕ್ಷಿಸಿ ಒಂದು ಉತ್ತಮ ಸಮಾಜ ನಿರ್ಮಿಸುವುದು ಹೇಗೆ ಎಂಬ ಕನಿಷ್ಠ ತಿಳಿವಳಿಕೆ ಇಲ್ಲದ ಕೆಟ್ಟ ಪತ್ರಕರ್ತರನ್ನು ಹೇಗೆ ಬಗ್ಗು ಬಡಿಯಬೇಕೆಂದು ಚಿಂತಿಸುವ ಸಮಯವಿದು.
ಸಂವಿಧಾನದ ಆಶಯದಂತೆ ಸಾರ್ವಜನಿಕರಲ್ಲಿ ವೈಚಾರಿಕ ಪ್ರಜ್ಞೆ ಬೆಳೆಸಬೇಕಾದ ಜವಾಬ್ದಾರಿ ಹೊತ್ತಿದ್ದ ಮಾಧ್ಯಮಗಳು ಮೂಡ ನಂಬಿಕೆಯ ಪ್ರಚಾರ ರಾಯಭಾರಿಗಳಾಗಿದ್ದು ಪ್ರಜಾಪ್ರಭುತ್ವಕ್ಕೆ ಬಗೆದ ದ್ರೋಹ….ಎಂದರೂ ತಪ್ಪಾಗಲಾರದು ಈ ವಿಷಯದತ್ತ ನಮ್ಮ ನಾಡಿನ ಹಿರಿಯ ಅಧಿಕಾರಿಗಳು ಸೂಕ್ತ ಗಮನ ನೀಡಬೇಕಾಗುತ್ತದೆ ಎಂದು ನನ್ನ ಅಭಿಪ್ರಾಯ ತಿಳಿಸಿದ್ದೇನೆ.ರಾಜ್ಯದ ಜನರ ನಿಜವಾದ ಭಾವನೆಗಳನ್ನು – ಅಸಹಾಯಕ ಧ್ವನಿಗಳನ್ನು ಗ್ರಹಿಸುವಷ್ಟು ಪ್ರಬುದ್ಧತೆ, ವಿಶಾಲತೆ, ತಾಳ್ಮೆ ವಿವೇಚನೆ ಬಹುತೇಕ ಮಾಧ್ಯಮ ಮಿತ್ರರಿಗೆ ಇಲ್ಲ. ಹೌದು ಈಗಲೂ ರಾಜ್ಯದಲ್ಲಿ ಕೆಲವು ಅತ್ಯುತ್ತಮ ಪತ್ರಕರ್ತರು ಇದ್ದಾರೆ. ತುಂಬಾ ಸೂಕ್ಷ್ಮ ಗ್ರಹಿಕೆಯ ಬರಹಗಳು ಈಗಲೂ ಮುದ್ರಣ ಮಾಧ್ಯಮದಲ್ಲಿ ಬರುತ್ತದೆ. ಆದರೆ ಈ ಎಲೆಕ್ಟ್ರಾನಿಕ್ ಮಾಧ್ಯಮಗಳ ಅಬ್ಬರದಲ್ಲಿ ಅದು ಕ್ಷೀಣವಾಗುತ್ತಿದೆಯಾ…..? ಮತ್ತೆ ನೈಜ ಪತ್ರಕರ್ತರು, ವಾಸ್ತವ ಸುದ್ದಿಗಳು, ಜವಾಬ್ದಾರಿ ಮಾಹಿತಿಗಳು, ವೈಚಾರಿಕ ಚಿಂತನೆಗಳಿಗೆ ಪ್ರಾಮುಖ್ಯತೆ ಸಿಗುವ ಕಾಲವನ್ನು ಸಂದರ್ಭವನ್ನು ಮರು ಸೃಷ್ಟಿ ಮಾಡುವ ಜವಾಬ್ದಾರಿಯನ್ನು ಪ್ರಜ್ಞಾವಂತರಾದ ನಾವು ಪ್ರಾಮಾಣಿಕ ಪತ್ರಕರ್ತರೆಲ್ಲರೂ ಸೇರಿ ಒಗ್ಗಟ್ಟಿನ ನಿರ್ಧಾರ ತೆಗೆದುಕೊಳ್ಳೋಣ ಎಂದು ಎಲ್ಲಾ ಪತ್ರಿಕೆಗಳ ಮತ್ತು ಮಾಧ್ಯಮಗಳ ಪತ್ರಕರ್ತರಲ್ಲಿ ನನ್ನ ಆತ್ಮೀಯ ಕಳಕಳಿಯ ಪ್ರೀತಿ ಪೂರ್ವಕ ಮನವಿ ಮಾಡಿಕೊಳ್ಳುತ್ತಾ…..ದ್ವೇಷ ಬಿಡು, ಪ್ರೀತಿ ಮಾಡು ಎಂಬ ಸಂದೇಶ ಸಾರುವ.ಡಾ. ಎಸ್ ಎಸ್ ಪಾಟೀಲ್ ಸಂಪಾದಕರು ವಿಶ್ವ ದರ್ಶನ ಕನ್ನಡ ದಿನಪತ್ರಿಕೆ ಹುಬ್ಬಳ್ಳಿ9611766539
Be the first to comment