ಜೆ ಡಿ ಎಸ್ ಮತ್ತು ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ರೈತರೊಂದಿಗೆ ವಿದ್ಯುತ್ ಘಟಕಕ್ಕೆ ಮುತ್ತಿಗೆ

ವರದಿ : ಉಮೇಶ ಅಫಜಲಪುರ


ನೊಂದ ರೈತನಿಗೆ ಶಿವುಕುಮಾರ ನಾಟಿಕಾರ ಅವರಿಂದ ಹತ್ತು ಸಾವಿರ ಧನ ಸಹಾಯ


ಅಫಜಲಪುರ: ತಾಲೂಕಿನ ಕರಜಗಿ ವಲಯದ ರೈತರ ಜಮಿನುಗಳಿಗೆ ಸಮಪ೯ಕವಾಗಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ ದಿನಕ್ಕೆ ಹಗಲು ಹೊತ್ತಿನಲ್ಲಿ 7 ಗಂಟೆಗಳ ಕಾಲ ಸಮರ್ಪಕವಾಗಿ ವಿದ್ಯುತ್ ಕಲ್ಪಿಸಿ ಕೊಡಬೇಕೆಂದು ಕರಜಗಿಯ ಜೇಸ್ಕಾಂ ಘಟಕಕ್ಕೆ ಜೆಡಿಎಸ್ ಮತ್ತು ಕರವೇ ಬೆಂಬಲದೊಂದಿಗೆ ರೈತರು ಸೇರಿ ಮುತ್ತಿಗೆ ಹಾಕಿದರು.

ನಂತರ ಮಾತನಾಡಿದ ಜೆಡಿಎಸ್ ಮುಖಂಡರಾದ ಶಿವುಕುಮಾರ ನಾಟಿಕಾರ ಅವರು ರೈತರ ಸಮಸ್ಸೆಗಳನ್ನು ಆದಷ್ಟು ಬೇಗನೆ ಇಡೇರಿಸುವ ಕುರಿತು ಕರಜಗಿಯ ಜೇಸ್ಕಂ ಅಧಿಕಾರಿಗೆ ಮನವಿ ಸಲ್ಲಿಸಿದ್ದೆವೆ ಕರಜಗಿ ಗ್ರಾಮದ ರೈತರ ಹೊಲಗಳಿಗೆ 7 ಗಂಟೆಗಳ ಕಾಲ ಸಮರ್ಪಕವಾಗಿ ವಿದ್ಯುತ್ ವದಗಿಸಬೇಕು ಮತ್ತು ಕರ್ನಾಟಕ ರಾಜ್ಯದಲ್ಲಿ ಜಮಿನುಗಳಲ್ಲಿ ವಾಸಮಾಡುತ್ತಿರುವ ರೈತರ ಜಮಿನುಗಳಿಗೆ ಸಿಂಗಲ್ ಫೇಸ್ ವಿದ್ಯುತ ಕೋಡಲಾಗಿದೆ ಆದರೆ ಕರಜಗಿ ಭಾಗದ ಹೊಲಗಳಲ್ಲಿ ವಾಸಮಾಡುತ್ತಿರುವ ರೈತರ ಜಮಿನುಗಳಿಗೆ ಇಲ್ಲಿವರೆಗೆ ರಾತ್ರಿ ಹೊತ್ತು ಸಿಂಗಲ್ ಪೇಸ್ ನೀಡಿರಿವುದಿಲ್ಲ ಆದ ಕಾರಣ ತಾವುಗಳು ಮುಂದಿನ ದಿನಗಳಲ್ಲಿ ಒಂದು ಫೇಸ್ ಸಂಜೆ 6 ಗಂಟೆಯಿಂದ ಬೆಳಿಗ್ಗೆ 6 ಗಂಟೆವರೆಗೂ ವಿದ್ಯುತ ಕಲ್ಪಿಸಿ ಕೊಡಬೇಕು ಕಲ್ಪಿಸಿ ಕೊಡದೆ ಇದ್ದ ಪಕ್ಷದಲ್ಲಿ ಜಾತ್ಯತೀತ ಜನತಾ ದಳ ರೈತರ ಪರ ಸದಾ ಸಿದ್ದವಿದ್ದು ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಕೈಗೊಳ್ಳಲಾಗುವುದು ಎಂದು ಹೇಳಿದರು
ನಂತರ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕ ಅಧ್ಯಕ್ಷರಾದ ರಾಜಕುಮಾರ ಉಕಲಿ ಕರಜಗಿ ವಲಯ ಕರವೇ ಅಧ್ಯಕ್ಷರಾದ ಮಂಜುನಾಥ ನಾಯಕೋಡಿ ಮಾತನಾಡಿದರು

ಈ ಸಂದರ್ಭದಲ್ಲಿ,, ತಾಲೂಕ ಜೆಡಿಎಸ್ ಅಧ್ಯಕ್ಷ ಜಮೀಲ್ ಗೌಂಡಿ , ಶ್ರೀಕಾಂತ್ ದಿವಾಣಜಿ ಅಮರ್ ರಜಪೂತ, ಸಾತಪ ಚಿನಮಳ್ಳಿ, ಬಸವರಾಜ್ ಈಸರಗೊಂಡ್, ಭಗವಂತ ನಾಯಕೋಡಿ, ಅಬ್ದುಲ್ ಗುತ್ತೇದಾರ, ಭಗವಂತ ಕರುಟಿ, ಶರಣು ಮೇತ್ರಿ, ಗುಂಡು ಯಮಗಾರ್, ರವಿಕುಮಾರ್ ಅಳೂರ್, ರವಿ ಸುತಾರ್, ಸುನಿಲ್ ಮಟಪತಿ, ಶ್ರೀಶೈಲ್ ಕುಂಬಾರ್, ರವಿಕುಮಾರ ಸಲಗಾರ, ಗುಲಾಬ್ ಚೌದ್ರಿ, ಶರಣು ಪರಿಟ್, ಯಲ್ಲಾಲಿಂಗ ಪೂಜಾರಿ ಸೇರಿದಂತೆ ಗ್ರಾಮದ ರೈತರು ಗ್ರಾಮಸ್ಥರು ಉಪಸ್ಥಿತರಿದ್ದರು

Be the first to comment

Leave a Reply

Your email address will not be published.


*