ಕೋವಿಡ್ ಲಸಿಕಾ ಆಂದೋಲನಾ ಭಾಗೀದಾರರಿಗೆ ಪ್ರಶಸ್ತಿ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ: ಯುನೈಟೆಡ್ ವೇ ಬೆಂಗಳೂರು ಸಂಸ್ಥೆ, ಕೊಲಿನ್ಸ್ ಏರೋಸ್ಪೆಸ್ ಮತ್ತು ಜಿಲ್ಲಾ ಪಂಚಾಯತಿ ಬಾಗಲಕೋಟೆ ಇವರ ಸಹಯೋಗದಲ್ಲಿ ಕೋವಿಡ್ ಲಸಿಕಾ ಆಂದೋಲನಾ ಭಾಗೀದಾರರಿಗೆ ಪ್ರಶಸ್ತಿ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ್ ಸಂಪನ್ಮೂಲ ಕೇಂದ್ರದಲ್ಲಿ ನಡೆಯಿತು.

ಗಿಡಕ್ಕೆ ನೀರುಣಿಸುವ ಮೂಲಕ ಕಾರ್ಯಕ್ರಮವನ್ನು ಮಾನ್ಯ ಸಿದ್ದಲಿಂಗೇಶ್ವರ ಉಕ್ಕಲಿ ಉಪ ಕಾರ್ಯದರ್ಶಿ ಜಿ.ಪಂ ಬಾಗಲಕೋಟ ನೆರವೇರಿಸಿದರು.ಉದ್ಘಾಟನಾ ಮಾತುಗಳಲ್ಲಿ ಕೋವಿಡ ಲಸಿಕೆ ಹಾಕುವದರಲ್ಲಿ ಯುನೈಟೆಡ್ ವೇ ಬೆಂಗಳೂರು ಸಂಸ್ಥೆಯವರು ತುಂಬಾ ಚನ್ನಾಗಿ ಕೆಲಸ ನಿರ್ವಹಣೆ ಮಾಡಿದ್ದಾರೆ. ಆರೋಗ್ಯ ಇಲಾಖೆಯವರು ಒಳ್ಳೆಯ ರೀತಿಯಲ್ಲಿ ಕೆಲಸ ಮಾಡಿದ್ದಾರೆಂದು ತಿಳಿಸಿದರು.

ಅರೋಗ್ಯ ಇಲಾಖೆ ಅಷ್ಟೇ ಅಲ್ಲದೆ ವಿವಿಧ ಇಲಾಖೆಗಳು ಬಾಗಲಕೋಟೆ ಕೋವಿಡ್ ನೋಡಲ್ ಎನ್.ಜಿ.ಓ ಸಂಸ್ಥೆಯಾದ ರೀಚ್ ಸಂಸ್ಥೆಯವರು ತುಂಬಾ ಉತ್ಸಾಹದಿಂದ ಕೆಲಸ ಮಾಡಿದ್ದಾರೆಂದು ಪ್ರಶಂಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿರುವಂತ ಶ್ರೀಮತಿ ಜಯಶ್ರೀ ಎಮ್ಮಿ ಜಿಲ್ಲಾ ಅರೋಗ್ಯ ಅಧಿಕಾರಿಗಳು ಬಾಗಲಕೋಟೆ ಇವರು ಬಾಗಲಕೋಟೆಯನ್ನು 100% ಲಸಿಕೆ ಹಾಕಿಸುವದರಲ್ಲಿ ಎಲ್ಲರೂ ಭಾಗಿಯಾಗಿದ್ದಾರೆ. ಕೋವಿಡ್ ಸಮಯದಲ್ಲಿ ಆಶಾ, ಅಂಗನವಾಡಿ ಎಲ್ಲರು ಸೈನಿಕರಂತೆ ಕೆಲಸ ಮಾಡಿದ್ದೀರಿ, ಈ ಕಾರ್ಯಕ್ರಮವು ತಮ್ಮ ಸೇವೆಗೆ ಗೌರವದ ಜೊತೆಗೆ ಪ್ರೋತ್ಸಹ ನೀಡುವುದಾಗಿದೆ.

ಶ್ರೀ ಗುರುತೇಜ್ ಯೋಜನಾಧಿಕಾರಿಗಳು ಸಿ.ಎಸ್.ಆರ್. ಕೊಯಲಿನ್ಸ್ ಏರೋಸ್ಪೆಸ್ ಬೆಂಗಳೂರು,ಬಾಗಲಕೋಟ ಮತ್ತು ಬೆಳಗಾವಿಯಲ್ಲಿ ನಮ್ಮ ಕೋವಿಡ್ ಲಸಿಕಾ ಆಂದೋಲನದ ಬಗ್ಗೆ ಕೆಲಸ ಮಾಡಿದ್ದಾರೆ 100% ಲಸಿಕೆ ಹಾಕಿಸುವದರಲ್ಲಿ ಯಶಸ್ವಿ ಆಗಿದ್ದಾರೆ ಎಂದು ತಿಳಿಸಲು ಸಂತೋಷವಾಗುತ್ತದೆ. ಕೊಯಲಿನ್ಸ್ ಏರೋಸ್ಪೆಸ್ ಯು ವಿಮಾನದ ಬಿಡಿ ಭಾಗಗಳನ್ನು ತಯಾರಿಸುವ ಒಂದು ಕಂಪನಿಯಾಗಿದ್ದು ನಮ್ಮ ಕಂಪನಿಯಿಂದ ಕೋವಿಡ್ ಸಮಯದಲ್ಲಿ ಆಹಾರ ಕಿಟ್ ಇತರೆ ಸಹಾಯ ಕೆಲಸಗಳನ್ನು ಮಾಡಿದ್ದು ಲಸಿಕೆಗೆ ಬಾಗಲಕೋಟೆ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ನಮ್ಮ ಕಡೆಯಿಂದ ಆಗುವ ಸಹಾಯ ಮಾಡಬೇಕೆಂದು ತಿರ್ಮಾನಿಸಿ ಯುನೈಟೆಡ್ ವೇ ಬೆಂಗಳೂರು ಸಂಸ್ಥೆಯ ಸಹಕಾರದೊಂದಿಗೆ ಕೋವಿಡ್ ಲಸಿಕಾ ಆಂದೋಲನದ ಮೂಲಕ ಮಾಡಲಾಗಿದೆ.

ಈ ಮಹತ್ತರ ಕಾರ್ಯಕ್ಕೆ ಜಿಲ್ಲಾಡಳಿತ ಸಹಕಾರ ನೀಡಿದ್ದು ಎಲ್ಲರೂ ಒಟ್ಟಾಗಿ ಸೇರಿ ಕೆಲಸ ಮಾಡಿದರೆ ಉತ್ತಮ ಪಲಿತಾಂಶ ಸಿಗುವುದು ಎಂದು ಈ ಕೋಲಾದಿಂದ ತಿಳಿದಿದೆ ಎಂದು ತಿಳಿಸಿದರು. ವೇದಿಕೆಯಲ್ಲಿದ್ದ ಗಣ್ಯಮಾನ್ಯರಿಂದ ಕೋವಿಡ್ ಲಸಿಕಾ ಆಂದೋಲನಾ ಭಾಗೀದಾರರಿಗೆ ಪ್ರಶಸ್ತಿ ಪ್ರಮಾಣ ಪತ್ರ ವಿತರಣಾ ಮಾಡಲಾಯಿತು.
ಜಿ.ಎನ್.ಸಿಂಹ ನಿರ್ದೇಶಕರು ರೀಚ್ ಸಂಸ್ಥೆ ಕೋವಿಡ್ ನೋಡಲ್ ಸಂಸ್ಥೆ, ರವರು ಅಧ್ಯಕ್ಷತೆವಹಿಸಿದ್ದು ಅಧ್ಯಕ್ಷೀಯ ಮಾತುಗಳಲ್ಲಿ ಪ್ರಾರಂಭ ದಿನಗಳಲ್ಲಿ ಲಸಿಕೆಗೆ ನಗರ ಪ್ರದೇಶಗಳಲ್ಲಿ ಸಾಲುಗಳಲ್ಲಿ ನಿಂತು ಕೆಲವು ಬಾರಿ ಕಾದು ಹಿಂದಿರುಗುತ್ತಿದ್ದರು.ಗ್ರಾಮೀಣ ಭಾಗಗಳಲ್ಲಿ ಜನರನ್ನು ಸೇರಿಸಿದಾಗ ಲಸಿಕೆಯ ಅಭಾವ ಕಾಣುತ್ತಿತ್ತು.ನಂತರ ದಿನಗಳಲ್ಲಿ ಲಸಿಕೆ ಲಭ್ಯತೆ ಹೆಚ್ಚಯಿತು ಆಗ ಕೆಲವರು ಲಸಿಕೆ ಹಾಕಿಕೊಳ್ಳಲು ಹಿಂದೇಟು ಹಾಕುತ್ತಿದ್ದರು.ಆಗ ನಮ್ಮ ಕೋಲಾ ತಂಡ ಹಾಗೂ ಆರೋಗ್ಯ ಇಲಾಖೆ ಮತ್ತು ಪಂಚಾಯತ್‌ನ ಟಾಸ್ಕ್ ಪೋರ್ಸ ಕಮಿಟಿ ಸದಸ್ಯರು ಸೇರಿ ಮನವಲಿಸಿ ಕೆಲವೊಮ್ಮೆ ಮನೆಗೆ ಹೋಗಿ ಲಸಿಕೆ ಹಾಕಲಾಯಿತು.ಈ ಮಹತ್ತರ ಕಾರ್ಯಕ್ಕೆ ಎಲ್ಲಾ ಇಲಾಖೆ ಹಾಗೂ ಅಧಿಕಾರಿ ವರ್ಗದವರು ಶ್ರಮ ಹಾಕಿ ಕಾರ್ಯನಿರ್ವಹಿಸಿದ್ದಾರೆ. ಅದರ ಪ್ರತಿಫಲವೇ 100% ಲಸಿಕೆ ಗುರಿ ಮುಟ್ಟಲು ಸಾಧ್ಯವಾಗಿರುವುದು. ತಮ್ಮಲ್ಲರಿಗೂ ಅಭಿನಂದನೆಗಳು ಎಂದು ತಿಳಿಸಿದರು.

ಶಾರದಾ ಪ್ರಾರ್ಥನೆ,ರೇಖಾಬಡಿಗೇರ್ಸ್ವಾ ಗತಿಸಿದರು.ನಿರೂಪಣೆ ಕುಮಾರ್ ನಿರ್ವಹಿಸಿದರು. ಮಹಾನಂದ ರವರು ವಂದನಾರ್ಪಣೆ ಮೂಲಕ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.

Be the first to comment

Leave a Reply

Your email address will not be published.


*