ಜಿಲ್ಲಾ ಸುದ್ದಿಗಳು
ಬಾಗಲಕೋಟ : ದೇಶದ ಚಂಡಿಗಡ ಬಿಟ್ಟರೆ ಮುಳುಗಡೆ ವಿಷಯದಲ್ಲಿ ಗಮನ ಸೆಳೆದ ಬಾಗಲಕೋಟೆ ನಗರ, ಇದೀಗ ಇಲ್ಲಿನ ಶುದ್ಧ ಗಾಳಿ-ಪರಿಸರದ ಮೂಲಕ ಮತ್ತೊಮ್ಮೆ ಗಮನ ಸೆಳೆದಿದೆ. ಇದಕ್ಕೆ ಹಿರಿಯ ಐಎಎಸ್ ಅಧಿಕಾರಿಯಾಗಿದ್ದ ಡಾ|ಎಸ್.ಎಂ. ಜಾಮದಾರ ಅವರ ದೂರದೃಷ್ಠಿಯೇ ಕಾರಣ ಎಂದು ಬಿಜೆಪಿ ಧುರೀಣ ಮಲ್ಲಿಕಾರ್ಜುನ ಚರಂತಿಮಠ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ದೇಶದ ವಿವಿಧ ನಗರಗಳ ಶುದ್ಧವಾದ ವಾತಾವರಣದ ಕುರಿತು ಸ್ವಿಜ್ಜರಲೆಂಡ್ನ ಐಕ್ಯೂ ಏರ್ ಅಂತರ್ರಾಷ್ಟ್ರೀಯ ಸಂಸ್ಥೆಯಿಂದ ಸಮೀಕ್ಷೆ ನಡೆಸಲಾಗಿದ್ದು,ಕರ್ನಾಟಕದ ಶುದ್ಧ ನಗರಗಳ ಪಟ್ಟಿಯಲ್ಲಿ ಬಾಗಲಕೋಟೆಯೂ ಸ್ಥಾನ ಪಡೆದಿರುವುದು ಹೆಮ್ಮೆ ತರಿಸುತ್ತದೆ ಎಂದು ಹೇಳಿದ್ದಾರೆ.
ವಾಯು ಮಾಲಿನ್ಯ ಕುರಿತು ನಡೆಸಿದ ಸಮೀಕ್ಷೆಯಲ್ಲಿ ಬಾಗಲಕೋಟೆಗೆ ದೊರೆತ ಅಂಕಗಳು 2.5 ಅಂದರೆ ವಾಯು ಮಾಲಿನ್ಯ ಮಾಡುವ ಕಣಗಳ ಪ್ರಮಾಣ ಕೇವಲ 2.5ರಷ್ಟಿವೆ. ಹೀಗಾಗಿ ರಾಜ್ಯದ ಮೈಸೂರು, ಹಾವೇರಿ, ಮಂಗಳೂರು ಕೂಡ ಈ ಪಟ್ಟಿನಲ್ಲಿ ಸ್ಥಾನ ಪಡೆದಿದ್ದು, ಅವುಗಳಿಗಿಂತ ಬಾಗಲಕೋಟೆಯ ಗಾಳಿ, ವಾತಾವರಣ ಅತ್ಯಂತ ಶುದ್ಧವಾಗಿದೆ. ಇಲ್ಲಿನ ವಾತಾವರಣ ಅತ್ಯಂತ ಶುದ್ಧವಾಗಿರಲು, ಇಪ್ಪತ್ತು ವರ್ಷಗಳ ಹಿಂದೆಯೇ ಯುಕೆಪಿ ಆಯುಕ್ತರೂ ಆಗಿದ್ದ ಡಾ||ಎಸ್.ಎಂ. ಜಾಮದಾರ ಅವರು ಇಲ್ಲಿನ ನವನಗರದಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ಚು ವಿವಿಧ ಸಸಿಗಳನ್ನು ನೆಟ್ಟು ಪೋಷಿಸಲು ಸೂಕ್ತ ಯೋಜನೆ ರೂಪಿಸಿ, ಅನುಷ್ಠಾನಗೊಳಿಸಿದ್ದರು. ಅಂದು ನೆಟ್ಟ ಸಸಿಗಳು, ಇಂದು ಹೆಮ್ಮರವಾಗಿ ಬೆಳೆದಿವೆ. ಹೀಗಾಗಿಯೇ ಬಾಗಲಕೋಟೆಯ ಗಾಳಿ ಶುದ್ಧವಾಗಿರಲು ಕಾರಣವಾಗಿದೆ ಎಂದು ಮಲ್ಲಿಕಾರ್ಜುನ ಚರಂತಿಮಠ ತಿಳಿಸಿದ್ದಾರೆ.
Be the first to comment