ಅರಣ್ಯವಾಸಿಗಳು ಪರಿಸರಪರ: ಅರಣ್ಯ ಇಲಾಖೆ ಅರಣ್ಯ ವಿರೋಧಿ ನೀತಿ ಬದಲಾಯಿಸಿಕೊಳ್ಳಲಿ; ರವೀಂದ್ರ ನಾಯ್ಕ

ವರದಿ-ಕುಮಾರ್ ನಾಯ್ಕ.ಭಟ್ಕಳ

ರಾಜ್ಯ ಸುದ್ದಿಗಳು 

ಕುಮಟ

ಅರಣ್ಯವಾಸಿಗಳು ಪರಿಸರಪರವಿದ್ದು ಅರಣ್ಯ ಇಲಾಖೆಯ ತಪ್ಪಾದ ನೀತಿಯಿಂದ ಜಿಲ್ಲೆಯಲ್ಲಿ ಅರಣ್ಯ ಸಾಂದ್ರತೆ ಕಡಿಮೆಯಾಗುತ್ತಿದೆ. ಅರಣ್ಯ ಇಲಖೆಯ ಅರಣ್ಯ ವಿರೋಧಿ ನೀತಿಯನ್ನು ಬದಲಾಯಿಸಿಕೊಳ್ಳಬೇಕು ಎಂದು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.ಅವರು ಕುಮಟಾ ತಾಲೂಕಿನ ಬೆಟ್ಟುಳಿಯಲ್ಲಿ 30 ವರ್ಷ ಹೋರಾಟ- 30 ಸಾವಿರ ಗಿಡ ನೆಡುವ ಕುಮಟ ತಾಲೂಕಿನ ಕಾರ್ಯಕ್ರಮಉದ್ಘಾಟಿಸಿಮಾತನಾಡುತ್ತಿದ್ದರು.ಜಿಲ್ಲೆಯ ಪರಿಸರ, ನೆಲ, ಜಲ ವಿರೋಧಿ ಆಕೇಶಿಯಾ ಗಿಡ ನೀಡುವದು, ದಟ್ಟ ಅರಣ್ಯ ಪ್ರದೇಶದಲ್ಲಿ ಕಳೆದ ಐದು ವರ್ಷದಲ್ಲಿ ಒಂದು ಲಕ್ಷಕ್ಕೂ ಮಿಕ್ಕಿ ಗಿಡಗಳನ್ನು ಕಾಮಗಾರಿ, ಅಭಿವೃದ್ಧಿ ನೆಪದಲ್ಲಿ ನರಪಡಿಸಿರುವುದು ಆರಣ್ಯ ಇಲಾಖೆಯ ಪರಿಸರ ವಿರೋಧಿ ನೀತಿಯಾಗಿದೆ. ಇಂತಹ ಪವೃತ್ತಿಯನ್ನು ಅರಣ್ಯ ಇಲಾಖೆ ಬಿಡಬೇಕೆಂದು ಅವರು ಹೇಳಿದರು.

CHETAN KENDULI

ಸಭೆಯ ಅಧ್ಯಕ್ಷತೆಯನ್ನು ತಾಲೂಕ ಅಧ್ಯಕ್ಷ ಮಂಜುನಾಥ ಮರಾಠಿ ವಹಿಸಿದ್ದರು. ಶಿರಸಿ ತಾಲೂಕ ಅಧ್ಯಕ್ಷ ಲಕ್ಷಣ ನಾಳಕ್ಕನವರ, ಜಿಲ್ಲಾ ಸಂಚಾಲಕ ಯಾಕೂಬ್ ಸಾರಂಬಿ, ಯಾಕೂಬ್ ಹೊಡೆಕರ್, ಸುರಾಜಿ ಅಬ್ದುಲ್ ಅತಿಷ್, ರಾಮಚಂದ್ರ ಪಟಗಾರ, ಮಹಮ್ಮದ ಗೌಸ್ ಹೊಡೆಕರ, ಅಬ್ದುಲ್ ಮುಖ್ಯ ಪಡುವಣಿ, ತಿಪ್ಪಯ್ಯ ವೆಂಕಪ್ಪ ಹರಿಕಾಂತ, ಬಾಬು ಸುಬ್ರಾಯ ಹರಿಕಾಂತ ಗೋಪಾಲ ಶಿವ ನಾಯ್ಕ, ಜಶ ಹುಕಾಂತ’ ಮುಂತಾದವರು ನೇತ್ರತ್ವವನ್ನು ವಹಿಸಿದ್ದರು.

Be the first to comment

Leave a Reply

Your email address will not be published.


*